ರಾಮನಗರ: ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಚಿತ್ರಕಲೆಗಳಿಂದಲೂ ಸುಖಿ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಓದಿನ ಜೊತೆಗೆ ಸೃಜನಾತ್ಮಕ ಮತ್ತು ಕ್ರಿಯಾಶೀಲ ಮನಸ್ಸು ಇಟ್ಟುಕೊಳ್ಳಬೇಕು. ಪ್ರತಿಯೊಂದು ಕ್ರಿಯೆಯಲ್ಲಿಯೂ ಬದುಕಿನ ಸೂಕ್ಷ್ಮತೆಗಳು ಅಡಗಿರುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಇರಬೇಕು. ವಿದ್ಯೆ ಒಳ ಜಗತ್ತನ್ನು ತೃಪ್ತಿಪಡಿಸಿದರೆ, ಸಾಂಸ್ಕೃತಿಕ ಚಟುವಟಿಕೆ ಹೊರ ಜಗತ್ತನ್ನು ತೃಪ್ತಿಪಡಿಸಲು ನೆರವಾಗುತ್ತವೆ. ಸಂಗೀತಗಾರ, ಹಾಡುಗಾರ, ನೃತ್ಯಪಟು, ಅಭಿನಯ ಚತುರರಾಗುವ ಅವಕಾಶಗಳನ್ನು ಒದಗಿಸಿಕೊಡಲು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಅಗತ್ಯ ಎಂದರು.
ಡಾ.ಭೈರಮಂಗಲ ರಾಮೇಗೌಡ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅನುಭವಿಗಳಾದರೆ, ಆತ್ಮವಿಶ್ವಾಸದಿಂದ ಮುನ್ನಡೆ ಸಾಧಿಸಿದರೆ, ಭವಿಷ್ಯದ ಬದುಕನ್ನು ಬೆಳಗಿಸಿಕೊಳ್ಳುವ ಸಾಧ್ಯತೆಗಳು ಸಾಕಷ್ಟಿವೆ. ವಿದ್ಯಾರ್ಥಿಗಳು ವೇದಿಕೆಯಲ್ಲಿ ತಮ್ಮ ಕಲಾ ಪ್ರತಿಭೆ ಪ್ರದರ್ಶಿಸುವಾಗ ಅವರ ಉತ್ಸಾಹ, ಹುಮ್ಮಸ್ಸನ್ನು ನೋಡಿ ಪೋಷಕರು, ಅಧ್ಯಾಪಕರು, ಪ್ರೇಕ್ಷಕರು ವಿಸ್ಮಯಗೊಳ್ಳುತ್ತಾರೆ.ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರ ಆಸಕ್ತಿ, ಅಭಿರುಚಿ ಆಳವಾಗಿ ಬೆಳೆಸಿಕೊಂಡು ಸಾಧನೆ ಮಾಡಿದವರು ಬಹಳಷ್ಟು ಮಂದಿ ನಮ್ಮ ಕಣ್ಮುಂದೆ ಬೆಳಗುತ್ತಿದ್ದಾರೆ ಎಂದರು.ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಹೋರಾಟ ಮತ್ತು ಧೈರ್ಯದಿಂದ ಜೀವನ ರೂಪಿಸಿಕೊಳ್ಳಲು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ ಅಗತ್ಯ. ಸಕಾರಾತ್ಮಕ ಆಲೋಚನೆಗಳನ್ನು ಹೊಂದಲು, ಉತ್ಸಾಹ ಮತ್ತು ಉಲ್ಲಾಸದಿಂದ ಕೆಲಸ ಕಾರ್ಯ ನಿರ್ವಹಿಸಲು ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು ಪ್ರೇರಣೆ ನೀಡುತ್ತವೆ. ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದರು.
ಮನೋಜ್ಞವಾಗಿ ಭರತನಾಟ್ಯ ನೃತ್ಯ ಪ್ರದರ್ಶನ ಮಾಡಿದ ಶ್ರೀ ಲಲಿತ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿನಿಯರಿಗೆ ಸುಗ್ಗನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎನ್.ಪ್ರದೀಪ್ 5 ಸಾವಿರ ರು ಪ್ರೋತ್ಸಹಧನ ವಿತರಿಸಿದರು.
ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಡಾ.ಎ.ಟಿ.ಶಿವರಾಮು, ಖಾಜಾಂಚಿ ಬಿ.ಮಹೇಶ್, ವಿದುಷಿ ಡಿ.ನಾಗವೇಣಿ, ಉಪನ್ಯಾಸಕರ ಸಂಘದ ಅಧ್ಯಕ್ಷ ವೇಣಿಗೋಪಾಲ್, ಬಿಜಿಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ.ಸುರೇಶ್, ಪ್ರಾಂಶುಪಾಲರಾದ ಹೆಚ್.ಹೇಮೇಗೌಡ, ಬಸವರಾಜು, ವೆಂಕಟಲಕ್ಷ್ಮಿ, ರೇಖಾ, ನಜ್ರುಲ್ಲಾಖಾನ್, ಜೆ.ಬಿ.ಚನ್ನವೀರಯ್ಯ, ಓಂಕಾರಮೂರ್ತಿ, ಉಪನ್ಯಾಸಕ ಬೆಟ್ಟಸ್ವಾಮಿ, ಕೆ.ವೆಂಕಟೇಶ್, ಎಂ.ಎಂ.ಪ್ರಕಾಶ್ ಹಾಜರಿದ್ದರು.ಪೊಟೋ೧೮ಸಿಪಿಟಿ೨:
ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಬೆಂಗಳೂರು ವಿಭಾಗಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಇತರರು ಭಾಗವಹಿಸಿದ್ದರು.