ಶಾಸಕ ಎಚ್.ಡಿ. ತಮ್ಮಯ್ಯ, ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಘೋಷಣೆ । ನಗರೋತ್ಥಾನ ಕಾಮಗಾರಿ ವಿಳಂಬ,
ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಅಧ್ಯಕ್ಷರ ವಿರುದ್ಧ ಘೋಷಣೆ, ಏರು ಧ್ವನಿಯಲ್ಲಿ ಗದ್ದಲ, ಸಭೆ ಮುಂದುವರಿಸಲು ಅಡ್ಡಿ, ಅಧ್ಯಕ್ಷರ ವಿರುದ್ಧ ಪಕ್ಷಪಾತದ ಆರೋಪ.
- ಇದೆಲ್ಲಾ ನಡೆದಿದ್ದು ಚಿಕ್ಕಮಗಳೂರು ನಗರಸಭೆಯ ಸಾಮಾನ್ಯಸಭೆಯಲ್ಲಿನಗರಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪ್ರಥಮ ಸಾಮಾನ್ಯಸಭೆ ಆರಂಭದಲ್ಲಿ ಕಾಂಗ್ರೆಸ್‌ನ ನಗರಸಭೆ ಸದಸ್ಯರು ನಗರೋತ್ಥಾನ - 3 ಮತ್ತು 4 ಕಾಮಗಾರಿಗಳು ಆರಂಭವಾಗಿಲ್ಲ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಅಧ್ಯಕ್ಷರಿಗೆ ಕೇಳಿದರು.
ಆಗ, ಇದಕ್ಕೆ ಅವಕಾಶ ಇಲ್ಲ ಎಂದು ಅಧ್ಯಕ್ಷರು ಪುನರುಚ್ಚರಿಸುತ್ತಿದ್ದಂತೆ ಕಾಂಗ್ರೆಸ್‌ನ ಎಲ್ಲಾ ಸದಸ್ಯರು ಎದ್ದು ನಿಂತು ಏರು ಧ್ವನಿಯಲ್ಲಿ ಉತ್ತರ ಕೊಡಲೇ ಬೇಕೆಂದು ಆಗ್ರಹಿಸಿದರು. ಟೆಂಡರ್ ಆಗಿದೆ ಕೆಲಸ ಏಕೆ ಆರಂಭಿಸಿಲ್ಲ ಎಂದು ಲಕ್ಷ್ಮಣ್ ಕೇಳಿದರು.
ಸಭೆಯಲ್ಲಿ ಆಸೀನರಾಗಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ನಗರಸಭೆ ಅನುದಾನದಲ್ಲಿ ನಗರದ ಗುಂಡಿ ಮುಚ್ಚಲು ಆಗೋದಿಲ್ಲ, ಹಾಗಾಗಿ ತಾವು ಶಾಸಕರಾಗಿದ್ದಾಗ 40 ಕೋಟಿ ರು. ವಿಶೇಷ ಅನುದಾನ ತಂದಿರುವುದಾಗಿ ಹೇಳಿದರು. ಯಾರೇ ಇರಲೀ ಗೌರವ ದಿಂದ ಮಾತನಾಡಬೇಕು ಎಂದು ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಯಾವ ಜನಪ್ರತಿನಿಧಿ ಅಧಿಕಾರಿಗಳನ್ನು ಓಲೈಸುತ್ತಾನೋ ಆತ ಆ ಕ್ಷೇತ್ರ ದಲ್ಲಿ ಮುಂದುವರೆಯಲು ವಿಫಲನಾಗುತ್ತಾನೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ನಗರಸಭೆಯ ಆಡಳಿತ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ಒಂದೇ ವಾರದೊಳಗೆ ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಎರಡು ಸಭೆಗಳನ್ನು ನಡೆಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ಆ ಮೂಲಕ ಜನ ಪ್ರತಿನಿಧಿಗಳಿಗೆ ಅಗೌರವ ತೋರಿದ್ದಾರೆ. ಇದನ್ನು ಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಹೇಳಿದರು.
ಆರಂಭದಲ್ಲಿ ಸಭೆಯಲ್ಲಿ ಗದ್ದಲ, ಕೋಲಾಹಲ, ನಂತರದಲ್ಲಿ ಎಲ್ಲವೂ ಸಮಾಧಾನವಾಗಿ ನಡೆಯಿತು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಪೌರಾಯುಕ್ತ ಬಿ.ಸಿ. ಬಸವರಾಜ್ ಉಪಸ್ಥಿತರಿದ್ದರು. 19 ಕೆಸಿಕೆಎಂ 3ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯಸಭೆ ನಡೆಯಿತು. ಉಪಾಧ್ಯಕ್ಷೆ ಅನು ಮಧುಕರ್, ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದರು.ಪೋಟೋ ಫೈಲ್ ನೇಮ್ 19 ಕೆಸಿಕೆಎಂ 4ಚಿಕ್ಕಮಗಳೂರು ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ನಗರೋತ್ಥಾನ ಕಾಮಗಾರಿ ಬಗ್ಗೆ ಚರ್ಚೆಗೆ ಆಗ್ರಹಿಸಿದರು.