ದ.ಕ. ಜಿಲ್ಲೆಯ ದಾನ, ಧರ್ಮ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ: ಕ್ಯಾ.ಚೌಟ

KannadaprabhaNewsNetwork |  
Published : Mar 01, 2026, 03:15 AM IST
ಒಳ್ಳೆಯ  | Kannada Prabha

ಸಾರಾಂಶ

ಬಿಜೆಪಿ ಮುಖಂಡ ಹಾಗೂ ದಿ.ಮೈಸೂರು ಇಲೆಕ್ಟ್ರಿಕಲ್ಸ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಕುರ್ನಾಡು ಗ್ರಾಮದ ಅಬೆಮಾರ್ ಎಂಬಲ್ಲಿ ರುಕ್ಮಯ ಮತ್ತು ವಿಜಯ ಎಂಬ ಮಕ್ಕಳಿಲ್ಲದ ಹಿರಿಯ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ನಿರ್ಮಿಸಿ ಕೊಟ್ಟ ಆರನೇ ನೂತನ ಮನೆ "ನಮೋ ಕುಟೀರ "ದ ಕೀಲಿ ಕೈಯನ್ನು ಫಲಾನುಭವಿ ಕುಟುಂಬಕ್ಕೆ ಬುಧವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ದಾನ, ಧರ್ಮದ ಕೈಂಕರ್ಯಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಒಳ್ಳೆಯ ಕೆಲಸಗಳಿಗೆ ಎಲ್ಲರೂ ಕೈಜೋಡಿಸುವ ಮನಸ್ಥಿತಿಯನ್ನು ಹೊಂದಿದ್ದಾರೆ. ನಿರ್ದಿಷ್ಟ ಗುರಿ ಸಾಧನೆಯ ಸೇವಾ ಕಾರ್ಯಗಳು ಹಿಂದೂ ಸಮಾಜದ ಇಂದಿನ ಅನಿವಾರ್ಯತೆಯಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಬಿಜೆಪಿ ಮುಖಂಡ ಹಾಗೂ ದಿ.ಮೈಸೂರು ಇಲೆಕ್ಟ್ರಿಕಲ್ಸ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಕುರ್ನಾಡು ಗ್ರಾಮದ ಅಬೆಮಾರ್ ಎಂಬಲ್ಲಿ ರುಕ್ಮಯ ಮತ್ತು ವಿಜಯ ಎಂಬ ಮಕ್ಕಳಿಲ್ಲದ ಹಿರಿಯ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ನಿರ್ಮಿಸಿ ಕೊಟ್ಟ ಆರನೇ ನೂತನ ಮನೆ "ನಮೋ ಕುಟೀರ "ದ ಕೀಲಿ ಕೈಯನ್ನು ಫಲಾನುಭವಿ ಕುಟುಂಬಕ್ಕೆ ಬುಧವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಸಮಾಜಮುಖಿ ಕಾರ್ಯಗಳನ್ನು ನಡೆಸಿದಲ್ಲಿ ಹಿಂದೂ ಸಮಾಜ ಸಧೃಡಗೊಳ್ಳಲು ಸಾಧ್ಯವಿದೆ ಎಂದರು.

ಮಾಡೂರು ಮರಿಯಣ್ಣಪಾಲು ಶಿವದುರ್ಗಾಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನವಿತ್ತರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್, ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಪೊಯ್ಯತ್ತಾಯ, ನಾರ್ಯಗುತ್ತುವಿನ ಗಡಿ ಪ್ರಧಾನ ಪದ್ಮನಾಭ ಯಾನೆ ಮಂಜು ಭಂಡಾರಿ, ಹಿರಿಯರಾದ ನಾಗರಾಜ ಭಟ್, ಇನೋಳಿ ಶ್ರೀ ಸೋಮನಾಥ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜಾ, ಡಾ.ಅಣ್ಣಯ್ಯ ಕುಲಾಲ್, ಮಾಜಿ ತಾ.ಪಂ ಸದಸ್ಯ ಸೇಸಪ್ಪ ಟೈಲರ್, ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ ಸೋಮೇಶ್ವರ, ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ, ಕುರ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಗಣೇಶ್ ನಾಯ್ಕ್ ಕುರ್ನಾಡು ಗುತ್ತು , ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ , ಪ್ರಮುಖರಾದ ಜಯರಾಮ ಶೆಟ್ಟಿ ಕಂಬ್ಳಪದವು, ರಾಜೇಶ್ ಮಡಿವಾಳ, ಹಿರಿಯರಾದ ನಾರಾಯಣ ಶೆಟ್ಟಿ ಬಲೆತ್ತೋಡು, ಉದ್ಯಮಿಗಳಾದ ಚಂದ್ರಹಾಸ್ ಉಳ್ಳಾಲ್, ರಾಧಾಕೃಷ್ಣ ರೈ ಉಮಿಯ, ದಿ .ಮೈಸೂರು ಇಲೆಕ್ಟ್ರಿಕಲ್ಸ್ ಲಿ. ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಪತ್ನಿ ವೀಣಾ ರೈ, ಪುತ್ರಿ ಸ್ಪರ್ಶ ಎಸ್.ರೈ, ಪುತ್ರ ಸಮ್ಯಕ್ತ್ ರೈ ಬೋಳಿಯಾರ್ ಇದ್ದರು.

ರವಿ ರೈ ಪಜೀರು ನಿರೂಪಿಸಿದರು.

ಸಮಾಜದ ಅರ್ಹ ಅಶಕ್ತ ವರ್ಗದವರಿಗೆ ಹತ್ತು ಮನೆಗಳನ್ನ ನಿರ್ಮಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಈ ಸರಣಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಪತ್ನಿ, ಮಕ್ಕಳು ಮತ್ತು ಸಮಾಜ ಬಾಂಧವರ ನಿರಂತರ ಪ್ರೋತ್ಸಾಹದಿಂದ ಸಮಾಜಮುಖಿ ಕಾರ್ಯಗಳನ್ನ ನಡೆಸಲು ಉತ್ಸಾಹ ಇಮ್ಮಡಿಯಾಗಿದೆ. ದೇವರು ಕರುಣಿಸಿದರೆ ನೂರು ನಮೋ ಕುಟೀರಗಳನ್ನ ಕಟ್ಟುವ ಮಹದಾಸೆ ಇದೆ.। ಸಂತೋಷ್ ಕುಮಾರ್ ಬೋಳಿಯಾರ್‌ ಬಿಜೆಪಿ ಮುಖಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಸಂಘಟನೆಗೆ ಮತ್ತೊಂದು ಹೆಸರು ಸುಮನಸಾ: ಡಾ. ತಲ್ಲೂರು
ಬ್ರಹ್ಮರ ಕೂಟ್ಲು ಟೋಲ್ ವಿರುದ್ಧ 3ರಂದು ಬೃಹತ್ ಪ್ರತಿಭಟನೆ