ದಾವಣಗೆರೆ ಶ್ರೀ ಜಯದೇವ ವೃತ್ತದಿಂದ ಆರ್.ಎಚ್. ಛತ್ರದವರೆಗೆ ಹಳೇ ಪ್ರವಾಸಿ ಮಂದಿರ ರಸ್ತೆಯನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಂಡಿದ್ದು, ಬೀದಿದೀಪಗಳ ಕಂಬಗಳನ್ನು ಆ ರಸ್ತೆಯ ಅಂಗಡಿಗಳ ಮುಂದೆ ಅಳವಡಿಸದಂತೆ ಸ್ಥಳೀಯ ವ್ಯಾಪಾರಸ್ಥರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.
- ಪಾಲಿಕೆ ಆಯುಕ್ತರ ಮೊರೆ ಹೋದ ಹಳೇ ಐ.ಬಿ. ರಸ್ತೆ ವ್ಯಾಪಾರಸ್ಥರು । ಸಿಸಿ ರಸ್ತೆ ಕಾಮಗಾರಿ ತಂದ ಸಂಕಷ್ಟ- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಶ್ರೀ ಜಯದೇವ ವೃತ್ತದಿಂದ ಆರ್.ಎಚ್. ಛತ್ರದವರೆಗೆ ಹಳೇ ಪ್ರವಾಸಿ ಮಂದಿರ ರಸ್ತೆಯನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಂಡಿದ್ದು, ಬೀದಿದೀಪಗಳ ಕಂಬಗಳನ್ನು ಆ ರಸ್ತೆಯ ಅಂಗಡಿಗಳ ಮುಂದೆ ಅಳವಡಿಸದಂತೆ ಸ್ಥಳೀಯ ವ್ಯಾಪಾರಸ್ಥರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.
ನಗರದ ಪಾಲಿಕೆ ಕಚೇರಿಯಲ್ಲಿ ಆಯುಕ್ತ ಡಾ.ಮಹಾಂತೇಶ ಅವರನ್ನು ಭೇಟಿ ಮಾಡಿದ ಸ್ಥಳೀಯ ವ್ಯಾಪಾರಸ್ಥರು, ಜಯದೇವ ವೃತ್ತದಿಂದ ಆರ್.ಎಚ್. ವೃತ್ತದವರೆಗೆ ಹಳೇ ಪ್ರವಾಸಿ ಮಂದಿರ ರಸ್ತೆಯನ್ನು ಸಿಸಿ ರಸ್ತೆಯಾಗಿ ಮಾಡುವ ಕಾಮಗಾರಿ ಆರಂಭವಾಗಿದ್ದು, ರಸ್ತೆಯ ಎರಡೂ ಬದಿ ಅಳವಡಿಸುತ್ತಿರುವ ವಿದ್ಯುತ್ ಕಂಬಗಳನ್ನು ಈವರೆಗೆ ಇದ್ದ ಸ್ಥಳದಿಂದ ಅಂಗಡಿಗಳ ಬಾಗಿಲಿನ ಬಳಿ ಅಳವಡಿಸುತ್ತಿರುವುದು ಸರಿಯಲ್ಲ. ಅವು ಇದ್ದಲ್ಲೇ ಅಳವಡಿಸುವಂತೆ ಒತ್ತಾಯಿಸಿ ಮನವಿ ಅರ್ಪಿಸಿದರು.ಬೀದಿದೀಪಗಳನ್ನು ಅಂಗಡಿಗಳ ಬಾಗಿಲಿಗೆ ಅಳವಡಿಸುತ್ತಿದ್ದು, ಅಲ್ಲಿ ಸಂಚರಿಸುವ ಪಾದಚಾರಿಗಳಿಗೂ ತೀವ್ರ ತೊಂದರೆಯಾಗಲಿದೆ. ಅಲ್ಲದೇ, ಬೀದಿದೀಪದ ವಿದ್ಯುತ್ ಕಂಬಗಳು ಅಲ್ಲಿನ ಅಂಗಡಿಗಳು, ಕಟ್ಟಡಗಳಿಗೂ ತಗುಲುತ್ತಿದ್ದು, ಇದರಿಂದ ಅಪಘಾತ, ಅನಾಹುತಗಳಾಗುವ ಅಪಾಯವೂ ಇಲ್ಲದಿಲ್ಲ. ಇದೇ ಭಾಗದಲ್ಲಿ ಹೈಟೆನ್ಷನ್ ವಿದ್ಯುತ್ ಮಾರ್ಗವೂ ಹಾದು ಹೋಗಿದ್ದು, ವಿದ್ಯುತ್ ಕಂಬಗಳ ಬದಲಾಗಿ ಭೂಗತ ವಿದ್ಯುತ್ ಮಾರ್ಗ (ಯುಜಿಸಿ) ಕೇಬಲ್ ಅಳವಡಿಸಿ, ರಸ್ತೆಯ ಎರಡೂ ಬದಿಬೀದಿ ದೀಪ ಅಳವಡಿಬೇಕು ಎಂದು ಮನವಿ ಮಾಡಿದರು.
ಮಳೆಗಾಲದಲ್ಲಿ ಮಳೆನೀರು, ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಎರಡೂ ಬದಿ ವ್ಯವಸ್ಥೆ ಮಾಡಬೇಕು. ತಮ್ಮ ಬೇಡಿಕೆಯನ್ನು ಪ್ರಥಮಾದ್ಯತೆ ಮೇಲೆ ಪರಿಗಣಿಸಬೇಕು ಎಂದು ಸ್ಥಳೀಯ ವ್ಯಾಪಾರಿಗಳಾದ ಗಂಗನಕಟ್ಟೆ ಗುರುಸ್ವಾಮಿ, ಮಾಜಿ ಮೇಯರ್ ಎಸ್.ಟಿ.ವೀರೇಶ, ವಿಜಯಕುಮಾರ, ವೆಂಕಟೇಶ, ವೀರಣ್ಣ, ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ ಇತರರು ಪಾಲಿಕೆ ಆಯುಕ್ತ ಡಾ.ಮಹಾಂತೇಶ್‌ರಿಗೆ ಮನವಿ ಮಾಡಿದರು.- - -
-3ಕೆಡಿವಿಜಿ9: ದಾವಣಗೆರೆ ಪಾಲಿಕೆಯಲ್ಲಿ ಆಯುಕ್ತ ಡಾ.ಮಹಾಂತೇಶ್ ಅವರಿಗೆ ಹಳೇ ಪ್ರವಾಸಿ ಮಂದಿರ ರಸ್ತೆಯ ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಸಾಮಾಜಿಕ ಕಾರ್ಯಕರ್ತರು ಮನವಿ ಅರ್ಪಿಸಿದರು. -3ಕೆಡಿವಿಜಿ10: ದಾವಣಗೆರೆ ಜಯದೇವ ವೃತ್ತ- ಆರ್.ಎಚ್.ಛತ್ರದ ಹಳೇ ಪ್ರವಾಸಿ ಮಂದಿರ ರಸ್ತೆಯಲ್ಲಿ ಅಂಗಡಿ ಬಾಗಿಲು, ಫುಟ್ ಪಾತ್ ಮೇಲೆ ಬೀದಿದೀಪದ ಕಂಬ ಅಳವಡಿಸಿದ ಬಗ್ಗೆ ಸ್ಥಳೀಯ ವ್ಯಾಪಾರಸ್ಥರು ಅಳಲು ತೋಡಿಕೊಂಡರು.