ಕನ್ನಡಪ್ರಭ ವಾರ್ತೆ ಗೌರಿಬಿದನೂರು
6 ಎಕರೆ ಜಾಗದಲ್ಲಿ ನಿರ್ಮಾಣ
ಈಗ ಅನುದಾನ ಮತ್ತು ಸ್ಥಳ ಮಂಜೂರಾಗಿದೆ. ಒಟ್ಟು 6 ಎಕರೆ ಸ್ಥಳದಲ್ಲಿ 4 ಎಕರೆ ಶಾಲಾ ಕಟ್ಟಡಕ್ಕೆ ಉಳಿದ 2 ಎಕರೆ ಅಧ್ಯಾಪಕರ ವಾಸಕ್ಕೆ ಕೊಠಡಿಗಳ ನಿರ್ಮಾಣಕ್ಕೆ ನಿಗದಿಪಡಿಸಲಾಗಿದೆ. ಈ ಸಂಬಂಧ ಸ್ಥಳೀಯವಾಗಿ ಕೆಲವು ವ್ಯಾಜ್ಯಗಳಿದ್ದು ಸದ್ಯಕ್ಕೆ 4 ಎಕರೆ ಸ್ಥಳದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭಿಸಲಾಗಿದೆ. ಇದು 18 ತಿಂಗಳೊಳಗೆ ಮುಗಿಯಬೇಕಾಗಿದೆ. ಕಾಮಗಾರಿಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಕಾಪಾಡಬೇಕು ಎಂದು ಅವರು ಹೇಳಿದರು.ಇಲ್ಲಿರುವ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿ ಕಾಮಗಾರಿ ಮುಂದುವರೆಯುವಂತೆ ಮಾಡುತ್ತೇನೆ. ತಾಲೂಕಿನಲ್ಲಿ ಬಲಹೀನ ವರ್ಗಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಮಕ್ಕಳೇ ಹೆಚ್ಚಾಗಿದ್ದು ಇವರಿಗೆ ಒಳ್ಳೆಯ ಅಥವಾ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬ ಉದ್ದೇಶದಿಂದ ಈ ಕಾಮಗಾರಿಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಭೇಟಿ ನೀಡಿದ್ದೇನೆ ಎಂದು ಹೇಳಿದರು.ಇನ್ನೊಂದು ಸೇತುವೆ ನಿರ್ಮಾಣ
ತಾಲೂಕಿನ ರಾಮಚಂದ್ರಪುರ ರೈಲ್ವೇ ಕೆಳಸೇತುವೆ ವೀಕ್ಷಿಸಿ, ಇಲ್ಲಿ ಬಡಾವಣೆ ಮನೆಗಳು ಮೊದಲೇ ಬಂದಿರುವುದರಿಂದ ಈ ರೀತಿಯ ಸೇತುವೆ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಬಡಾವಣೆ ಮನೆಗಳ ನಿವಾಸಿಗಳು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ, ವಾಸ್ತವ ಸ್ಥಿತಿಗತಿಗಳನ್ನು ಪರೀಶೀಲಸಿ ಇನ್ನೊಂದು ಸೇತುವೆ ನಿರ್ಮಾಣ ಮಾಡಲು ಪ್ರಯತ್ನಿಸುತ್ತೇನೆ.ಇದೇ ವೇಳೆ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಪ್ರೇಮ,ತಹಸೀಲ್ದಾರ್ ಮಹೇಶ್.ಎಸ್.ಪತ್ರಿ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಆಯುಕ್ತೆ ಡಿ.ಎಂ.ಗೀತಾ ಹಾಗೂ ಮುಖಂಡರಾದ ಎನ್.ಎಂ.ರವಿನಾರಾಯಣರೆಡ್ಡಿ, ಡಾ.ಎಚ್.ಎಸ್.ಶಶಿಧರ, ಬಿ.ಜಿ.ವೇಣುಗೋಪಾಲರೆಡ್ಡಿ, ನಾಗಭೂಷಣ ರಾವ್, ಮಾರ್ಕೆಟ್ ಮೋಹನ್, ಜಯಣ್ಣ, ವೇಣುಗೋಪಾಲ್, ವೇಣು ಸ್ವಾಮಿ ಮತ್ತು , ಎನ್.ಪಿ.ಇ.ಸಿ ಸಂಸ್ಥೆಯ ವ್ಯವಸ್ಥಾಪಕ ಅಮಿತ್ ಶರ್ಮ, ಗುತ್ತಿಗೆದಾರ ಅಮರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..