ಹೆಗ್ಗಡೆಯವರಿಂದ ಸಮಾಜಮುಖಿ ಕಾರ್ಯಗಳಿಗೆ ಸಹಕಾರ: ಸದಾಶಿವ ಕುಲಾಲ್

KannadaprabhaNewsNetwork | Published : May 5, 2024 2:08 AM

ಸಾರಾಂಶ

ಪೂಜ್ಯ ವೀರೇಂದ್ರ ಹೆಗಡೆಯವರು ದೇವಾಲಯಗಳ ಜೀರ್ಣೋದ್ಧಾರಕ್ಕೆ, ಡೈರಿ ಕಟ್ಟಡಗಳ ನಿರ್ಮಾಣಕ್ಕೆ ಸೇರಿ ವಿವಿಧ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ, ಜೊತೆಗೆ ಕೆರೆಗಳ ಪುನಶ್ಚೇತನಕ್ಕಾಗಿ ನಮ್ಮ ಊರು ನಮ್ಮ ಕೆರೆ ಯೋಜನೆ ಮೂಲಕ ಕೆರೆ ಹೂಳೆತ್ತುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ರೈತರು ಹಾಗೂ ಪ್ರಾಣಿ- ಪಕ್ಷಿಗಳಿಗೆ ಹೆಚ್ಚಿನ ಅನುಕೂಲವಾಗುತಿದೆ.

ಕನ್ನಡಪ್ರಭ ವಾರ್ತೆ ಬಾಗೂರು

ಅಣತಿ ಗ್ರಾಮದ ಶ್ರೀ ರುದ್ರೇಶ್ವರ ಸ್ವಾಮಿ ( ವೀರಭದ್ರೇಶ್ವರ ಸ್ವಾಮಿ ) ದೇವಾಲಯ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರವಣಬೆಳಗೊಳ ಯೋಜನಾ ಕಚೇರಿ ವತಿಯಿಂದ 2 ಲಕ್ಷ ಹಣವನ್ನು ನೀಡಲಾಗಿದೆ ಎಂದು ಯೋಜನೆಯ ಶ್ರವಣಬೆಳಗೊಳ ಯೋಜನಾ ಕಚೇರಿಯ ಯೋಜನಾಧಿಕಾರಿ ಸದಾಶಿವ ಕುಲಾಲ್ ತಿಳಿಸಿದರು.

ಹೋಬಳಿಯ ಅಣತಿ ಗ್ರಾಮದ ಶ್ರೀ ರುದ್ರೇಶ್ವರ ಸ್ವಾಮಿ ( ವೀರಭದ್ರೇಶ್ವರ ಸ್ವಾಮಿ ) ದೇವಾಲಯದ ಜೀರ್ಣೋದ್ಧಾರಕ್ಕೆ ಸಂಸ್ಥೆ ವತಿಯಿಂದ ನೀಡಲಾಗಿದ್ದ 2ಲಕ್ಷದ ಸಹಾಯಧನದ ಡಿಡಿಯನ್ನು ದೇವಾಲಯ ಸಮಿತಿ ಸದಸ್ಯರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ಪೂಜ್ಯ ವೀರೇಂದ್ರ ಹೆಗಡೆಯವರು ದೇವಾಲಯಗಳ ಜೀರ್ಣೋದ್ಧಾರಕ್ಕೆ, ಡೈರಿ ಕಟ್ಟಡಗಳ ನಿರ್ಮಾಣಕ್ಕೆ ಸೇರಿ ವಿವಿಧ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ, ಜೊತೆಗೆ ಕೆರೆಗಳ ಪುನಶ್ಚೇತನಕ್ಕಾಗಿ ನಮ್ಮ ಊರು ನಮ್ಮ ಕೆರೆ ಯೋಜನೆ ಮೂಲಕ ಕೆರೆ ಹೂಳೆತ್ತುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ರೈತರು ಹಾಗೂ ಪ್ರಾಣಿ- ಪಕ್ಷಿಗಳಿಗೆ ಹೆಚ್ಚಿನ ಅನುಕೂಲವಾಗುತಿದೆ ಎಂದರು.

ಸಂಘಗಳಲ್ಲಿರುವ ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ಹಾಗೂ ಒಬ್ಬಂಟಿ ಜೀವನ ನಡೆಸುತ್ತಿರುವ ವಯೋವೃದ್ಧರಿಗೆ ಮಾಸಿಕ ವೃದ್ಧಾಪ್ಯ ವೇತನ ಕೊಡಲಾಗುತ್ತಿದೆ, ಪೂಜ್ಯ ವೀರೇಂದ್ರ ಹೆಗಡೆಯವರು ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದರು.

ಯೋಜನಾಧಿಕಾರಿಗಳಿಗೆ ಇದೇ ವೇಳೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಹೆಚ್ಚಿನ ಸಹಾಯ ಸಹಕಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು.

ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಿರೇಗೌಡ, ಕಾರ್ಯದರ್ಶಿ ಚಿಕ್ಕರೇಗೌಡ, ಖಜಾಂಚಿ ಪುರದೇ ಗೌಡ, ನಿರ್ದೇಶಕರಾದ ಎಸಿ ನಾಗೇಶ್, ಎಸಿ ಪರಮೇಶ್, ಯೋಗಾನಂದ, ಪರಮೇಶಯ್ಯ, ಎಸಿ ಶಿವಸ್ವಾಮಿ, ಎಎಸ್ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್, ಯೋಜನೆಯ ಬಾಗೂರು ವಲಯದ ಮೇಲ್ವಿಚಾರಕ ಹನುಮಯ್ಯ. ಕೆ. ಜೆವಿಕೆ ಮೇಲ್ವಿಚಾರಕಿ ಶ್ರೀಮತಿ ಹರ್ಷಾ, ಪ್ರಮುಖರಾದ ರವಿಕುಮಾರ್, ಪ್ರಕಾಶ್, ನಂದೀಶ್, ಬಸವರಾಜ್ ಶಿವ ಸ್ವಾಮಿ, ಸೇವಾ ಪ್ರತಿನಿಧಿಗಳಾದ ನಳಿನಾ, ರಾಜಕುಮಾರ್ ಸೇರಿ ದೇವಾಲಯದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Share this article