ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದ ಶ್ರೀ ಲಕ್ಷ್ಮಿ ವಿದ್ಯಾ ಸಂಸ್ಥೆಗಳ ಹಾಗೂ ವಿಕ್ರಮ್ ಶಾಲೆಯ ೨೦೨೩-೨೪ನೇ ೧೪ನೇ ವಾರ್ಷಿಕೋತ್ಸವ ನಡೆಯಿತು.ಇಸ್ರೋ ಸಂಸ್ಥೆಯ ಗ್ರೂಪ್ ನಿರ್ದೇಶಕ ಎಂ.ಎನ್ ಶ್ರೀನಿವಾಸನ್ ಮಾತನಾಡಿ, ಮಕ್ಕಳು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಿದಾಗ ಜ್ಞಾನಾರ್ಜನೆ ಹೆಚ್ಚಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಯೆಂದರು. ಅಲ್ಲದೆ ಚಂದ್ರಯಾನ್- ೩ರ ಉಡಾವಣೆಯ ಬಗ್ಗೆ ವಿಡಿಯೋ ಪ್ರದರ್ಶನದ ಮೂಲಕ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಮೊಬೈಲ್, ಟಿವಿಯಿಂದ ದೂರವಿರಿ
ಬಿಇಒ ವಿ. ಉಮಾದೇವಿ ಮಾತನಾಡಿ ಒಂದೆರೆಡು ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದ್ದು ವಿದ್ಯಾರ್ಥಿಗಳು ಮೊಬೈಲ್, ಟಿ.ವಿ ಇತ್ಯಾದಿಗಳಿಂದ ದೂರ ಉಳಿದು ಸತತ ಪಠ್ಯಕ್ರಮಗಳನ್ನು ಅಭ್ಯಸಿಸುವ ಮೂಲಕ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಕರೆಯಿತ್ತರು.ಸಂಸ್ಥೆಯ ಅಧ್ಯಕ್ಷ ಸಿ.ಎನ್. ನರಸಿಂಹರೆಡ್ಡಿ ಮಾತನಾಡಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ರೀತಿಯ ಸವಲತ್ತು ಹಾಗೂ ಸೌಲಭ್ಯಗಳನ್ನು ಸಂಸ್ಥೆಯಲ್ಲಿ ಒದಗಿಸಲಾಗಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಸಿಆಡಳಿತ ಮಂಡಳಿಯ ಖಜಾಂಚಿ ಎನ್. ವಿಕ್ರಮ್ ಮಾತನಾಡಿ ಶಿಕ್ಷಕ ವೃಂದದವರು ದೈನಂದಿನ ಆಗುಹೋಗುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಗ್ಗಿಂದಾಗ್ಗೆ ಅರಿವು ಮೂಡಿಸುವ ಮೂಲಕ ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಆತ್ಮಸ್ಥೈರ್ಯವನ್ನು ಬೆಳಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದುದೆಂದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ನೃತ್ಯಗಳು, ಏಕಾಪಾತ್ರಭಿನಯ, ನಾಟಕ ಪ್ರದರ್ಶಿಸಿದರು. ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಪಿ.ಮುರಳಿಧರ್ , ಆಡಳಿತ ಮಂಡಳಿಯ ಸಿಇಓ ಪ್ರಿಯಾಂಕ ವಿಕ್ರಮ್, ಕಾರ್ಯದರ್ಶಿ ಜಗದೀಶ್ವರಿನರಸಿಂಹರೆಡ್ಡಿ, ಪ್ರಾಂಶುಪಾಲ ಮೊಹಮ್ಮದ್‌ರಫಿ ಹಾಗೂ ಎಲ್ಲ ವಿಭಾಗದ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.