- ಡಿಸಿ ಗಂಗಾಧರ ಸ್ವಾಮಿ ಉದ್ಘಾಟನೆ । ಚಿತ್ರನಟಿ ಮಲೈಕಾ ವಸುಪಾಲ್ ಭಾಗಿ: ಸುರಭಿ ಶಿವಮೂರ್ತಿ - - -
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಅಧ್ಯಕ್ಷ ಅಂದನೂರು ಮುಪ್ಪಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಟಿ, ದಾವಣಗೆರೆಯ ಹಿರಿಯ ಕ್ರಿಕೆಟ್ ಪಟು ಟಿ.ಎಸ್. ವಸುಪಾಲ್ ಅವರ ಪುತ್ರಿ ಮಲೈಕಾ ವಸುಪಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.
ಸಂಸ್ಥೆಯ ಸಾಲಿಗ್ರಾಮ ಗಣೇಶ್ ಶೆಣೈ, ಆರ್.ಟಿ.ಮೃತ್ಯುಂಜಯ, ಎನ್.ವಿ.ಬಂಡಿವಾಡ, ಉಮೇಶ್ ಗುಜ್ಜಾರ್, ಡಾ. ಬಿ.ಎಸ್. ನಾಗಪ್ರಕಾಶ, ಎಚ್.ವಿ. ಮಂಜುನಾಥ ಸ್ವಾಮಿ, ಸುರಭಿ ಶಿವಮೂರ್ತಿ, ಟಿ.ಎಂ. ಪಂಚಾಕ್ಷರಯ್ಯ, ಗೀತಾ ಬದರೀನಾಥ್, ಎಂ.ಜಿ. ಜಗದೀಶ ಭಾಗವಹಿಸುವರು. ಲೋಕನಾಥ್‌ರ ಭದ್ರಾವರಿ ಬ್ರದರ್ಸ್ ಆರ್ಕೆಸ್ಟ್ರಾ, ಬೆಂಗಳೂರಿನ ಶಶಿ ಮೆಲೋಡಿಸ್ ತಂಡಗಳು ಕನ್ನಡ, ಹಿಂದಿ ಹಾಡುಗಳನ್ನು ಹಾಡಲಿವೆ ಎಂದು ಅವರು ಹೇಳಿದರು.ಕನ್ನಡ ಹಾಗೂ ಹಿಂದಿಯ 30 ಹಾಡುಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುವುದು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಅವಕಾಶವಿದೆ. ಯಾವುದೇ ದೇಣಿಗೆ ಪಡೆಯದೇ ಸದಸ್ಯರು ಹೊಂದಿಸಿದ ಹಣದಿಂದಲೇ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಸ್ಥೆ ಆರಂಭದಿಂದಲೂ ಸಿನಿಮಾ ಸಿರಿ ಕಾರ್ಯಕ್ರಮದಲ್ಲಿ ಹಾಡುತ್ತ ಬಂದಿದ್ದ ಎಲ್ಲಾ ಗಾಯಕ-ಗಾಯಕಿಯರಿಗೂ ಗೌರವಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
- - -