ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ 11ನೇ ವರ್ಷದ ಭಾವೈಕ್ಯತೆಯ ಕ್ರಿಸ್ಮಸ್ ಸಂಭ್ರಮಾಚರಣೆ ಮತ್ತು ಕ್ಯಾರಲ್ ಸಂಗೀತ ಸ್ಪರ್ಧೆ ಡಿ.22ರಂದು ಸಂಜೆ 3.30ರಿಂದ ರಾತ್ರಿ 8ರ ವರೆಗೆ ಮಂಗಳೂರಿನ ಜೆಪ್ಪು ಸಂತ ಅಂತೋನಿ ಆಶ್ರಮದ ತೆರೆದ ಮೈದಾನದಲ್ಲಿ ನಡೆಯಲಿದೆ.ಕ್ಯಾರಲ್ ಸಂಗೀತ ಸ್ಪರ್ಧೆ ಸಂಜೆ 3.30ಕ್ಕೆ ಪ್ರಾರಂಭವಾಗಲಿದೆ. ಈ ಸ್ಪರ್ಧೆಯಲ್ಲಿ ಒಬ್ಬ ವ್ಯಕ್ತಿಗೆ ಭಾಗವಹಿಸುವ ಅವಕಾಶವಿದೆ. ಕ್ರಿಸ್ಮಸ್ ವೋಟಾಕ್ಸ್ ಇತರ ಸ್ಪರ್ಧೆಗಳು ನಡೆಯಲಿದೆ. ಈ ಸ್ಪರ್ಧೆಗೆ 15 ನಿಮಿಷದ ಕಾಲಾವಕಾಶವಿದೆ. ಈ ಸ್ಪರ್ಧೆಯಲ್ಲಿ ಡ್ಯಾನ್ಸ್, ಸಂಗೀತ, ಸ್ಕಿಟ್, ಸಂತಾಕ್ಲಾಸ್ ಹಾಗೂ ಕಾರ್ಯಕ್ರಮ ನಿರೂಪಣೆ ಅಳವಡಿಕೆಯಾಗುತ್ತಿದೆ. ಹೆಸರು ನೊಂದಾಯಿಸಲು ಡಿ.21 ಕೊನೆಯ ದಿನಾಂಕವಾಗಿರುತ್ತದೆ ಎಂದು ಕಾರ್ಯಕ್ರಮದ ಸಂಚಾಲಕ ಜೆ.ನಾಗೇಂದ್ರ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಂಜೆ 5.30ಕ್ಕೆ ಕ್ರಿಸ್ಮಸ್ ಸಂಭ್ರಮಾಚರಣೆಯ ಭಾವೈಕ್ಯತೆಯ ಸಂಗಮದ ಸಭಾ ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಡಾ. ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸುವರು. ಮಂಗಳೂರು ಶ್ರೀ ರಾಮಕೃಷ್ಣ ಮಠದ ಶ್ರೀ ಯುಗೇಶಾನಂದ ಸ್ವಾಮೀಜಿ ಶುಭಾಶಂಸನೆ ಮಾಡುವರು. ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕಾರಿಯಾ ಜೋಕಟ್ಟೆ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕ ರೆ. ಫಾ. ಜೆ. ಬಿ.ಕ್ರಾಸ್ತಾ, ಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಮತ್ತಿತರರು ಭಾಗವಹಿಸಲಿದ್ದಾರೆ. ರಾತ್ರಿ ಆಶ್ರಮದಲ್ಲಿರುವ ಸುಮಾರು 500 ನಿವಾಸಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ, ಕಾರ್ಯಕ್ರಮದ ಕೊನೆಗೆ ಸಹಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದರು.ಪ್ರಮುಖರಾದ ಎನ್.ಪಿ. ಮನುರಾಜ್, ಮನೀಷ್ ಬೋಳಾರ್, ಮೀನಾ ಟೆಲ್ಲಿಸ್, ವಿದ್ಯಾ ಅತ್ತಾವರ, ಇಮ್ರಾನ್ ಕುದ್ರೋಳಿ ಇದ್ದರು.