ಮಕ್ಕಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು: ಗೋಟೂರು ಶಿವಪ್ಪ ಸಲಹೆ

KannadaprabhaNewsNetwork |  
Published : Jun 28, 2025, 12:29 AM IST
ಮಧುಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಪೋಲಿಸ್‌ ಇಲಾಖೆ,ಮಧುಗಿರಿ ಪೋಲಿಸ್‌ ಠಾಣೆ ಹಾಗೂ ಮಧುಗಿರಿ ವೃತ್ತ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ  ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನುಎಸಿ ಗೋಟೂರು ಶಿವಪ್ಪ ಉದ್ಘಾಟಿಸಿದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮಾದಕ ದ್ವೈವ್ಯ ನಿಷೇದಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಫಲಕಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನ ಜಾಗೃತಿ ಮೂಡಿಸಿದರು.  | Kannada Prabha

ಸಾರಾಂಶ

ವಿದ್ಯಾರ್ಥಿಗಳ ಆರೋಗ್ಯವೇ ದೇಶದ ಭಾಗ್ಯ, ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಅಮಲು ಪದಾರ್ಥಗಳಿಂದ ದೂರವಿದ್ದು,ಸುಭದ್ರ ಭಾರತ ಕಟ್ಟುವ ಮೂಲಕ ಸಾಮಾಜಿಕ ಚಿಂತನೆಗಳನ್ನು ಹಿರಿಯರ ಕನಸಿನ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮುಂದಾಗುವ ಜತೆಗೆ ತಮ್ಮ ಜೀವನದಲ್ಲಿ ಶಿಕ್ಷಣದ ಮೌಲ್ಯಗಳನ್ನು ಅರಿತು ಬದುಕಿ ಬಾಳಬೇಕು.

ಕನ್ನಡಪ್ರಭ ವಾರ್ತೆ ಮಧುಗಿರಿ

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರದ್ದು,ಸಮಾಜದ ಅಘಾತಕಾರಿ ಚಟುವಟಿಕೆಗಳನ್ನು ಮಾಡದೇ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದೇಶದ ಉಜ್ವಲ ಭವಿಷ್ಯ ಕಟ್ಟವಲ್ಲಿ ಮುಂದಾಗಬೇಕು ಎಂದು ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತುಮಕೂರು ಜಿಲ್ಲಾ ಪೋಲಿಸ್‌, ಮಧುಗಿರಿ ಪೋಲಿಸ್ ಠಾಣೆ ಮತ್ತು ಮಧುಗಿರಿ ವೃತ್ತ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಮಾದಕವಸ್ತುಗಳ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಆರೋಗ್ಯವೇ ದೇಶದ ಭಾಗ್ಯ, ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಅಮಲು ಪದಾರ್ಥಗಳಿಂದ ದೂರವಿದ್ದು,ಸುಭದ್ರ ಭಾರತ ಕಟ್ಟುವ ಮೂಲಕ ಸಾಮಾಜಿಕ ಚಿಂತನೆಗಳನ್ನು ಹಿರಿಯರ ಕನಸಿನ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮುಂದಾಗುವ ಜತೆಗೆ ತಮ್ಮ ಜೀವನದಲ್ಲಿ ಶಿಕ್ಷಣದ ಮೌಲ್ಯಗಳನ್ನು ಅರಿತು ಬದುಕಿ ಬಾಳಬೇಕು. ವಿದ್ಯಾರ್ಥಿ ದಿಸೆಯಲ್ಲಿ ಆರೋಗ್ಯ ಕೆಟ್ಟರೆ ಸಮಾಜದ ಆರೋಗ್ಯ ಕೂಡ ಹಾಳಾಗುತ್ತದೆ. ಆದ ಕಾರಣ ತಮ್ಮ ಜೀವನದಲ್ಲಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ದೇಶದ ಉಜ್ವಲ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಪೋಲಿಸ್‌ ಇಲಾಖೆ ಸಾರ್ವಜನಿಕವಾಗಿ ಮಾಡುವ ಬದಲಾಗಿ ಯುವ ಜನಾಂಗವನ್ನು ಒಂದೇಡೆ ಸೇರಿಸಿ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸುತ್ತಿದೆ. ಹಾಗಾಗಿ ತಾವು ಬದಲಾಗುವ ಜತೆಗೆ ಸಮಾಜದಲ್ಲಿ ಕೆಲವು ಹವ್ಯಾಸಗಳನ್ನು ಕಲಿತಿರುವವರನ್ನು ಬದಲಾವಣೆ ಮಾಡುವ ಶಕ್ತಿ ಯುವ ಜನಾಂಗದ ಮೇಲಿದೆ ಎಂದರು.

