ಚಿತ್ರಾವತಿ ಡ್ಯಾಂ: ಚರಿತ್ರೆ ತಿರುಚಬೇಡಿ

KannadaprabhaNewsNetwork |  
Published : Aug 08, 2025, 01:01 AM IST
07ಬಿಜಿಪಿ-1 | Kannada Prabha

ಸಾರಾಂಶ

ಜಿ.ವಿ.ಶ್ರೀರಾಮರೆಡ್ಡಿ ಇಂದು ಜೀವಂತವಾಗಿ ಇಲ್ಲದಿದ್ದರೂ ಸಹ ಈ ಕ್ಷೆತ್ರದ ಜನತೆಯ ಮನಸಿನಲ್ಲಿ ಚಿರಸ್ಥಾಯಿ ಆಗಿ ಉಳಿದ್ದಾರೆ. ನಾವು ಕಾಂಗ್ರೆಸಿಗರಾದರೂ ಸಹ ಅವರ ಮೇಲೆ ನಮಗೆ ಗೌರವ ಹೆಮ್ಮೆ ಅನಿಸುತ್ತೆ. ಆದರೆ ಜಿ.ವಿ.ಶ್ರೀರಾಮರೆಡ್ಡಿ ರವರಿಗೆ ಸಮಾನಂತರವಾಗಿ ಕಾಂಗ್ರೆಸ್ ಶಾಸಕ ಎನ್.ಸಂಪಂಗಿ ಚಿತ್ರಾವತಿ ಅಣೆಕಟ್ಟು ನಿರ್ಮಾಣದಲ್ಲಿ ಪ್ರಮುಖಪಾತ್ರ ವಹಿಸಿದ್ದರು ಎಂಬುದು ನೆನಪಿರಲಿ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಚಿತ್ರಾವತಿ ಅಣೆಕಟ್ಟು ನಿರ್ಮಾಣಕ್ಕೆ ಕಮ್ಯೂನಿಸ್ಟ್ ಪಕ್ಷ ಮತ್ತು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ರವರ ಹೋರಾಟವೇ ಕಾರಣ ಎಂಬುದಾಗಿ ಬಿಂಬಿಸುವುದು ಸರಿಯಲ್ಲ. ಇದರ ಹಿಂದೆ ಮಾಜಿ ಶಾಸಕ ಎಸ್.ಸಂಪಂಗಿ ಸೇರಿದಂತೆ ವಿವಿಧ ಸಂಘಟನೆಗಳು ಸಾಕಷ್ಟು ಶ್ರಮಿಸಿವೆ ಎಂಬುದನ್ನು ಮರೆಯಬಾರದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಮಾಚನಪಲ್ಲಿ ಬಿ. ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯ ವಿಚಾರದ ಜಿ.ವಿ.ಶ್ರೀರಾಮರೆಡ್ಡಿರವರ ಆಪಾರವಾದಂತಹ ಕೊಡುಗೆ ಇದೆ ಇದರಲ್ಲಿ ಎರಡುಮಾತಿಲ್ಲ. ಅವರು ಒಳ್ಳೆಯ ನಾಯಕರಾಗಿದ್ದರು, ಜನರ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ಕಲ್ಪಿಸುವ ವ್ಯಕ್ತಿತ್ವ ಹೊಂದಿದ್ದರು ಎಂದರು.

ಶ್ರೀರಾಮರೆಡ್ಡಿ ಬಗ್ಗೆ ಗೌರವ

ಅವರು ಇಂದು ಜೀವಂತವಾಗಿ ಇಲ್ಲದಿದ್ದರೂ ಸಹ ಈ ಕ್ಷೆತ್ರದ ಜನತೆಯ ಮನಸಿನಲ್ಲಿ ಚಿರಸ್ಥಾಯಿ ಆಗಿ ಉಳಿದ್ದಾರೆ. ನಾವು ಕಾಂಗ್ರೆಸಿಗರಾದರೂ ಸಹ ಅವರ ಮೇಲೆ ನಮಗೆ ಗೌರವ ಹೆಮ್ಮೆ ಅನಿಸುತ್ತೆ. ಆದರೆ ಜಿ.ವಿ.ಶ್ರೀರಾಮರೆಡ್ಡಿ ರವರಿಗೆ ಸಮಾನಂತರವಾಗಿ ಕಾಂಗ್ರೆಸ್ ಶಾಸಕ ಎನ್.ಸಂಪಂಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ತಂದಿರುವುದಲ್ಲದೆ ಚಿತ್ರಾವತಿ ಅಣೆಕಟ್ಟು ನಿರ್ಮಾಣದಲ್ಲಿ ಪ್ರಮುಖಪಾತ್ರ ವಹಿಸಿದ್ದರು ಎಂಬುದು ನೆನಪಿರಲಿ ಎಂದರು.

1994ರಲ್ಲಿ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಪ್ರಯತ್ನ ಮಾಡಿದ್ದರು. ಆದರೆ ಅವರ ಅವಧಿಯಲ್ಲಿ ಅಣೆಕಟ್ಟು ನಿರ್ಮಾಣವಾಗಲಿಲ್ಲ. ಹಂತ ಹಂತವಾಗಿ ಆಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಈ ಭಾಗದ ಅಂದಿನ ಸಂಸದ ಜಾಲಪ್ಪ, ಶಾಸಕ ಎನ್.ಸಂಪಂಗಿ, ಜಿಲ್ಲಾ ಉಸ್ತವಾರಿ ಸಚಿವರಾದ್ದ ವಿ. ಮುನಿಯಪ್ಪ, ಕೋಲಾರ ಕ್ಷೇತ್ರದ ಕೆ.ಹೆಚ್.ಮುನಿಯಪ್ಪ ಸೇರಿದಂತೆ ಈ ಭಾಗದ ಎಲ್ಲಾ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎನ್ನುವುದನ್ನು ಮರೆಯಬಾರದು.

ಸರ್ಕಾರದ ತೀರ್ಮಾನಕ್ಕೆ ಬದ್ಧ

ಚಿತ್ರಾವತಿ ಜಲಾಶಯಕ್ಕೆ ಸರ್ಕಾರ ಯಾರ ಹೆಸರನ್ನಿಟ್ಟರೂ ಅದಕ್ಕೆ ಬದ್ದವಾಗಿತ್ತೇವೆ. ಆದರೆ ಯಾವುದೇ ಕಾರಣಕ್ಕೂ ಕಮ್ಯುನಿಸ್ಟರು ಚರಿತ್ರೆಯನ್ನು ತಿರುಚುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ನಾರಾಯಣ, ಮಾಜಿ ಶಾಸಕ ಎನ್.ಸಂಪಂಗಿ ಅಭಿಮಾನಿಗಳಾದ ರಾಮಚಂದ್ರ, ಗಂಗಿರೆಡ್ಡಿ, ಕೆ.ವಿ.ರಾಧಕೃಷ್ಣ, ಲಕ್ಷ್ಮೀನಾರಾಯಣಪ್ಪ, ಚಲಪತಿ, ರಮೇಶ್ ಮತ್ತಿತರರು ಇದ್ದರು.

PREV

Recommended Stories

ಲಾಕ್‌ಡೌನ್‌ನಿಂದಾಗಿ ಪಂಚರ್ ಅಂಗಡಿ ಮುಚ್ಚಿ ಬೆಲ್ಲದ ಉದ್ಯಮಿಯಾದರು
ಇನ್ನೂ 2 ದಿನ ಮಳೆಯ ಅಬ್ಬರ: ಭಾನುವಾರದ ಬಳಿಕ ಇಳಿಮುಖ