ಗಜೇಂದ್ರಗಡ: ಮನುಷ್ಯ ಆರೋಗ್ಯಕರ ಜೀವನ ನಡೆಸಬೇಕಾದರೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ನೆಮ್ಮಲ್ಲರ ಕರ್ತವ್ಯವಾಗಿದೆ, ಆದ್ದರಿಂದ ಪರಿಸರ ಸ್ವಚ್ಛವಾಗಿರಬೇಕಾದರೆ ತ್ಯಾಜ ವಸ್ತು ರಸ್ತೆಗಳಲ್ಲಿ ಎಸೆಯದೇ ಒಂದು ನಿರ್ದಿಷ್ಟ ಸ್ಥಳದಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು ಅಂದಾಗ ಪರಿಸರದ ಮಾಲಿನ್ಯ ತಡೆಗಟ್ಟಬಹುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ ಹೇಳಿದರು.
ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಒಂದು ಸಂಗ್ರಹವಾಗಿ ಹಾಕಿ ಪಂಚಾಯತಿಯಿಂದ ಕಸ ತೆಗೆದುಕೊಂಡು ಹೋಗಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹಿಸುವ ಮೂಲಕ ಗ್ರಾಮದ ಸ್ವಚ್ಛತೆಗೆ ಗ್ರಾಪಂ ಶ್ರಮಿಸುತ್ತಿದೆ.ಅವರೊಂದಿಗೆ ಜನರು ಸಹಕರಿಸಿ ಕೈಜೋಡಿಸಿದಾಗ ಸುಂದರ ಗ್ರಾಮವನ್ನಾಗಿಸಬಹುದು. ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾತ್ರ ಗಾಂಧೀಜೀಯವರ ಕಂಡ ಕನಸು ನನಸಾಗಿಸಲು ಸಾಧ್ಯ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಬಸನಗೌಡ ಪವಾಡಿಗೌಡ್ರ ಮಾತನಾಡಿ, ಮನೆ ಮನೆಯಂಗಳ ಸ್ವಚ್ಛವಾಗಿ ಇಟ್ಟುಕೊಂಡರೆ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಒಳಾಂಗಣದಲ್ಲಿ ಹರ್ಬಿಲ್ ಗಾರ್ಡನ್ ಮತ್ತು ನೈಸರ್ಗಿಕ ಗಾರ್ಡನ್ ನಿರ್ಮಾಣಕ್ಕೆ ತಾಪಂ ಇಓ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಲಮಾಣಿ, ಗ್ರಾಪ ಉಪಾಧ್ಯಕ್ಷೆ ಅನುಸೂಯಾ ಶಿಗ್ಲಿ, ಸದಸ್ಯರಾದ ಶಂಕ್ರಪ್ಪ ಹಟ್ಟಿಮನಿ, ಭೀಮಪ್ಪ ಲಮಾಣಿ, ಹನುಮಂತ ಹುಲ್ಲೂರು, ಮೀನಾಕ್ಷಿ ಪತ್ತಾರ, ಜಯಶ್ರೀ ನಿಂಗಪ್ಪ ಜಾಲಿಹಾಳ, ಉತ್ತಪ್ಪ ಮಾದರ, ನೀಲವ್ವ ಶಿವಪ್ಪ ಪರಮಟ್ಟಿ, ಚಂದ್ರಶೇಖರ ನಾಗನೂರು, ಪಿಡಿಒ ಎಸ್.ಕೆ.ಕವಡೆಲಿ, ತಾಪಂ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಗ್ರಾಪಂ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇತರರು ಇದ್ದರು.