ಚಿತ್ರಕಲೆ ಸ್ಪರ್ಧೆಯಲ್ಲಿ ಮಕ್ಕಳ ಪ್ರತಿಭೆಗೆ ಮೆಚ್ಚುಗೆ

KannadaprabhaNewsNetwork |  
Published : Apr 16, 2026, 01:45 AM IST
ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಬಿ. ರವಿ, ಹೊಯ್ಸಳ ಚಿತ್ರಕಲಾ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶಂಕರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬೊಮ್ಮೇಗೌಡ, ದಲಿತ ಹಿರಿಯ ಮುಖಂಡ ನಾಗರಾಜು ಹೆತ್ತೂರು, ಸಂಸ್ಕöತ ಸಂಘದ ನಿರ್ದೇಶಕ ಜಿ.ಎಸ್.ಮಂಜುನಾಥ್,    ಬಿ.ಡಿ. ಶಂಕರೇಗೌಡ, ಚಿತ್ರಕಲಾವಿದರಾದ ಜಿ.ಎಸ್. ಶಿವಶಂಕರಪ್ಪ, ನಾಗೇಶ್, ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು | Kannada Prabha

ಸಾರಾಂಶ

ಹಾಸನ ಜಿಲ್ಲೆ ವಿವಿಧ ಕಲಾವಿದರ ನೆಲೆಯಾಗಿದ್ದು, ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜೀವಾಳವೇ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಎಂದ ಅವರು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆದು ಬೆಳೆಸಲು ಇಂತಹ ವೇದಿಕೆಗಳು ಅತ್ಯಗತ್ಯವೆಂದು ತಿಳಿಸಿದರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಕೇವಲ ಅಂಕಗಳಿಗೆ ಸೀಮಿತವಾಗುತ್ತಿರುವುದು ಕಳವಳಕಾರಿ ಸಂಗತಿ. ಅಂಕಗಳಿಗಿಂತಲೂ ಮೌಲ್ಯಾಧಾರಿತ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮಕ್ಕಳಿಗೆ ಬೋಧಿಸಬೇಕು. ಪೋಷಕರು ಕೂಡ ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಅರಳೀಕಟ್ಟೆ ಬಳಿ ಇರುವ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ ಅಂಗವಾಗಿ ಚಿತ್ರಕಲಾ ಸಂಭ್ರಮ ಜರುಗಿತು. ಹೊಯ್ಸಳ ಚಿತ್ರಕಲಾ ಪರಿಷತ್ತು, ಸಂಸ್ಕಾರ ಭಾರತೀ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಚಿತ್ರರಚನೆ, ವಿಮರ್ಶೆ, ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಕಲಾಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.ಕಾರ್ಯಕ್ರಮವನ್ನು ಚನ್ನರಾಯಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಎನ್. ಹಡೇನಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಾಸನ ಜಿಲ್ಲೆ ವಿವಿಧ ಕಲಾವಿದರ ನೆಲೆಯಾಗಿದ್ದು, ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜೀವಾಳವೇ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಎಂದ ಅವರು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆದು ಬೆಳೆಸಲು ಇಂತಹ ವೇದಿಕೆಗಳು ಅತ್ಯಗತ್ಯವೆಂದು ತಿಳಿಸಿದರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಕೇವಲ ಅಂಕಗಳಿಗೆ ಸೀಮಿತವಾಗುತ್ತಿರುವುದು ಕಳವಳಕಾರಿ ಸಂಗತಿ. ಅಂಕಗಳಿಗಿಂತಲೂ ಮೌಲ್ಯಾಧಾರಿತ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮಕ್ಕಳಿಗೆ ಬೋಧಿಸಬೇಕು. ಪೋಷಕರು ಕೂಡ ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು ಎಂದರು.