ವ್ಯವಹಾರಿಕ ಜ್ಞಾನ ಬೆಳೆಸಲು ಚಿಣ್ಣರ ಮೇಳ ಸಹಕಾರಿ

KannadaprabhaNewsNetwork |  
Published : Jan 25, 2026, 02:15 AM IST
೨೪ಕೆಪಿಎಲ್‌೦೨ ನಗರದ ಶಾಂತಿನಿಕೇತನ ಶಾಲೆಯಲ್ಲಿ ಕಲಿಕೋತ್ಸವ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ ಜರುಗಿತು | Kannada Prabha

ಸಾರಾಂಶ

ಆರಂಭದಿಂದಲೇ ವ್ಯವಹಾರಿಕ ಜ್ಞಾನ ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮವಾಗಲಿದೆ

ಕೊಪ್ಪಳ: ಮಕ್ಕಳಲ್ಲಿ ಜಾಗೃತಿ ಹಾಗೂ ವ್ಯವಹಾರಿಕ ಜ್ಞಾನ ಮೂಡಿಸಲು ನಮ್ಮ ಮೂಲ ಕಸಬು ನೆನಪಿಸಲು ಮಕ್ಕಳಿಗಾಗಿ ಜರುಗುವ ಚಿಣ್ಣರ ಮೇಳಗಳು ಸಹಕಾರಿಯಾಗಲಿವೆ ಎಂದು ಶಿಕ್ಷಣ ಸಂಯೋಜಕ ವೀರೇಶ ಅರಳಿಕಟ್ಟಿ ಹೇಳಿದರು.

ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ನಡೆದ ಕಲಿಕೊತ್ಸವ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬೆಳೆಯುವುದು ಬಹಳ್ಳ ಮುಖ್ಯವಾಗಿದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗಿ ದೇಶದ ಆಸ್ತಿಗಳಾಗುತ್ತಾರೆ. ಆರಂಭದಿಂದಲೇ ವ್ಯವಹಾರಿಕ ಜ್ಞಾನ ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮವಾಗಲಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಬಹಳ್ಳಮುಖ್ಯ. ಭಾರತದಲ್ಲಿ ನಮ್ಮ ಪರಂಪರೆ ವಿವಿಧ ಕಸುಬುಗಳಿಂದ ಕೂಡಿದೆ. ಅವುಗಳನ್ನು ಮಕ್ಕಳಿಗೆ ತಿಳಿಸುವ ಹಾಗೂ ಅದರ ಅರಿವು ಮೂಡಿಸುವ ಕೆಲಸ ಇದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಶಿಕ್ಷಣ ಸಂಯೋಜಕ ಲಕ್ಷಣ ಪಲ್ಲೇದ ಮಾತನಾಡಿ, ಸರ್ಕಾರಿ ಶಾಲೆಯಂತೆ ಇಲ್ಲಿಯೂ ಸಹ ವಿವಿಧ ಚಟುವಟಿಕೆ ಮಾಡುತ್ತಿರುವುದು ಮಕ್ಕಳ ಕಲಿಕಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಶಿಕ್ಷಣ ಸಂಯೋಜಕ ಯಲ್ಲಪ್ಪ ಬೆನಟ್ಟಿ ಮಾತನಾಡಿ, ಮಕ್ಕಳು ಬಾಲ್ಯದಲ್ಲಿ ಪಾಲಕರ ಮುತುವರ್ಜಿಯಿಂದ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಕುಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಪಾನಿಪುರಿ, ಬೆಳೆಕಾಳು, ಸಿಹಿತಿನಿಸು ಸೇರಿದಂತೆ ವಿವಿಧ ಪದಾರ್ಥಗಳು ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು. ನಿವೇದಿತಾ ಶಾಲೆಯ ನೀತೇಶ ಪುಲಸ್ಕರ, ಬೇಂದ್ರೆ ಶಾಲೆಯ ಸಂತೋಷ ದೇಶಪಾಂಡೆ, ಮಾಸ್ತಿ ಶಾಲೆಯ ಹುಲಗಪ್ಪ ಕಟ್ಟಿಮನಿ, ಗ್ಲೋಬಲ್ ಶಾಲೆಯ ಬಸವರಾಜ ಎಸ್.ಎಸ್., ಕಿಯೋನಿಕ್ಸ್‌ ಕಂಪ್ಯೂಟರ್‌ನ ಮಂಜುನಾಥ ಉಲ್ಲತ್ತಿ, ಉದ್ಯಮಿಗಳಾದ ಮಂಜುನಾಥ ಅಂಗಡಿ, ಶರಣು ಡೊಳ್ಳಿನ, ಅಶೋಕ ಕುಂಬಾರ,ಫಕ್ರುಸಾಬ್‌ ನದಾಫ, ಸೋಮನಗೌಡ ಹೊಗರನಾಳ ಸುಕ್ರು ನದಾಫ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!