ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಜಿಪಂ ಮಾಜಿ ಸದಸ್ಯ ಮಂಜಪ್ಪ

KannadaprabhaNewsNetwork |  
Published : Feb 09, 2024, 01:47 AM IST
8ಎಚ್ಎಸ್ಎನ್8 : ಎಸ್.ಜಿ.ಆರ್. ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಸಂಧರ್ಭದಲ್ಲಿ ಮಕ್ಕಳಿಗೆ ಜಾನಪದ ಸಾಹಿತ್ಯದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು ಅದರಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. | Kannada Prabha

ಸಾರಾಂಶ

ಶಾಲೆಯ ಮಕ್ಕಳು ಪುಸ್ತಕಕ್ಕೆ ಮಾತ್ರ ಸೀಮಿತವಾಗಿ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ರಾಮಾಯಣ, ಮಹಾಭಾರತ ಗ್ರಂಥ ಪುಸ್ತಕಗಳನ್ನು ಓದುವುದು ಕಂಡುಬರುತ್ತಿಲ್ಲ .ಇದರ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ಹೆಚ್ಚು ಗಮನ ನೀಡಬೇಕು.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗಿ ಪುಸ್ತಕ ಓದುವ ಹವ್ಯಾಸವನ್ನೇ ನಿಲ್ಲಿಸಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಚ್.ಎಂ. ಮಂಜಪ್ಪ ವಿಷಾದಿಸಿದರು.

ಹಳೇಬೀಡಿನ ಎಸ್.ಜಿ.ಆರ್. ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಸಂಧರ್ಭದಲ್ಲಿ ಮಕ್ಕಳಿಗೆ ಜಾನಪದ ಸಾಹಿತ್ಯದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ಅದರಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಶಾಲೆಯ ಮಕ್ಕಳು ಪುಸ್ತಕಕ್ಕೆ ಮಾತ್ರ ಸೀಮಿತವಾಗಿ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ರಾಮಾಯಣ, ಮಹಾಭಾರತ ಗ್ರಂಥ ಪುಸ್ತಕಗಳನ್ನು ಓದುವುದು ಕಂಡುಬರುತ್ತಿಲ್ಲ .ಇದರ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ಹೆಚ್ಚು ಗಮನ ನೀಡಬೇಕು. ಪುಸ್ತಕವನ್ನು ಓದಿ ಅಭ್ಯಾಸ ಮಾಡಿಕೊಂಡರೆ ಇಂತಹ ಹಲವಾರು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆಯಬಹುದು. ಹೆಚ್ಚಿನ ಪುಸ್ತಕಗಳನ್ನು ಓದಿದರೆ ಸಾಮಾನ್ಯ ಜ್ಞಾನ ಬೆಳೆಯುತ್ತದೆ ಹಾಗೂ ಮುಂದಿನ ಜೀವನವು ನಿಮಗೆ ಸುಖಕರವಾಗಿರುತ್ತದೆ ಎಂದು ತಿಳಿಸಿದರು.

ಬೇಲೂರು ತಾಲೂಕಿನ ಸೇವಾದಳದ ಅಧ್ಯಕ್ಷ ಡಿ.ಎಲ್. ಸೋಮಶೇಖರ್ ಮಾತನಾಡಿ, ಜಾನಪದ ಸಾಹಿತ್ಯ ಮರೆತು ಹೋಗುತ್ತಿರುವ ಸಂದರ್ಭದಲ್ಲಿ ಎಸ್.ಜಿ.ಆರ್ ಸಂಸ್ಥೆಯ ಕಾರ್ಯದರ್ಶಿ ಸುರೇಶ್( ಜಾನಪದ ಸಂಭ್ರಮ-೨೦೨೩) ಜಾನಪದ ಸಾಹಿತ್ಯವನ್ನು ಮೆರಗುಗೊಳಿಸಿದರು. ಇಂತಹ ಶಾಲೆಗೆ ನಾವು ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಈ ಶಾಲೆಯ ಮಕ್ಕಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡುತ್ತಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಎಸ್ಎಸ್ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಬರುತ್ತಿವೆ. ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಶಾಲೆಗೆ, ನಿಮ್ಮ ಊರಿಗೆ, ನಿಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದ ಬಹುಮಾನದ ರೂವಾರಿಗಳಾದ ಶರತ್ ನಿಂಗಪ್ಪ ಮಾತನಾಡಿ, ಇಂದಿನ ಮಕ್ಕಳು ಕನ್ನಡ ಓದುವ,ಬರೆಯುವ,ಮಾತಾಡುವ ಹವ್ಯಾಸ ಚೆನ್ನಾಗಿ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ಕೆಲಸ ಮಾಡಬಹುದು. ಕನ್ನಡ ಭಾಷೆಯ ಸ್ಪಷ್ಟತೆ ಮತ್ತು ಅಕ್ಷರ ಜ್ಞಾನ ಹೆಚ್ಚಾಗಿರಬೇಕು. ಆದಕಾರಣ ಮಕ್ಕಳಲ್ಲಿ ಇಂತಹ ಪ್ರಬಂಧ ಸ್ಪರ್ಧೆಗಳನ್ನು ಇಟ್ಟಿರುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಹಳೇಬೀಡಿನ ಎಲ್ಲಾ ಶಾಲೆಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುತ್ತೇವೆ. ಗೆದ್ದ ಮಕ್ಕಳಿಗೆ ಉತ್ತಮ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ವೀರಣ್ಣ ಮಾತನಾಡಿ, ಪ್ರಬಂಧ ಸ್ಪರ್ಧೆಯಲ್ಲಿ ಜಾನಪದ, ಭಾವಗೀತೆ ಮತ್ತು ದಾಸರ ಪದಗಳನ್ನು ಹೆಚ್ಚಿನ ರೀತಿ ಮಕ್ಕಳಲ್ಲಿ ಪ್ರೋತ್ಸಾಹಿಸಿದರೆ ಮಕ್ಕಳಲ್ಲಿ ಉಚ್ಛಾರ ಜ್ಞಾನ ಹೆಚ್ಚಾಗುತ್ತದೆ. ಹಾಗಾಗಿ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕೆಂದು ತಿಳಿಸಿದರು.

ಈ ಸ್ವರ್ಧೆಯಲ್ಲಿ ಗೆದ್ದ ಮಕ್ಕಳಾದ ಸುಹಾನ್, ಭವನಾ, ಶ್ರೀಮಯಿ, ಉಲ್ಲಾಸ್, ಪುಶ್ಕರ್, ಮನವಿ, ಸಿಂಚನ, ಲೋಹಿತ್, ಇಶಾಂತ್, ಬಹುಮಾನ ಪಡೆದರು.

ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಮಂಜುಳಾ ಸುರೇಶ್, ಮುಖ್ಯ ಶಿಕ್ಷಕ ಸಿದ್ದೇಶ, ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಮತಾ, ಶಿಕ್ಷಕರಾದ ಅರವಿಂದ, ಶಾಜಾ, ಹಾಜರಿದ್ದರು. ಈ ಜಾನಪದ ಸಂಭ್ರಮದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಮಕ್ಕಳಿಂದಲೇ ನಿರೂಪಣೆ, ಪ್ರಾರ್ಥನೆ, ಸ್ವಾಗತ, ವಂದನೆದೊಂದಿಗೆ ಮುಕ್ತಾಯಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