ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ವಿಶೇಷ ಸಂದೇಶಕರಾದ ರೆವರೆಂಡ್ ಪಿ.ಶಾಂತಕುಮಾರ್ ಕ್ರಿಸ್ಮಸ್ ಹಬ್ಬದ ಸಂದೇಶದೊಂದಿಗೆ, ಆಶೀರ್ವಚನ ನೀಡಿ, ದೇವರು ನೀಡಿದ ಉದಾತ್ತ ವಿಚಾರಗಳಾದ ಎಲ್ಲರನ್ನೂ ಪ್ರೀತಿಸುವ, ಸಹಕಾರ, ತಾಳ್ಮೆ, ಕುಟುಂಬ ವ್ಯವಸ್ಥೆಯಲ್ಲಿ ಅನ್ಯೋನ್ಯತೆ, ಕ್ಷಮೆ, ವಿನಯತೆಯಂತಹ ವಿಚಾರಗಳನ್ನು ಮೈಗೂಡಿಸಿಕೊಂಡು ದೇವರೊಂದಿಗೆ ಬದುಕು ಸವಿಸಲು ಮುಂದಾಗಬೇಕು. ಶ್ರೀಸಾಮಾನ್ಯರಂತೆ ಹುಟ್ಟಿದ ಏಸು ಜಗತ್ತಿನಲ್ಲಿ ತನ್ನ ಸರಳತೆಯ ಮೂಲಕ ಪ್ರೀತಿ, ಶಾಂತಿ, ನೆಮ್ಮದಿ ಹಾಗೂ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಲು ತಿಳಿಸಿದ್ದರು.
ಕ್ರಿಸ್‌ಮಸ್ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಕ್ರಿಸ್‌ಮಸ್ ಸಂಕೇತಿಸುವ ಸೌಹಾರ್ದತೆ ಮತ್ತು ಸಹಾನುಭೂತಿಯ ಹಬ್ಬವನ್ನು ಆಚರಿಸೋಣ ಮತ್ತು ಎಲ್ಲರೂ ಸಂತೋಷ ಮತ್ತು ಆರೋಗ್ಯಕರವಾಗಿರುವ ಜಗತ್ತಿಗಾಗಿ ಕೆಲಸ ಮಾಡೋಣವೆಂದು ಸಂದೇಶ ನೀಡಿದರು.ಕ್ರಿಸ್‌ಮಸ್ ನಿಮಿತ್ತ ಮೆಥೋಡಿಸ್ಟ್ ಚರ್ಚ್‌ನಲ್ಲಿ ಧರ್ಮ ಗುರುಗಳು ಸಾಮೂಹಿಕ ಪ್ರಾರ್ಥನೆಗೆ ಮಾರ್ಗದರ್ಶನ ನೀಡಿದರು. ಏಸು ಕ್ಷಮೆಯನ್ನು ದೊಡ್ಡದೆಂದು ಹೇಳಿದ್ದಾನೆ. ಆತನ ಮಾರ್ಗದಲ್ಲಿ ನಡೆಯುವ ಮೂಲಕ ಎಲ್ಲರೂ ಸ್ವರ್ಗಸ್ಥರಾಗಬೇಕು ಎಂದು ನೆರೆದ ಭಕ್ತರಿಗೆ ಉಪದೇಶಿಸಿದರು.
ಇಲ್ಲಿಯೂ ವಿಶೇಷ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು.