ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ನಿತ್ಯ ಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆದ ಡಾ.ಎಚ್.ಡಿ.ಚೌಡಯ್ಯನವರ 99ನೇ ಜನ್ಮದಿನಾಚರಣೆ ಹಾಗೂ 2026ನೇ ಸಾಲಿನ ರಾಜ್ಯ ಮಟ್ಟದ ಸಮಾಜ ಸೇವಾ, ಕ್ರೀಡಾ ಮತ್ತು ಕೃಷಿ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಚ್.ಕೆ.ವೀರಣ್ಣಗೌಡರು, ಕೆ.ವಿ.ಶಂಕರಗೌಡರು ಮತ್ತು ಸಾಹುಕಾರ್ ಚೆನ್ನಯ್ಯನವರಂತಹ ಹಿರಿಯ ನಾಯಕರ ಪ್ರಾಮಾಣಿಕ ರಾಜಕೀಯ ಪರಂಪರೆಯನ್ನು ಚೌಡಯ್ಯನವರು ಮುಂದುವರಿಸಿಕೊಂಡು ಬಂದಿದ್ದರು. ಚೌಡಯ್ಯನವರಿಗೆ ಸಾರ್ವಜನಿಕ ಬದುಕಿನಲ್ಲಿ ಅತ್ಯಮೂಲ್ಯವಾಗಿ ಇರಬೇಕಾದ ಪ್ರಾಮಾಣಿಕತೆ, ನಿಸ್ಪ್ರುಹತೆ ಹಾಗೂ ತಮಗೆ ಏನು ಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದ ದೊಡ್ಡ ಮಾಣಿಕ್ಯ ಎಂದರು.ನಶಿಸುತ್ತಿರುವ ರಾಜಕೀಯ ಪರಂಪರೆಯಲ್ಲಿ ಸಂಸ್ಥೆಗಳನ್ನು ಮುಂದುವರಿಸುವುದು ಸುಲಭ. ಆದರೆ, ಕಟ್ಟುವುದು ಕಷ್ಟ. ಸಂಸ್ಥೆಗಳನ್ನು ಬೆಳೆಸುವ ಕಲೆಯನ್ನು ಚೌಡಯ್ಯನವರು ಕರಗತ ಮಾಡಿಕೊಂಡಿದ್ದರು. ಸಾರ್ವಜನಿಕ ಮತ್ತು ಸಂಸ್ಥೆಗಳ ಕೆಲಸಕ್ಕಾಗಿ ಯಾರ ಮನೆ ಬಾಗಿಲನ್ನಾದರೂ ಕಾಯಲು ಸಿದ್ದರಿದ್ದ ಅವರು, ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಎಂದಿಗೂ ಯಾರ ಮುಂದೆಯೂ ಕೈ ಚಾಚಲಿಲ್ಲ ಎಂದರು.
ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಎನ್.ಎಸ್.ರಾಮೇಗೌಡ ಮಾತನಾಡಿ, ಪ್ರತಿಯೊಂದು ವಿಶ್ವ ವಿದ್ಯಾಲಯಕ್ಕೂ ಮೂರು ಪ್ರಮುಖ ಉದ್ದೇಶಗಳಿರುತ್ತವೆ. ಬೋಧನೆ ಪರೀಕ್ಷೆ ಮತ್ತು ಸಂಶೋಧನೆ, ಹಾಗೂ ವಿಸ್ತರಣಾ ಚಟುವಟಿಕೆಗಳು ಅದರಲ್ಲೂ ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಸಂಶೋಧನೆಗಳನ್ನು ರೈತರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಎನ್.ಎಸ್.ರಾಮೇಗೌಡ ಅವರಿಗೆ ಚೌಡಯ್ಯ ಸಮಾಜ ಸೇವಾ ಪ್ರಶಸ್ತಿ, ಪ್ರಗತಿಪರ ಕೃಷಿಕ ಎನ್.ವೆಂಕಟೇಶ್ ಅವರಿಗೆ ಚೌಡಯ್ಯ ಕೃಷಿ ಪ್ರಶಸ್ತಿ ತಲಾ 20 ಸಾವಿರ ನಗದು ಪ್ರಶಸ್ತಿ ಫಲಕದೊಂದಿಗೆ ಗೌರವಿಸಲಾಯಿತು.