ಬೆಂಗಳೂರಿನಲ್ಲಿ ಭಾನುವಾರ ಮಾದಿಗ ಮುಖಂಡರ ಸಭೆ: ಮಾಜಿ ಸಚಿವ ಎಚ್.ಆಂಜನೇಯಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ಮೇ 5 ರಿಂದ ಜಾತಿಗಣತಿಗೆ ದತ್ತಾಂಶ ಸಂಗ್ರಹ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆ ಮಾದಿಗರ ಪಾತ್ರವೇನು ಎಂಬ ಬಗ್ಗೆ ಚರ್ಚಿಸಲು ಏ.27ರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.