ಕನ್ನಡಪ್ರಭ ವಾರ್ತೆ ಮಲ್ಪೆ
ದೇವಾಲಯಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ವಿಶೇಷವಾದ ಮಹತ್ವವಿದ್ದು, ದೇವರಿಗೆ ಸ್ತುತಿ ಮತ್ತು ಆರಾಧನೆ ಸಲ್ಲಿಸಲು ಸಹಕಾರಿಯಾಗುತ್ತದೆ. ಕಟ್ಟಡಗಳಿಗಿಂತಲೂ ನಮಗೆ ಅತ್ಯಾವಶ್ಯಕವಾದುದು ಆಂತರಿಕ ನಂಬಿಕೆ, ದೇವರಿಗಿರುವ ಗೌರವ ಮತ್ತು ಬಡವರನ್ನು ಗೌರವಿಸುವ ಜೀವನ ಶೈಲಿ. ಒಳಗಿನ ಭಕ್ತಿ ಇಲ್ಲದ ಹೊರಗಿನ ಆಚರಣೆಗಳಿಗೆ ಯಾವುದೇ ಅರ್ಥವಿಲ್ಲ ಎಂದವರು ಹೇಳಿದರು.
ನಂತರ ಬಲಿಪೂಜೆ, ಜಪಸರ ಪ್ರಾರ್ಥನೆ ನಡೆದು, ಕಿರು ದೇವಾಲಯದಿಂದ ಮುಖ್ಯ ದೇವಾಲಯದವರೆಗೆ ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಯಿತು. ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮದ ನಿರ್ವಹಣೆಯನ್ನು ವಿಲ್ಸನ್ ಡಿಸೋಜಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ.ಜೆರಾಲ್ಡ್ ಐಸಾಕ್ ಲೋಬೊ, ಚರ್ಚಿನ ಪ್ರಧಾನ ಧರ್ಮಗುರು ಡೆನಿಸ್ ಡೆಸಾ ಅವರನ್ನು ಚರ್ಚಿನ ಪರವಾಗಿ ಗೌರವಿಸಲಾಯಿತು.ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಕುಲಪತಿ ಸ್ಟೀಫನ್ ಡಿಸೋಜಾ, ಮಾಜಿ ಶಾಸಕ ಜೆ ಆರ್ ಲೋಬೊ, ಕ್ರೈಸ್ತ ಅಭಿವೃದ್ದಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಸಮನ್ವಯ ಸರ್ವಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ದಾಯ್ಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಪ್ರಮುಖ ದಾನಿ ಓಸ್ವಲ್ಡ್ ವಾಸ್, ಪೀಟರ್ ಆಂಡ್ರೂ ಡಿಸೋಜಾ, ಚರ್ಚ್ ಪಾಲನಾ ಸಮಿತಿಯ 20 ಆಯೋಗಗಳ ಸಂಚಾಲಕರಾದ ಶಾಂತಿ ಫೆರ್ನಾಂಡಿಸ್, ವಾಜ್ ಕುಟುಂಬದ ಪರವಾಗಿ ಕ್ಲಿಫರ್ಡ್ ಲೀನಾ ವಾಜ್ ಮತ್ತು ಕುಟುಂಬದವರು ಹಾಗೂ ಇತರರು ಉಪಸ್ಥೀತರಿದ್ದರು.ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಸ್ವಾಗತಿಸಿ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್ ವಂದಿಸಿದರು. ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.