ಅಹಲ್ಯಾಬಾಯಿ ಹೋಳ್ಕರ್‌ ಆದರ್ಶವಾಗಬೇಕು

KannadaprabhaNewsNetwork |  
Published : May 22, 2025, 01:08 AM IST
1 | Kannada Prabha

ಸಾರಾಂಶ

ಇಂದಿನ ಮಹಿಳೆಯರು ಸಣ್ಣ ವಿಚಾರಕ್ಕೆ ಅಸಹನೆ, ಕೋಪ ಮಾಡಿಕೊಳ್ಳುತ್ತಾರೆ. ವಿಚ್ಛೇದನದ ಹಾದಿ ಹಿಡಿಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಸಣ್ಣಪುಟ್ಟ ವಿಷಯಕ್ಕೂ ಕೋಪ, ವಿಚ್ಛೇದನದ ಮೊರೆ ಹೋಗುವ ಕಾಲಘಟ್ಟದಲ್ಲಿದ್ದೇವೆ. ಆದರೆ ಅಹಲ್ಯಾಬಾಯಿ ಹೋಳ್ಕರ್ ಅವರು ಅವತ್ತಿಗೆ ಸಾವಿರಾರು ಅಡಚಣೆಗಳಿದ್ದರೂ ಅವೆಲ್ಲವನ್ನೂ ಮೆಟ್ಟಿನಿಂತು ಸಾಧನೆ ಮಾಡುವ ಮೂಲಕ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಅಭಿಪ್ರಾಯಪಟ್ಟರು.ನಗರ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ಮಹಿಳೆಯರು ಸಣ್ಣ ವಿಚಾರಕ್ಕೆ ಅಸಹನೆ, ಕೋಪ ಮಾಡಿಕೊಳ್ಳುತ್ತಾರೆ. ವಿಚ್ಛೇದನದ ಹಾದಿ ಹಿಡಿಯುತ್ತಿದ್ದಾರೆ. ಅವಕಾಶ, ಸವಲತ್ತುಗಳು ನಮಗೆ ಹೆಚ್ಚಿವೆ. ಹಾಗಾಗಿ ಏನು ಸಾಧಿಸಬೇಕು ಎಂಬುದರ ಬಗೆಗೆ ಹೆಚ್ಚು ಒಲವಿಲ್ಲ ಆದರೆ, ಅಹಲ್ಯಬಾಯಿ ಹೋಳ್ಕರ್‌ ಅವರ ಆದರ್ಶ ಮತ್ತು ಮಾದರಿಯ ಬದುಕು ನೀಡಿದ್ದಾರೆ ಎಂದರು.ಹೋಳ್ಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆದರ್ಶವಾಗಿದ್ದಾರೆ. ಅವರ ಪ್ರತಿಮೆಯನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಸ್ಥಾಪಿಸಿದ್ದಾರೆ. ಕಾಶಿ ಕಾರಿಡಾರ್ ಅಲ್ಲೂ ಪ್ರತಿಷ್ಠಾಪಿಸಲಾಗಿದೆ. ಕಾಶಿ ವಿಶ್ವನಾಥ ದೇವಾಲಯವನ್ನು ಮೊದಲು ಜೀರ್ಣೋದ್ಧಾರ ಮಾಡಿದವರು, ಅಹಲ್ಯಾಬಾಯಿ. ದೇವಸ್ಥಾನದ ಉದ್ಧಾರಕ್ಕೆ ಪ್ರಜೆಗಳ ಬೊಕ್ಕಸವನ್ನು ವ್ಯಯಮಾಡದೆ, ತಮ್ಮ ಆಸ್ತಿಯ ಆದಾಯವನ್ನು ಖರ್ಚು ಮಾಡುತ್ತಿದ್ದುದಾಗಿ ಅವರು ತಿಳಿಸಿದರು.ಅವರ ಆಡಳಿತದಲ್ಲಿ ಮಹಿಳೆಯರಿಗೆ ಸೀರೆ, ಆಭರಣದ ಕಸೂತಿ ಕೆಲಸದಿಂದ ಉದ್ಯೋಗ ಸೃಷ್ಟಿಸಿಕೊಟ್ಟರು. ಕೃಷಿಗೆ ಒತ್ತು ನೀಡಿದರು. ಬಾಲ್ಯವಿವಾಹ ತಡೆದರು. ಅವರಿಂದ ಮಹೇಶ್ವರ ಸೀರೆಗಳು ಇವತ್ತಿಗೂ ಹೆಚ್ಚು ಪ್ರಸಿದ್ಧಿಯಾಗಿದೆ ಎಂದರು. ಮಹಿಳೆಯರ ಸಮಾಧಿ ಮೇಲೆ ಸಂಭ್ರಮರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಬಾಣಂತಿಯರ ಸಾವು ಹೆಚ್ಚಾಗಿದೆ. ಅವರ ಸಮಾಧಿಯ ಮೇಲೆ ರಾಜ್ಯ ಸರ್ಕಾರ ಸಂಭ್ರಮಿಸುತ್ತಿದೆ. ಅವೈಜ್ಞಾನಿಕ ತಳಹದಿಯಲ್ಲಿ ಉಚಿತ ಗ್ಯಾರೆಂಟಿ ನೀಡಿ ಜನರನ್ನು ಮೋಸಗೊಳಿಸುವ ಕೆಲಸ ಮಾಡುತ್ತಿದೆ.ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಣುಕಾ ರಾಜು, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್‌ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್‌, ನಗರ ಪಾಲಿಕೆ ಮಾಜಿ ಸದಸ್ಯ ಮಲಮ್ಮ, ರತ್ನಾ ಲಕ್ಷ್ಮಣ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