ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭರಣಿ ವಿ. ಎಂಬುವವರಿಗೆ 97.130 ಚದರ ಮೀಟರ್ (24 ಎಕರೆ) ಜಾಗವನ್ನು ಇ- ಖಾತೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ನಗರಸಭೆಯ ನಡೆಗಳ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಖಾತೆಯಲ್ಲಿರುವ ಮಾಹಿತಿ ಪ್ರಕಾರ ಉತ್ತರಕ್ಕೆ ಚೆಕ್ಕು ಬಂಧಿ ರೈಲ್ವೆ ಇಲಾಖೆ ಆಸ್ತಿ, ರೈಲ್ವೆ ಹಳಿ, ಯಾರ್ಡ್ ಡ್ರೈನೇಜ್, ಶಿಡ್ಲಘಟ್ಟ ರಸ್ತೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎಂದು ನಮೂದಾಗಿದೆ. 106, 107, 108 8 109, ಪಶ್ಚಿಮಕ್ಕೆ 100 ಅಡಿ ಸರ್ವೀಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 44 ಮತ್ತು ದಕ್ಷಿಣಕ್ಕೆ ಮಿನಿ ಬೆಟಾನಿಕಲ್ ಉದ್ಯಾನ 70 ಎಕರೆ ಜಾಗ ಎಂದು ನಮೂದಾಗಿದೆ. ಇ-ಖಾತೆಯಲ್ಲಿ ಜಮೀನು ಮಾಲೀಕರು ಭರಣಿ ಎಂದು ಅವರ ಭಾವಚಿತ್ರ ಹಾಗೂ ಜಿಪಿಎಸ್ ಭಾವಚಿತ್ರವೂ ಇದೆ.
ಇ-ಖಾತೆ ನೀಡಲು ಚಿಕ್ಕಬಳ್ಳಾಪುರ ನಗರಸಭೆಗೆ ₹8, 24, 087 ಆಸ್ತಿತೆರಿಗೆಯನ್ನು (ರಸೀದಿ ಸಂಖ್ಯೆ 928) ಪಾವತಿಸಲಾಗಿದೆ ಎಂದು ಇ-ಖಾತೆಯಲ್ಲಿ ನಮೂದಾಗಿದೆ. ಅಚ್ಚರಿ ಎನ್ನುವಂತೆ ಇ-ಖಾತೆಯಲ್ಲಿ ತೆರಿಗೆ ಸಂದಾಯದ ದಿನಾಂಕ 2027ರ ಏ.6ರಂದು ನಮೂದಾಗಿದೆ. ಅಣಕನೂರು ಗ್ರಾಮ ವ್ಯಾಪ್ತಿಯ ಜಾಗಕ್ಕೆ ನಗರಸಭೆ ಆಸ್ತಿ ತೆರಿಗೆ ಪಾವತಿಸಿಕೊಂಡಿದೆ ಎಂದಿದ್ದಾರೆ.ಪೌರಾಯುಕ್ತರು, ಆಡಳಿತಾಧಿಕಾರಿ ಅವಧಿಯಲ್ಲಿ ಬಹಳಷ್ಟು ಕೆಲಸಗಳನ್ನು ಕಾನೂನು ಮೀರಿ ಮಾಡಿದ್ದಾರೆ. ಇ- ಖಾತೆ ನೀಡಿರುವ ಜಮೀನಿನ ಒಂದು ಎಕರೆ ಇಂದಿನ ಮಾರುಕಟ್ಟೆ ಮೌಲ್ಯ ₹5 ಕೋಟಿಗೂ ಅಧಿಕವಿದೆ. ಇ-ಖಾತೆ ನೀಡುವ ವಿಚಾರವಾಗಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ಸುದ್ದಿ ಸಾರ್ವಜನಿಕ ವಲಯದಲ್ಲಿ ಇದೆ. ಇ-ಖಾತೆ ಆಧಾರದ ಮೇಲೆ ಶಿಡ್ಲಘಟ್ಟ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಪತ್ರ ಸಹ ಮಾಡಿಸಿದ್ದಾರೆ. ಇದು ದಾಖಲೆಗಳನ್ನು ಸೃಷ್ಟಿಸುವ ಕಾರ್ಯವಾಗಿದೆ ಎಂದು ಸಾದಿಕ್ ದೂರಿನಲ್ಲಿ ತಿಳಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಎ, ಮತ್ತು ಬಿ ಖಾತೆ ನೀಡುವ ವೇಳೆ ಕಣ್ತಪ್ಪಿ 24 ಎಕರೆ ಜಾಗಕ್ಕೆ ಇ-ಖಾತೆ ನೀಡಲಾಗಿದೆ ಎನ್ನುವ ಸಬೂಬು ನಗರಸಭೆ ಅಧಿಕಾರಿಗಳು ಹೇಳಿದರೂ, ಕನಿಷ್ಠ ಮಟ್ಟದಲ್ಲಿ ದಾಖಲೆಗಳನ್ನು ಪರಿಶೀಲಿಸದೆಯೇ ಇ-ಖಾತೆ ನೀಡಿದ್ದಾರೆಯೇ ಎನ್ನುವ ಅನುಮಾನಗಳು ಮೂಡಿವೆ ಎಂದಿದ್ದಾರೆ.