ಜನರ ಸಮಸ್ಯೆ ಆಲಿಸುವ ಅಭ್ಯರ್ಥಿಯನ್ನು ಆರಿಸಿ: ಶ್ರೇಯಸ್‌

KannadaprabhaNewsNetwork | Published : Apr 19, 2024 1:07 AM

ಸಾರಾಂಶ

ಸಾಮಾನ್ಯ ಜನರೊಡನೆ ಬೆರೆಯದೆ ಅವರ ಸಮಸ್ಯೆಗಳನ್ನು ಆಲಿಸದಂತಹ ಸಂಸದರನ್ನು ಆರಿಸದೆ ಜನರಿಗೆ ಸದಾ ಹತ್ತಿರ ವಿರುವ ತಮಗೆ ಕಡೂರು ಕ್ಷೇತ್ರದ ಜನತೆ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮನವಿ ಮಾಡಿದರು.

ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆ, ಸರಸ್ವತೀಪುರ, ಎಮ್ಮೇದೊಡ್ಡಿಯ ಮುಸ್ಲಾಪುರದಹಟ್ಟಿ ಪಂಚಾಯ್ತಿ ವ್ಯಾಪ್ತಿ ಗ್ರಾಮಗಳ ಚುನಾವಣಾ ಪ್ರಚಾರ ಸಭೆ

ಕನ್ನಡಪ್ರಭ ವಾರ್ತೆ, ಕಡೂರುಸಾಮಾನ್ಯ ಜನರೊಡನೆ ಬೆರೆಯದೆ ಅವರ ಸಮಸ್ಯೆಗಳನ್ನು ಆಲಿಸದಂತಹ ಸಂಸದರನ್ನು ಆರಿಸದೆ ಜನರಿಗೆ ಸದಾ ಹತ್ತಿರ ವಿರುವ ತಮಗೆ ಕಡೂರು ಕ್ಷೇತ್ರದ ಜನತೆ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮನವಿ ಮಾಡಿದರು.

