ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ತೇರದಾಳ ಪಟ್ಟಣದಲ್ಲಿ ಪಿಯು ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಸಹಯೋಗದಲ್ಲಿ ದಾನಿಗೊಂಡ ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಕಾನೂನು ಸುರಕ್ಷತಾ ಕ್ರಮಗಳು, ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ, ಸರ್ಕಾರದ ನೆರವಿನಡಿ ಕಾನೂನು ನೆರವು, ಸಾಥಿ, ಲೋಕ ಅದಾಲತ್ ಸೌಲಭ್ಯಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.
ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಪ್ರಭಾಕರ ಅಪರಾಜ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಪ್ರಕಾಶ ಮಾಳಿ ಕಾನೂನು ಅರಿವು ಬಗ್ಗೆ ಪ್ರಾಸ್ತಾವಿಕ ಮಾತುಗಳಾಡಿದರು. ಉಪನ್ಯಾಸಕರಾದ ಬಿ.ಎಸ್.ನೇಗಿನಾಳ ಅವರು ಅತಿಥಿ ಪರಿಚಯ ಹಾಗೂ ಸತ್ಕಾರ ಸಮಾರಂಭ ನಡೆಸಿಕೊಟ್ಟರು. ಭರತೇಶ ಘಟನಟ್ಟಿ ನಿರೂಪಿಸಿ ವಂದಿಸಿದರು.