ಶಿಕ್ಷಣದ ಜೊತೆಗೆ ಸಹಪಾಠ್ಯ ಚಟುವಟಿಕೆಗಳು, ವಿಶೇಷವಾಗಿ ಚಿತ್ರಕಲೆ ಕಲೆಯನ್ನು ಮಕ್ಕಳಿಗೆ ಕಲಿಸಬೇಕೆಂದು ಕರೆ ನೀಡಿದರು. ಇನ್ನೂ ಮುಂದೆ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ನಾನು ಕೂಡ ಆಕಾಕ್ಷಿಯಾಗಿದ್ದು, ಇನ್ನಷ್ಟು ಸಾಹಿತ್ಯದಂತಹ ಕನ್ನಡ ಸೇವೆಗೆ ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು. ಬೆಳಗ್ಗಿನಿಂದ ನಡೆದ ವಿವಿಧ ಹಂತಗಳ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ವಿಭಾಗದಲ್ಲಿ ತಾನ್ಯ ಎಚ್. ಎಂ. ಪ್ರಥಮ, ರಿಷಭ್ ಬಿ.ಗೌಡ ದ್ವಿತೀಯ, ಉದ್ವಿಕ್ ಗೌಡ ತೃತೀಯ ಬಹುಮಾನ ಪಡೆದುಕೊಂಡರು. ಅನ್ವಿತಿ ಸಮಾಧಾನಕರ ಬಹುಮಾನ ಪಡೆದರು. 1 ಮತ್ತು 2ನೇ ತರಗತಿಯಲ್ಲಿ ಧನ್ಯಶ್ರೀ ಪ್ರಥಮ, ಮುದ್ಗಟ್ ಮಂಜುನಾಥ ದ್ವಿತೀಯ, ಪ್ರಸಿದ್ದಿ ಬಿ. ತೃತೀಯ, ಪೃಥ್ವಿ ಶಿವರಾಜ್ ಸಮಾಧಾನಕರ ಬಹುಮಾನ ಪಡೆದರು. 3 ಮತ್ತು 4ನೇ ತರಗತಿಯಲ್ಲಿ ನಿರೂಪ್ ರಾಜ್ ಪ್ರಥಮ, ಯಾಶ್ವಿಕ ದ್ವಿತೀಯ, ಜೇಷ್ಠ ತೃತೀಯ, ಪ್ರೇಕ್ಷ ಎಸ್. ಗೌಡ ಸಮಾಧಾನಕರ ಬಹುಮಾನ ಪಡೆದರು. 5 ಮತ್ತು 6ನೇ ತರಗತಿಯಲ್ಲಿ ಚೇತನ ಎಸ್. ಪ್ರಥಮ, ಹರ್ಷಿ ಕೆ.ಎನ್. ದ್ವಿತೀಯ, ಹರ್ಷಿತ ಎಚ್.ಪಿ. ತೃತೀಯ, ವಿದು ಎಸ್. ಹಾಗೂ ಸಾಗರ್ ಸಮಾಧಾನಕರ ಬಹುಮಾನ ಪಡೆದರು. 7 ಮತ್ತು 8ನೇ ತರಗತಿಯಲ್ಲಿ ದಾನಿಕ ಅಶೋಕ ಪ್ರಥಮ, ಮನ್ವಿತ್ ಬಿ.ಎಸ್. ಗೌಡ ದ್ವಿತೀಯ, ತಿಲಕ್ ವಿ. ತೃತೀಯ, ಕೀರ್ತನ ಪಿ. ಸಮಾಧಾನಕರ ಬಹುಮಾನ ಪಡೆದರು. 9 ಮತ್ತು 10ನೇ ತರಗತಿಯಲ್ಲಿ ಸಾನ್ವಿ ಎಸ್. ಪ್ರಥಮ, ಆರ್ಯನ್ ಗೌಡ ದ್ವಿತೀಯ, ಮೋಹಿತ್ ಗೌಡ ಎನ್. ತೃತೀಯ, ಅಮೂಲ್ಯ ಸಮಾಧಾನಕರ ಬಹುಮಾನ ಪಡೆದರು.ಕಾರ್ಯಕ್ರಮದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ. ಬಿ. ರವಿ, ಹೊಯ್ಸಳ ಚಿತ್ರಕಲಾ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕೆ. ಎಸ್. ಶಂಕರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬೊಮ್ಮೇಗೌಡ, ದಲಿತ ಹಿರಿಯ ಮುಖಂಡ ನಾಗರಾಜು ಹೆತ್ತೂರು, ಸಂಸ್ಕೃತ ಸಂಘದ ನಿರ್ದೇಶಕ ಜಿ. ಎಸ್. ಮಂಜುನಾಥ್, ಬಿ.ಡಿ. ಶಂಕರೇಗೌಡ, ಚಿತ್ರಕಲಾವಿದರಾದ ಜಿ.ಎಸ್. ಶಿವಶಂಕರಪ್ಪ, ನಾಗೇಶ್, ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಡತ್ವದ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ:ಸಿಎಂ
ಮಹಿಳಾ ಧ್ವನಿಗೆ ಶಕ್ತಿ ನೀಡುವ ಸಮಯ