ಗಣತಿ ನಮೂನೆ ವಿತರಣೆಯಲ್ಲಿ ಚಿತ್ರದುರ್ಗ ಪ್ರಥಮ

KannadaprabhaNewsNetwork |  
Published : Jul 07, 2026, 01:15 AM IST
ಚಿತ್ರದುರ್ಗ ಪ್ರಮುಖಸುದ್ದಿ | Kannada Prabha

ಸಾರಾಂಶ

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ । ಜಿಲ್ಲಾಧಿಕಾರಿ ವೆಂಕಟೇಶ್ ಮಾಹಿತಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್)-2026ರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಮನೆ-ಮನೆ ಭೇಟಿ ಕಾರ್ಯಕ್ರಮವು ಯಶಸ್ವಿಯಾಗಿ ಸಾಗುತ್ತಿದ್ದು, ಇದುವರೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಒಟ್ಟು 13,96,020 (ಶೇ.96.91) ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿಯೇ ಚಿತ್ರದುರ್ಗ ಮೊದಲ ಸ್ಥಾನದಲ್ಲಿದೆ.

ಮನೆ-ಮನೆ ಭೇಟಿ ಕಾರ್ಯವು ಜು.29ರವರೆಗೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನೆಗಳಿಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. 2026ರ ಜೂನ್ 16ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 14,40,534 ಮತದಾರರಿದ್ದು, ಒಟ್ಟು 1,661 ಭಾಗಗಳಲ್ಲಿ ಈ ಪ್ರಕ್ರಿಯೆ ಜರಗುತ್ತಿದೆ. ಜು.6ರ ಅಂತ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸಲಾಗಿದೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ 2,51,685 ಮತದಾರರಿದ್ದು, 2,45,251 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 51,661 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದ್ದು, 86 ಮರಣ, 107 ಶಾಶ್ವತ ವಲಸೆ, 18 ಡಬಲ್ ಎಂಟ್ರಿ ಹಾಗೂ ನಾಲ್ವರು ಗೈರು ಹಾಜರಿ ಪ್ರಕರಣಗಳು ಪತ್ತೆಯಾಗಿವೆ.

ಚಳ್ಳಕೆರೆ ಕ್ಷೇತ್ರದಲ್ಲಿ ಒಟ್ಟು 2,25,619 ಮತದಾರರ ಪೈಕಿ 2,23,234 ನಮೂನೆಗಳನ್ನು ವಿತರಿಸಲಾಗಿದ್ದು, 34,014 ನಮೂನೆಗಳು ಗಣಕೀಕೃತಗೊಂಡಿವೆ ಹಾಗೂ 106 ಮರಣ, 86 ವಲಸೆ, 40 ಡಬಲ್ ಎಂಟ್ರಿ, 3 ಗೈರು ಹಾಜರಿ ಪ್ರಕರಣಗಳು ಕಂಡುಬಂದಿವೆ.

ಚಿತ್ರದುರ್ಗ ಕ್ಷೇತ್ರದಲ್ಲಿ 2,69,332 ಮತದಾರರಿದ್ದು, 2,63,446 ನಮೂನೆಗಳನ್ನು ವಿತರಿಸಲಾಗಿದೆ. 33,058 ನಮೂನೆಗಳ ಗಣಕೀಕರಣ ಮುಗಿದಿದ್ದು, 101 ಮರಣ ಹಾಗೂ 71 ವಲಸೆ, 23 ಡಬಲ್ ಎಂಟ್ರಿ, 3 ಗೈರು ಹಾಜರಿ ಪ್ರಕರಣಗಳು ದಾಖಲಾಗಿವೆ.

ಹಿರಿಯೂರು ಕ್ಷೇತ್ರದಲ್ಲಿ 2,51,482 ಮತದಾರರ ಪೈಕಿ 2,46,125 ನಮೂನೆಗಳನ್ನು ವಿತರಿಸಲಾಗಿದ್ದು, 40,264 ನಮೂನೆಗಳನ್ನು ಆನ್‍ಲೈನ್ ಸೇರಿಸಲಾಗಿದೆ. ಇಲ್ಲಿ 190 ಮರಣ ಪ್ರಕರಣಗಳು, 119 ಶಾಶ್ವರ ವಲಸೆ, 58 ಡಬಲ್ ಎಂಟ್ರಿ, 6 ಗೈರು ಹಾಜರಿ ಪತ್ತೆಯಾಗಿವೆ.

ಹೊಸದುರ್ಗ ಕ್ಷೇತ್ರದಲ್ಲಿ 2,03,481 ಮತದಾರರ ಪೈಕಿ 1,92,552 ನಮೂನೆಗಳನ್ನು ವಿತರಿಸಲಾಗಿದ್ದು, 29,401 ನಮೂನೆಗಳು ಗಣಕೀಕರಣಗೊಂಡಿವೆ ಮತ್ತು 202 ಮರಣ ಹಾಗೂ 95 ವಲಸೆ, 44 ಡಬಲ್ ಎಂಟ್ರಿ, 4 ಗೈರು ಹಾಜರಿ ಪ್ರಕರಣಗಳು ವರದಿಯಾಗಿವೆ. ಹೊಳಲ್ಕೆರೆ ಕ್ಷೇತ್ರದಲ್ಲಿ 2,38,935 ಮತದಾರರ ಪೈಕಿ 2,25,412 ನಮೂನೆಗಳನ್ನು ವಿತರಿಸಲಾಗಿದ್ದು, 34,913 ನಮೂನೆಗಳನ್ನು ಗಣಕೀಕರಣ ಮಾಡಲಾಗಿದ್ದು, 202 ಮರಣ, 135 ಶಾಶ್ವತ, 15 ಡಬಲ್ ಎಂಟ್ರಿ, 2 ಗೈರು ಹಾಜರಿ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುವನಾ ಮನೆಗೆ ಡಿಸಿಎಂ ಪರಮೇಶ್ವರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ
ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಅಕ್ಷರಾಭ್ಯಾಸ