ಕನ್ನಡಪ್ರಭ ವಾರ್ತೆ ಹಾಸನ
ನಗರದ ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ವ್ಯಾಪಾರ ಜೋರಾಗಿಯೇ ನಡೆಯಿತು. ಪ್ರಮುಖವಾಗಿ ಸೇವಂತಿಗೆ ಒಂದು ಮಾರಿಗೆ ೧೦೦ರಿಂದ ೧೫೦ ರೂಗಳಿದ್ದು, ಪುಟ್ಟಬಾಳೆ ಒಂದು ಕೆಜಿಗೆ ೧೨೦ರಿಂದ ೧೫೦ ರು. ಗಳು, ತಾವರೆ ಎರಡಕ್ಕೆ ೧೦೦ರಿಂದ ೧೨೦, ಸೇಬು ಒಂದು ಕೆಜಿಗೆ ೧೦೦ರಿಂದ ೨೦೦, ಅನಾನಸ್ ಎರಡಕ್ಕೆ ೧೦೦ರಿಂದ ೧೩೦, ಬಾಳೆಕಂದು ಎರಡಕ್ಕೆ ೬೦ರಿಂದ ೧೦೦ ರು. ಗಳು, ಮಾವಿನ ಎಲೆ ಕಟ್ಟಿಗೆ ೨೦ ರು. ಗಳು ಇದ್ದರೇ, ಬಳೆಗಳಲು, ರವಿಕೆ ಕಣ, ಇತರೆ ವಸ್ತುಗಳ ವ್ಯಾಪಾರ ಜೋರಾಗಿಯೇ ನಡೆಯಿತು. ಇನ್ನು ಕೆಲ ವ್ಯಾಪಾರಸ್ಥರು ಬೇಗ ಬೇಗ ಮನೆಗೆ ಹೋಗಲು ಕಡಿಮೆ ಬೆಲೆಗೆ ಕೊಡುತ್ತಿದ್ದರು. ಕೆಲ ಮುಖ್ಯ ವ್ಯಾಪರಾದ ರಸ್ತೆಗಳಲ್ಲಿ ಮಹಿಳೆಯರದೆ ಸದ್ದು ಕೇಳಿ ಬಂದಿತು.