23ಕ್ಕೆ ಚಳ್ಳಕೆರೆ ಯುವತಿ ಜತೆಗೆ ಮಂಕಿಮ್ಯಾನ್‌ ಮದುವೆ ನಿಶ್ಚಯ

Published : Aug 15, 2026, 11:43 AM IST
Monkey Man Jyothi Raj Marriage Chitradurga

ಸಾರಾಂಶ

ಐತಿಹಾಸಿಕ ಚಿತ್ರದುರ್ಗ ಕೋಟೆಯ ಕಲ್ಲುಗಳನ್ನು ಸ್ಪೈಡರ್ ಮ್ಯಾನ್‌ನಂತೆ ಏರುತ್ತಿದ್ದ ಮಂಕಿಮ್ಯಾನ್‌ ಅಲಿಯಾಸ್ ಜ್ಯೋತಿರಾಜ್ ಮದುವೆ ನಿಶ್ಚಯವಾಗಿದ್ದು, ಚಳ್ಳಕೆರೆ ತಾಲೂಕಿನ ಯುವತಿಯನ್ನು ವರಿಸಲಿದ್ದಾರೆ.

ಚಿತ್ರದುರ್ಗ : ಐತಿಹಾಸಿಕ ಚಿತ್ರದುರ್ಗ ಕೋಟೆಯ ಕಲ್ಲುಗಳನ್ನು ಸ್ಪೈಡರ್ ಮ್ಯಾನ್‌ನಂತೆ ಏರುತ್ತಿದ್ದ ಮಂಕಿಮ್ಯಾನ್‌ ಅಲಿಯಾಸ್ ಜ್ಯೋತಿರಾಜ್ ಮದುವೆ ನಿಶ್ಚಯವಾಗಿದ್ದು, ಚಳ್ಳಕೆರೆ ತಾಲೂಕಿನ ಯುವತಿಯನ್ನು ವರಿಸಲಿದ್ದಾರೆ.

ಮೂಲತಃ ತಮಿಳುನಾಡಿನವರಾದ ಜ್ಯೋತಿರಾಜ್

ಮೂಲತಃ ತಮಿಳುನಾಡಿನವರಾದ ಜ್ಯೋತಿರಾಜ್ ಕರ್ನಾಟಕದ ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿ ತಮ್ಮ ಸಾಹಸ ಕ್ರೀಡೆಯನ್ನು ಪ್ರದರ್ಶನ ಮಾಡಿ ಹೆಸರಾದವರು. ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ನಿವೇದಿತಾ ಎಂಬುವವರ ಜತೆ ಇದೇ ಆ.23ರಂದು ಮದುವೆ ನಡೆಯಲಿದೆ.

ಪದವಿ ಕಲಿತಿರುವ ಯುವತಿ

ಪದವಿ ಕಲಿತಿರುವ ಯುವತಿ ಜ್ಯೋತಿರಾಜನ ಜತೆ ಹೆಜ್ಜೆ ಹಾಕಲು ಸಮ್ಮತಿಸಿದ್ದಾರೆ. ವೈಭವ ಗಾರ್ಡನ್‌ನಲ್ಲಿ ಮದುವೆಗೆ ಜ್ಯೋತಿರಾಜ್ ಸಿದ್ಧತೆ ಮಾಡಿಕೊಂಡಿದ್ದಾರೆ. ಜ್ಯೋತಿರಾಜ್ ಮದುವೆಗೆ ಗಣ್ಯರಿಂದ‌ ನೆರವಿನ‌ ಭರವಸೆ ಸಿಕ್ಕಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

PREV
Get the latest news and stories from Chitradurga district (ಚಿತ್ರದುರ್ಗ ಸುದ್ದಿ) — including local politics, civic issues, rural development, history, events, public services, and community updates. Stay informed about all things Chitradurga with Kannada Prabha
Read more Articles on

Recommended Stories

ಕಾಟಂದೇವರ ಕೋಟೆಗೆ ಡಿಸಿ ನೇತೃತ್ವದಲ್ಲಿ ಅಧಿಕಾರಿಗಳ ಭೇಟಿ
ತಮಿಳು ನಾಡಿಗೆ ಕಾವೇರಿ ನೀರಿ ಹರಿಸದಿರಲು ಒತ್ತಾಯ