ಯುವಕನ ಕಿಡ್ನಾಪ್‌ ಮಾಡಿ ಗುಪ್ತಾಂಗ ಕತ್ತರಿಸಿ ‘ಮಂಗಳಮುಖಿ’ ಮಾಡಿದ್ರು!

Published : Oct 10, 2026, 10:42 AM IST
Transgender

ಸಾರಾಂಶ

ಹೂವು ಮಾರಲು ಚಿತ್ರದುರ್ಗಕ್ಕೆ ಬರುತ್ತಿದ್ದ ಯುವಕನನ್ನು ಮಂಗಳಮುಖಿಯರು ಪರಿಚಯ ಮಾಡಿಕೊಂಡು ಬಳಿಕ ಆತನನ್ನೇ ಅಪಹರಿಸಿ, ಗುಪ್ತಾಂಗ ಕತ್ತರಿಸಿ, ಬಿಸಿನೀರು ಸುರಿದು, ಬರೆ ಎಳೆದು ಕ್ರೌರ್ಯ ಮೆರೆದಿರುವ ಘಟನೆಯು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಳ್ಳಕೆರೆ : ಹೂವು ಮಾರಲು ಚಿತ್ರದುರ್ಗಕ್ಕೆ ಬರುತ್ತಿದ್ದ ಯುವಕನನ್ನು ಮಂಗಳಮುಖಿಯರು ಪರಿಚಯ ಮಾಡಿಕೊಂಡು ಬಳಿಕ ಆತನನ್ನೇ ಅಪಹರಿಸಿ, ಗುಪ್ತಾಂಗ ಕತ್ತರಿಸಿ, ಬಿಸಿನೀರು ಸುರಿದು, ಬರೆ ಎಳೆದು ಕ್ರೌರ್ಯ ಮೆರೆದಿರುವ ಘಟನೆಯು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪರಶುರಾಮಪುರ ಹೋಬಳಿಯ ಗ್ರಾಮವೊಂದರ ಯುವಕ

ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿಯ ಗ್ರಾಮವೊಂದರ ಯುವಕ ಚಿತ್ರದುರ್ಗಕ್ಕೆ ಹೂವಿನ ವ್ಯಾಪಾರಕ್ಕೆ ಹೋಗುತ್ತಿದ್ದ. ಈ ವೇಳೆ ಮಂಗಳಮುಖಿಯರ ಪರಿಚಯವಾಗಿದೆ. ಈ ಪರಿಚಯವನ್ನೇ ಲಾಭವಾಗಿಸಿಕೊಂಡು ಸೆ.1ರಂದು ಓಮ್ನಿ ಕಾರಿನಲ್ಲಿ ಯುವಕನನ್ನು ಅಪಹರಿಸಿ ದಾವಣಗೆರೆಗೆ ಕರೆದೊಯ್ದು ಅಮಲುಪದಾರ್ಥ ಕೊಟ್ಟು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಜೊತೆಗೆ ತೊಡೆಗೆ ಬಿಸಿನೀರು ಹಾಕಿ, ಬರೆ ಎಳೆದಿದ್ದಾರೆ ಎನ್ನಲಾಗಿದೆ.

ಆಪರೇಷನ್‌ಗಾಗಿ 3 ಲಕ್ಷ ರು. ಖರ್ಚಾಗಿದೆ.

ಈ ಚಿತ್ರಹಿಂಸೆಯಿಂದ ಯುವಕ ಹೇಗೋ ತಪ್ಪಿಸಿಕೊಂಡು ಸ್ವಗ್ರಾಮಕ್ಕೆ ಮರಳಿ, ಪೋಷಕರೆದುರು ನೋವು ತೋಡಿಕೊಂಡಿದ್ದಾನೆ. ಆದರೆ ಮರ್ಯಾದೆಗೆ ಅಂಜಿ ಕುಟುಂಬಸ್ಥರು ವಿಷಯ ಬಹಿರಂಗಪಡಿಸಿರಲಿಲ್ಲ. ಆದರೆ ಗುರುವಾರ ಯುವಕನ ಮನೆಗೆ ಬಂದ ಮಂಗಳಮುಖಿಯರು, ಆಪರೇಷನ್‌ಗಾಗಿ 3 ಲಕ್ಷ ರು. ಖರ್ಚಾಗಿದೆ. ಈ ವೆಚ್ಚ ಭರಿಸುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ದಾಂಧಲೆ ಎಬ್ಬಿಸಿದ್ದಾರೆ. ಆಗ ವಿಚಾರ ಬೆಳಕಿಗೆ ಬಂದಿದೆ.

PREV
Get the latest news and stories from Chitradurga district (ಚಿತ್ರದುರ್ಗ ಸುದ್ದಿ) — including local politics, civic issues, rural development, history, events, public services, and community updates. Stay informed about all things Chitradurga with Kannada Prabha
Read more Articles on

Recommended Stories

ರಾಮಗಿರಿಯಲ್ಲಿ ನಿಲ್ಲದ ರೈಲು, ಚೈನ್‌ ಎಳೆದು ರೈಲು ನಿಲ್ಲಿಸಿದ ಪ್ರಯಾಣಿಕರು
ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲ್ಲ