ಕನ್ನಡಪ್ರಭ ವಾರ್ತೆ ಯಾದಗಿರಿ
ಮತದಾನ ಮಾಡಿ ನಿಮ್ಮಿಷ್ಟದ ನಾಯಕರನ್ನು ಆಯ್ಕೆ ಮಾಡಿ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಅವರು ಕೋರಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ, ಜಿಲ್ಲಾ ಸ್ವೀಪ್ ಸಮಿತಿಯಿಂದ ಲೋಕಸಭಾ ಚುನಾವಣೆ 2024ರ ಮತದಾನ ಜಾಗೃತಿ ಅಭಿಯಾನ ಅಂಗವಾಗಿ, ಜಾಥಾ ಕಾರ್ಯಕ್ರಮಕ್ಕೆಚಾಲನೆ ಹಾಗೂ ಗಾಂಧಿವೃತ್ತದಲ್ಲಿನ ಪಂಪ ಮಹಾಕವಿ ಮಂಟಪದಲ್ಲಿ ಮತದಾನ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮದು ಕೇವಲ ಒಂದೇ ಮತ ಎಂದು ನಿರ್ಲಕ್ಷ್ಯ ವಹಿಸಬೇಡಿ. ಏಕೆಂದರೆ ಒಂದು ಮತದಿಂದಲೂ ಸರ್ಕಾರವನ್ನು ಬದಲಾಯಿಸುವ ಶಕ್ತಿಯಿದೆ ಎಂದರು. ಜಿಲ್ಲೆಯಲ್ಲಿ ಚುನಾವಣೆ ಸಂಬಂಧ ಎಲ್ಲಾ ಅಧಿಕಾರಿಗಳು ಕ್ರಾಂತಿಕಾರಿಯಾಗಿ ಕಾರ್ಯನಿರ್ವಾಹಿಸುತ್ತಿದ್ದು, 85 ವಯಸ್ಸು ವಯಸ್ಸು ಮೇಲ್ಪಟ್ಟ ಮತದಾರರ ಮನೆಗೆ ಹೋಗಿ ಮತ ಚಲಾವಣೆ ಕಾರ್ಯ ಮಾಡಿದ್ದಾರೆ ಎಂದರು.ಬೈಕ್ ಜಾಥಾವು ನಗರದ ಸರಕಾರಿ ಪದವಿ ಮಹಾವಿದ್ಯಾಲಯದಿಂದ ಆರಂಭಿಸಿದ ಸುಭಾಷ್ ವೃತ್ತ, ಶಾಸ್ತ್ರಿ ವೃತ್ತ, ಲುಂಬಿನಿ ವನ, ಅಂಬೇಡ್ಕರ್ ವೃತ್ತದ, ಕನಕ ನಗರ, ವೀರಶೈವ ಕಲ್ಯಾಣ ಮಂಟಪ ಮಾರ್ಗವಾಗಿ ಗಾಂಧಿ ವೃತ್ತದ ವರೆಗೆ ನಡೆಯಿತು.
ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನೋರ, ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಬಿ. ಚಟ್ನಳ್ಳಿ, ನಗರಸಭೆ ಪೌರಾಯುಕ್ತ ಲಕ್ಷ್ಮಿಕಾಂತ, ಜಿಲ್ಲಾ ಚುನಾವಣಾ ರಾಯಭಾರಿಗಳಾದ ಬಸವರಾಜ ಮಹಾಮನಿ, ಮಾಯಾ ಎಸ್. ಆರ್. ನಾಯಕ, ಗಂಗಾಧರ ಹೊಟ್ಟಿ, ಡಿಹೆಚ್‌ಓ ಪ್ರಭುಲಿಂಗ ಮಾನಕರ್, ನಗರಸಭೆ ಸಿಎಒ ಭೀಮಣ್ಣ ಕೆ. ವೈದ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಜಿಲ್ಲಾ ಪಂಚಾಯ್ತಿ ಎನ್‌ಆರ್ಡಿಎಂಎಸ್ ಪ್ರಾಜೆಕ್ಟ್ ಆಫೀಸರ್ ಸಿದ್ದಾರೆಡ್ಡಿ ಸೇರಿದಂತೆ ಇತರರಿದ್ದರು.