ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ 2015-18ರ ಅವಧಿಯಲ್ಲಿ ಮಾಸ್ಟರ್ ಪ್ಲಾನ್‌ನ ಸಿದ್ಧತೆ ಆರಂಭಗೊಂಡಿದ್ದು ಉದ್ಯೋಗ ಸೃಷ್ಟಿಗಾಗಿ ಈಗ 200 ಎಕರೆ ಜಮೀನು ಮೀಸಲಿಡುವಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಆ ಅವಧಿಯಲ್ಲಿ ಮಂಜು ಅವರೇ ಶಾಸಕರು, ಸಚಿವರಾಗಿದ್ದರು. ಅವರ ನಂತರ ರಾಮಸ್ವಾಮಿ ಅವರು ಶಾಸಕರಾಗಿದ್ದರು. 2023ರಲ್ಲಿ ಈ ಉದ್ದೇಶಿತ ಪ್ಲಾನ್‌ನ ಕುರಿತು ಸಾರ್ವಜನಿಕ ಆಕ್ಷೇಪಣೆಯನ್ನು ವಾರ್ತಾ ಇಲಾಖೆ ಮೂಲಕ ಪ್ರಕಟಣೆ ಕೂಡ ನಡೆದಿದೆ. ಹಾಲಿ ಈ ಅವಧಿಯಲ್ಲಿಯೂ ಕೂಡ ಎ. ಮಂಜು ಅವರೇ ಶಾಸಕರಾಗಿದ್ದಾರೆ. ಈ ಪ್ಲಾನ್‌ನ ಸಾಧಕ - ಬಾಧಕಗಳ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿಲ್ಲ. ನಗರ ಯೋಜನಾ ಪ್ರಾಧಿಕಾರದ ಆಡಳಿತ ಮಂಡಳಿ ಪ್ಲಾನ್‌ನಲ್ಲಿ ಕಂಡುಬಂದಿರುವ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಮಾಹಿತಿ ಮೇರೆಗೆ ಶ್ರೀದೊಡ್ಡಮಠದ ಶ್ರೀಮಲ್ಲಿಕಾರ್ಜುನಸ್ವಾಮಿಯವರು ಸೇರಿದಂತೆ ಕೆಲವು ರೈತರು ನನ್ನಬಳಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆಯೇ ವಿನಃ ಈ ಸಂಬಂಧ ಯಾವುದೇ ಆಸೆ, ಆಮಿಷಗಳನ್ನು ಒಳಗೊಂಡು ಭೇಟಿ ನಡೆದಿಲ್ಲ. ಶಾಸಕರ ಅಕ್ರಮ ಅವ್ಯವಹಾರಗಳಿಗೆ ಕಡಿವಾಣ ಹಾಕಿದ್ದೇವೆ ಹೊರತು ನಮ್ಮ ಒಳ್ಳೆಯ ಕೆಲಸ ಮುಂದುವರಿಯಲಿದೆ. ಮಲ್ಲಿಕಾರ್ಜುನಸ್ವಾಮಿ ಅವರು ಪೂಜಿಸುವ ದೇವಸ್ಥಾನ ಬಳಿ ಬಂದು ನಾವು ಹಣ ಕೇಳಿದ್ದರೆ ಪ್ರಮಾಣ ಮಾಡಲಿ ಎಂದು ಪಂಥ್ವಾಹನ ನೀಡಿದರು.ಈ ಹಿಂದೆ ಸಿದ್ದರಾಮಯ್ಯ ಅವರಿಂದ ಸಚಿವರಾಗಿ ಅಧಿಕಾರ ಅನುಭವಿಸಿ ಕ್ಷೇತ್ರದ ಅಭಿವೃದ್ಧಿಗೆ ಹಣ ಪಡೆದಿದ್ದಾರೆ. ಈಗ ಬೇರೆ ಪಕ್ಷದಲ್ಲಿದ್ದೇನೆ ಎಂಬ ಅಹಂನಿಂದ ನಮ್ಮ ಮುಖ್ಯಮಂತ್ರಿ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಮಂಜು ಅವರ ರಾಜಕೀಯ ನಡೆ ಏನೆಂಬುದು ಜನರಿಗೆ ಗೊತ್ತಿರುವ ವಿಚಾರ. ಹಾಲಿ ಶಾಸಕರು ಅವರೇ ಆಗಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಿ ಸರ್ಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ. ಬದಲಾಗಿ ರಾಜಕೀಯವಾಗಿ ಎದುರಾಳಿಗಳಾಗಿರುವ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಉತ್ತಮವಾಗಿ ನಡೆಯುತ್ತಿರುವ ಶಕ್ತಿ ದೇವತಾ ಪೀಠ ಶ್ರೀ ಅರಸೀಕಟ್ಟೆಯಮ್ಮ ದೇವಸ್ಥಾನ ಸಮಿತಿ, ಕೃಷ್ಣೇಗೌಡರ ಕ್ರಷರ್ ಮತ್ತು ನನ್ನ ವಿರುದ್ಧ ಶಾಸನ ಸಭೆಯಲ್ಲಿ ಪ್ರತಿಪಾದಿಸಿ ರಾಜಕೀಯವಾಗಿ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರೂ ಉದ್ಧಾರವಾಗಿಲ್ಲ:ಕ್ಷೇತ್ರದಲ್ಲಿ ರಾಜಕೀಯವಾಗಿ ಕಳೆದ 40 ವರ್ಷಗಳಿಂದ ಅಧಿಕಾರ ಅನುಭವಿಸುತ್ತಿರುವ ಶಾಸಕ ಎ. ಮಂಜು ಅವರು ಕಾಲಿಟ್ಟ ಮನೆ ಮತ್ತು ಒಡನಾಟ ಇಟ್ಟುಕೊಂಡಿರುವ ಯಾವುದೇ ಕಟುಂಬ ಉದ್ಧಾರ ಆಗಿಲ್ಲ. ಬದಲಾಗಿ ಸರ್ವನಾಶವಾಗಿರುವ ಉದಾಹರಣೆ ದೊಡ್ಡಸಂಖ್ಯೆಯಲ್ಲಿ ಇದೆ. ಈಗ ಇವರು ಕಾಲಿಟ್ಟ ದೇವೇಗೌಡರ ಕುಟುಂಬದವರ ಸ್ಥಿತಿ ಇದಕ್ಕೆ ಉದಾಹರಣೆ. ಈ ಬಗ್ಗೆ ನಾನು ಹೆಸರು ಹೇಳುವ ಅಗತ್ಯವಿಲ್ಲ. ಜನರಿಗೆ, ರಾಜಕೀಯ ಮುಖಂಡರಿಗೆ ತಿಳಿದಿದೆ ಎಂದು ವ್ಯಂಗ್ಯವಾಡಿದರು.