ವಚನಗಳ ಮೂಲಕ ಸಮಾನತೆ ಸಾರಿದ ಚೌಡಯ್ಯ

KannadaprabhaNewsNetwork |  
Published : Jan 22, 2026, 02:30 AM IST
ನವಲಗುಂದದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯಲ್ಲಿ ತಹಸೀಲ್ದಾರ್‌ ಸುಧೀರ್ ಸಾಹುಕಾರ ಮಾತನಾಡಿದರು. | Kannada Prabha

ಸಾರಾಂಶ

ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯ ಪ್ರಮುಖವಾದವರು. ಅವರ ವಚನಗಳಲ್ಲಿ ಜೀವನದ ಸಾರವೇ ಅಡಗಿದೆ. ಪಟ್ಟಣದ ಯಾವುದಾದರೊಂದು ಪ್ರಮುಖ ರಸ್ತೆಯೊಂದಕ್ಕೆ ಅಂಬಿಗರ ಚೌಡಯ್ಯ ಎಂದು ನಾಮಕರಣ ಮಾಡಬೇಕು.

ನವಲಗುಂದ:

ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾನತೆ ಸಾರಿದ ಮಹಾಪುರುಷನೆಂದು ತಹಸೀಲ್ದಾರ್ ಸುಧೀರ್ ಸಾಹುಕಾರ ಹೇಳಿದರು.

ಅವರು ಬುಧವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಗಂಗಾಮತಸ್ಥ ಹಿತಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸುವ ಮೂಲಕ ಚೌಡಯ್ಯನವರ 906ನೇ ಜಯಂತಿ ಉದ್ದೇಶಿಸಿ ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ನಿಂಗಪ್ಪ ಅಸುಂಡಿ ಮಾತನಾಡಿ, ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯ ಪ್ರಮುಖವಾದವರು. ಅವರ ವಚನಗಳಲ್ಲಿ ಜೀವನದ ಸಾರವೇ ಅಡಗಿದೆ. ಪಟ್ಟಣದ ಯಾವುದಾದರೊಂದು ಪ್ರಮುಖ ರಸ್ತೆಯೊಂದಕ್ಕೆ ಅಂಬಿಗರ ಚೌಡಯ್ಯ ಎಂದು ನಾಮಕರಣ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ತಾಲೂಕು ಗಂಗಾಮತಸ್ಥ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಅರ್ಜುನ ಗುಳೇದ, ಕಿರಣ ಉಳ್ಳಿಗೇರಿ ಮಾತನಾಡಿದರು. ನಂತರ ವಿಶ್ವಗಂಗಾನಗರದಲ್ಲಿರುವ ಗಂಗಾ ಪರಮೇಶ್ವರಿ ಹಾಗೂ ನಿಜಶರಣ ಅಂಬಿಗೇರ ಚೌಡಯ್ಯ ದೇವಸ್ಥಾನದಲ್ಲಿ ಅನ್ನ ಪ್ರಸಾದ ಜರುಗಿತು.

ಮುಖಂಡರಾದ ಸಹದೇವ ಗುಳೇದ, ಸುರೇಶ ಹಿರಗಣ್ಣವರ, ಬಸವರಾಜ ತೊರಗಲ್ಲ, ಮಂಜುನಾಥ ಸುಣಗಾರ, ಧರ್ಮರಾಜ ಗುಳೇದ, ನಿಂಗಪ್ಪ ಬಾರಕೇರ, ಪರಶುರಾಮ ಗುಳೇದ ಶರಣಪ್ಪ ಬನಹಟ್ಟಿ, ಪಾಪು ಅಂಬಿಗೇರ, ಯಲ್ಲಪ್ಪ ಮಸಾಲಜಿ, ಆನಂದ ಮಸಾಲಜಿ, ಶಿವಾನಂದ ಗುಡಿಸಾಗರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌
ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಿಂದು ದೇವತೆಗಳ ಬಗ್ಗೆ ಅವಹೇಳನಕ್ಕೆ ‘ಹೈ’ ಕಿಡಿ