ಡಿವೈಎಸ್‌ಪಿ ಮಂಜುನಾಥ್‌ ಮಾತನಾಡಿ, ಡ್ರಗ್‌ ಸೇವನೆಯಿಂದ ಮಾನಸಿಕ ಸ್ಥಿರತೆ ದುರ್ಬಲಗೊಂಡು ನಿಯಮ ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿ ಕೊಡುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಮಾದಕ ದ್ರೈವ್ಯಗಳ ಆಕರ್ಷಣೆಗೆ ಮೊದಲು ಮನ ಸೋತವರು ನಂತರದಲ್ಲಿ ದಾರಿ ತಪ್ಪಿ ಸಮಾಜಕ್ಕೆ ಕಂಟಕರಾಗುತ್ತಾರೆ. ಆದ್ದರಿಂದ ಓದುವ ವಯಸ್ಸಿನಲ್ಲಿ ಓದಿ ಜ್ಞಾನ ಸಂಪಾದಿಸಿಕೊಂಡು ದೇಶದ ಉತ್ತಮ ಸತ್ಪ್ರಜೆಗಳಾಗುವ ಜೊತೆಗೆ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ಎಂದು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾದುದು, ಈ ವಯಸ್ಸಿನಲ್ಲಿ ಮಕ್ಕಳು ತಪ್ಪ ಹೆಜ್ಜೆ ಇಡದಂತೆ ಉತ್ತಮ ಶಿಕ್ಷಣ ಕಲಿತು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸತ್ಪ್ರಜೆಗಳಾಗಬೇಕು. ಆಗ ಸಮಾಜದ ಪ್ರಗತಿ ಸಾಧನೆಗೆ ಪ್ರೇರಣೆಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು, ನೈತಿಕ ತಳಹದಿಯ ಮೇಲೆ ಅಕ್ಷರಗಳನ್ನು ಕಟ್ಟಿಕೊಂಡು ಅರಿವು ಬೆಳಸಿಕೊಂಡು ಉತ್ತಮ ಜೀವನ ರೂಪಿಸಕೊಳ್ಳಬೇಕು. ಮಕ್ಕಳು ಯಾವುದೇ ದುಶ್ಚಗಳಿಗೆ ದಾಸರಾಗದೇ ಉತ್ತಮ ಶಿಕ್ಷಣ ಕಲಿತು ಪೋಷಕರಿಗೆ, ಗುರು ಹಿರಿಯರಿಗೆ ಕೀರ್ತಿ ತರುವಂತೆ ಸಲಹೆ ನೀಡಿದರು.

ಸಿಪಿಐ ಹನುಮಂತರಾಯಪ್ಪ, ಪಿಎಸ್‌ಐ ವಿಜಯ್ ಕುಮಾರ್‌, ಮಿಡಿಗೇಶಿ ಪಿಎಸೈ ಮಹಮದ್‌ ಪೈಗಂಬರ್, ಶ್ರೀನಿವಾಸ್‌, ಕಾಲೇಜು ಪ್ರಾಂಶುಪಾಲರಾದ ಕುಮಾರ್, ಉಪನ್ಯಾಸಕರು, ಕಾಲೇಜು ‍ವಿದ್ಯಾರ್ಥಿಗಳು ಇದ್ದರು.

ನಂತರ ಮಾದಕ ವಸ್ತುಗಳನ್ನು ನಿಷೇಧಿಸುವ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನ ಜಾಗೃತಿ ಮೂಡಿಸಿದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು