ಮಕ್ಕಳು, ಸಮಾಜಕ್ಕೆ ಸಂಸ್ಕಾರದ ಅರಿವು ಬೇಕು: ಡಾ. ಶಶಿಧರ ನರೇಂದ್ರ

KannadaprabhaNewsNetwork |  
Published : Dec 21, 2024, 01:19 AM IST
20ಡಿಡಬ್ಲೂಡಿ4ರಂಗಾಯಣದ ಸಾಂಸ್ಕೃತಿಕ ಸಮುಚ್ಛಯದಲ್ಲಿ ಸಂಸ್ಕಾರ ಭಾರತಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಲಾಯಿತು.  | Kannada Prabha

ಸಾರಾಂಶ

ಮಕ್ಕಳು ಕಲೆ, ಸಂಗೀತ, ನೃತ್ಯ ಸಾಹಿತ್ಯದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಅದಕ್ಕೆ ಗುರುಗಳು ಮತ್ತು ಅವರ ಮನೆಯ ಒಳ್ಳೆಯ ಸಂಸ್ಕಾರದ ಫಲವಾಗಿದೆ.

ಧಾರವಾಡ:

ಮಕ್ಕಳು ಹಾಗೂ ಸಮಾಜದಲ್ಲಿ ಉತ್ತಮ ಸಂಸ್ಕಾರದ ಅರಿವು ಮೂಡಿಸುವ ಜತೆಗೆ ಅವರಲ್ಲಿರುವ ಸೂಪ್ತ ಪ್ರತಿಭೆ ಗುರುತಿಸಿ ಬೆಳಕಿಗೆ ತರುವುದು ಸಂಸ್ಕಾರ ಭಾರತೀಯ ಮುಖ್ಯ ಉದ್ದೇಶ ಎಂದು ಸಂಸ್ಕಾರ ಭಾರತೀಯ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಹೇಳಿದರು.

ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಸಂಸ್ಕಾರ ಭಾರತಿ ಏರ್ಪಡಿಸಿದ್ದ “ನೃತ್ಯೋತ್ಸವ” ಉದ್ಘಾಟಿಸಿದ ಅವರು, ಸಮಾಜದಲ್ಲಿ ಮಹಾನ್ ಸಾಧಕರನ್ನು ಗಮನಿಸಿದಾಗ ಅವರು ತಮ್ಮ ಜೀವನದಲ್ಲಿ ಶಿಸ್ತು, ಕಠಿಣ ಪರಿಶ್ರಮ ಹಾಗೂ ಉತ್ತಮ ಸಂಸ್ಕಾರವನ್ನು ಬಾಲ್ಯದಿಂದಲೇ ಅಳವಡಿಸಿಕೊಂಡಿದ್ದಾರೆ.

ರಾಷ್ಟ್ರವು ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕು. ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರದ ಅಗತ್ಯತೆ ಇದೆ ಎಂದರು.

ದಂತ ವೈದ್ಯ ಡಾ. ವಿಶ್ವನಾಥ ಹಿರೇಮಠ, ಮಕ್ಕಳು ಕಲೆ, ಸಂಗೀತ, ನೃತ್ಯ ಸಾಹಿತ್ಯದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಅದಕ್ಕೆ ಗುರುಗಳು ಮತ್ತು ಅವರ ಮನೆಯ ಒಳ್ಳೆಯ ಸಂಸ್ಕಾರದ ಫಲವಾಗಿದೆ. ಇದರಿಂದ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಆಗಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ, ಸಂಸ್ಕಾರವಿಲ್ಲದೆ ಜೀವನವಿಲ್ಲ, ಇಂದು ಪಾಲಕರಿಗೆ, ಗುರುಗಳಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಅವರ ಒಳ್ಳೆಯ ಮಾಗದರ್ಶನ, ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುತ್ತವೆ ಎಂದರು.

ಧಾರವಾಡದ ಕಥಕ್ ನೃತ್ಯಗಾರ್ತಿ ವಿದೂಷಿ ವಿಜೇತಾ ವೆರ್ಣೇಕರ್, ಜಾನಪದ ವಿವಿಯಿಂದ ಸ್ನಾತಕೋತ್ತರ ಪ್ರದರ್ಶನ ಕಲೆಯಲ್ಲಿ ಬಂಗಾರ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದ ಶಿಲ್ಪಾ ಮೊಕಾಶಿ ಪಾಂಡೆ, 2024ರ ರಾಜ್ಯಮಟ್ಟದ ಪುಟ್ಟಶ್ರೀ ಸನ್ಮಾನ ಪುರಸ್ಕೃತರಾದ ಅಥರ್ವ ಘಂಟೆಣ್ಣವರ ಅವರನ್ನು ಸನ್ಮಾನಿಸಿಲಾಯಿತು.

ಸಿರಿಗೌರಿ ಎಸ್. ಭಲೇರಾವ್, ನಿಹಾರಿಕಾ ನಿಡಗುಂದಿ, ನಿಧಿ ಕೋರಿ ಹಾಗೂ ಸಾನ್ವಿ ಶ್ರೀಶ ಕುಲಕರ್ಣಿ ಭರತ ನಾಟ್ಯ ಹಾಗೂ ಕಥಕ್ ನೃತ್ಯ ಪ್ರದರ್ಶನ ನೀಡಿದರು. ಇತ್ತೀಚೆಗೆ ನಿಧನರಾದ ಪದ್ಮಶ್ರೀ ತುಳಸಿಗೌಡ ಹಾಗೂ ಖ್ಯಾತ ತಬಲಾವಾದಕ ಉಸ್ತಾದ್ ಜಾಕಿರ್ ಹುಸೇನ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಸಾದ ಮಡಿವಾಳರ ಇದ್ದರು. ಸುನಿಲ ಕುಲಕರ್ಣಿ ನಿರೂಪಿಸಿದರು. ವೈಶಾಲಿ ರಸಾಳ್ಕರ್, ಡಾ. ಶ್ರೀಧರ ಕುಲಕರ್ಣಿ ಸ್ವಾಗತಿಸಿದರು. ಅಶೋಕ ಕೋರಿ ವಂದಿಸಿದರು.

ಡಾ. ವಿಜಯ ತ್ರಾಸದ, ಅಶೋಕ ಮೊಕಾಸಿ, ಬಿ.ಎಂ. ಶರಭೇಂದ್ರ ಸ್ವಾಮೀಜಿ, ವಿಷಯಾ ಬೇವೂರು, ಸುರೇಶ ಗುದಗನವರ, ಅನಿಲ ಮೊಕಾಶಿ, ಸಂಜಯ ಪಾಂಡೆ, ಡಾ. ಎ.ಎಲ್. ದೇಸಾಯಿ, ಆರತಿ ದೇವಶಿಖಾಮಣಿ, ಶಶಿಧರ ಲೋಹಾರ, ಸದಾಶಿವ ಐಹೊಳೆ, ಡಾ. ರಶ್ಮೀ ಹಿರೇಮಠ, ಡಾ. ಮೋಹನಕುಮಾರ ಥಂಬದ, ಬಸವರಾಜ ನಿಡಗುಂದಿ, ಮಲ್ಲಿಕಾ ಬಿ.ಎನ್. ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