ಗುರುವಾರ ಹಾಸನ ಲೋಕಸಭೆ ವ್ಯಾಪ್ತಿ ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆ, ಸರಸ್ವತೀಪುರ, ಎಮ್ಮೇದೊಡ್ಡಿಯ ಮುಸ್ಲಾಪುರದಹಟ್ಟಿ ಪಂಚಾಯ್ತಿ ವ್ಯಾಪ್ತಿ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಬದಲಾವಣೆ ಜಗದ ನಿಯಮ. ಹಾಗೆಯೇ ಕಡೂರಿನಲ್ಲಿ ಜನರು ಬದಲಾವಣೆ ಮಾಡಿ ಬಯಸಿದ್ದಾರೆ. ಅದೇ ಬದಲಾವಣೆ ಲೋಕಸಭಾ ಚುನಾವಣೆಯಲ್ಲಿಯೂ ಆಗಬೇಕಿದೆ. ತಮಗೆ ಮತ ನೀಡಿದ ಕ್ಷೇತ್ರಕ್ಕೇ ಬರದೆ ಚುನಾವಣೆ ಸಮಯದಲ್ಲಿ ಬರುವ ಸಂಸದರಿಗೆ ತಕ್ಕ ಪಾಠ ಕಲಿಸಿ. ನಿಮ್ಮ ಮನೆ ಮಗನಂತೆ ಇರುತ್ತೇನೆ. ಕ್ಷೇತ್ರದ ಸಮಸ್ಯೆ ಪರಿಹರಿಸಲು ಸದಾ ಕಾಲ ಕ್ರಿಯಾಶೀಲವಾಗಿರುತ್ತೇನೆ. ನೀರಾವರಿ ಸೇರಿದಂತೆ ಕಡೂರು ಕ್ಷೇತ್ರಕ್ಕೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ನನಗೆ ಅವಕಾಶ ಕೊಡಿ ಎಂದರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಹೋದೆಡೆಯಲ್ಲೆಲ್ಲ ನಮ್ಮಅಭ್ಯರ್ಥಿ ಶ್ರೇಯಸ್ ಪಟೇಲ್ ಗೆ ಅಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಜನರ ಪ್ರತಿಕ್ರಿಯೆಯಿಂದ ನಮ್ಮಲ್ಲಿ ಗೆಲ್ಲುವ ವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ. ಕಾಂಗ್ರೆಸ್ ನೀಡಿದ ಗ್ಯಾರಂಟಿ ಗಳನ್ನು ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಜಾರಿಗೊಳಿಸಿ ನುಡಿದಂತೆ ನಡೆದರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿ ಸಂಸದರಾಗುತ್ತಾರೆ. ಗೆದ್ದು ಸಂಸದರಾದರೆ ಕಡೂರಿನಲ್ಲಿ ಕಚೇರಿ ತೆರೆದು ಕ್ಷೇತ್ರದ ಜನತೆಯೊಡನೆ ನಿರಂತರ ಸಂಪರ್ಕದಲ್ಲಿದ್ದು ಸ್ಪಂದಿಸುತ್ತಾರೆ ಎಂದರು.ಸರಸ್ವತೀಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಂಸಾಗರ ಸೋಮಶೇಖರ್ ಮಾತನಾಡಿ, ಈ ಭಾಗದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ಶಾಸಕ ಕೆ.ಎಸ್.ಆನಂದ್ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ಸಂಸದರು ಒಮ್ಮೆಯೂ ಇತ್ತ ಬರಲಿಲ್ಲ. ನಮ್ಮ ಸಮಸ್ಯೆ ಆಲಿಸಲಿಲ್ಲ. ಅಂತಹ ಸಂಸದರು ನಮಗೆ ಬೇಕಿಲ್ಲ. ಶ್ರೇಯಸ್ ಪಟೇಲ್ ಅವರಿಗೆ ಹೆಚ್ಚಿನ ಮತ ನೀಡಿ ಅವರನ್ನು ಸಂಸತ್ತಿಗೆ ಕಳಿಸುವಲ್ಲಿ ಎಲ್ಲರೂ ಕೈ ಜೋಡಿಸಿ ಶ್ರಮಿಸೋಣ ಎಂದು ಕರೆ ನೀಡಿದರು.ಕಾಂಗ್ರೆಸ್ ಮುಖಂಡರಾದ ಬೀರೂರು ದೇವರಾಜ್, ಶರತ್ ಕೃಷ್ಣಮೂರ್ತಿ, ಭಂಡಾರಿ ಶ್ರೀನಿವಾಸ್,ತೋಟದ ಮನೆ ಮೋಹನ್, ಪಂಚನಹಳ್ಳಿ ಪ್ರಸನ್ನ, ಡಿಎಸ್ಎಸ್ ಮುಖಂಡ ಕೃಷ್ಣಪ್ಪ, ಪಂಗ್ಲಿ ಮಂಜು, ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಕೆ.ಎಚ್.ಶಂಕರ್, ರುದ್ರೇಗೌಡ, ಪುಟ್ಟೇಗೌಡ, ಸತೀಶ್ ನಾಯ್ಕ, ಕಂಸಾಗರ ರೇವಣ್ಣ, ರೇವತಿ ನಾಗರಾಜ್, ಆನಂದ್, ಕೆ.ವಿ. ಮಂಜುನಾಥ್ಥ್, ಶ್ರೀಕಾಂತ್ ಮತ್ತಿತರರು ಇದ್ದರು.-- ಬಾಕ್ಸ್--ಶಾಸಕರ ಸವಾಲ್‌ಈ ಹಿಂದೆ ಪ್ರಜ್ವಲ್ ಪರವಾಗಿ ಪ್ರಚಾರ ಮಾಡಿದ ನಾವು ನಂತರ ಬಹಳಷ್ಟು ಬಾರಿ ಕರೆದರೂ ಕಡೂರಿಗೆ ಅವರು ಬರಲಿಲ್ಲ. ಕಡೂರಿಗೆ ಯಾವ ಅನುದಾನ ನೀಡಲಿಲ್ಲ. ಅವರ ಪರ ಪ್ರಚಾರ ಮಾಡಿದ್ದಕ್ಕಾಗಿ ಈಗ ನಾಚಿಕೆ ಪಡುವಂತಾಗಿದೆ. ಪ್ರಜ್ವಲ್ ರೇವಣ್ಣ ಕಡೂರು ಕ್ಷೇತ್ರದ ಗ್ರಾಮಗಳ ಹೆಸರನ್ನು ನಿರರ್ಗಳವಾಗಿ ಹೇಳಿದರೆ ರಾಜಕೀಯವನ್ನೆ ಬಿಟ್ಟುಬಿಡುತ್ತೇನೆ ಎಂದು ಶಾಸಕ ಆನಂದ್ ಸವಾಲು ಹಾಕಿದರು.

18ಕೆಕೆಡಿಯು1.ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗುರುವಾರ ತಾಲೂಕಿನ ದೊಡ್ಡಪಟ್ಟಣಗೆರೆ, ಸರಸ್ವತೀಪುರ, ಎಮ್ಮೇದೊಡ್ಡಿಯ ಮುಸ್ಲಾಪುರದಹಟ್ಟಿ ಪಂಚಾಯ್ತಿ ವ್ಯಾಪ್ತಿ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ ನಡೆಯಿತು.

Share this article