ಬ್ಯಾಡಗಿ: ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಸಂಘಟನೆಗಳು ಹಾಗೂ ವಯೋವೃದ್ಧ ಪ್ರಯಾಣಿಕರ ಒತ್ತಡಕ್ಕೆ ಮಣಿದ ಸಾರಿಗೆ ಘಟಕವು ಸೋಮವಾರದಿಂದ ನಗರ ಸಾರಿಗೆ ಬಸ್ ಸಂಚಾರ ಆರಂಭಿಸಿತು.
ಶಿಡೇನೂರಿನಿಂದ ಮೋಟೆಬೆನ್ನೂರ: ಘಟಕ ವ್ಯವಸ್ಥಾಪಕ ಮಾತನಾಡಿ, ಸದರಿ ಬಸ್ ಹಳೇ ಶಿಡೇನೂರಿನಿಂದ ಮೋಟೆಬೆನ್ನೂರವರೆಗೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಹಾಗೂ ಮದ್ಯಾಹ್ನ 3ರಿಂದ ಸಂಜೆ 7ರ ವರೆಗೆ ಸಂಚರಿಸಲಿದ್ದು, ಬಳಿಕ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ನಗರದಲ್ಲಿಯೇ ರೈಲ್ವೆ ನಿಲ್ದಾಣದಿಂದ ಹೊರಟು ನೆಹರುನಗರ, ಕಾಕೋಳ ಕ್ರಾಸ್, ಸುಭಾಸ ಸರ್ಕಲ್, ಕದರಮಂಡಲಗಿ ಕ್ರಾಸ್ ಕಲಾಭವನ, ಅಂಬೇಡ್ಕರ್ ವೃತ್ತ, ಗುಮ್ಮನಹಳ್ಳಿ ಕ್ರಾಸ್ (ಎಪಿಎಂಸಿ ಬ್ಯಾಕ್ ಗೇಟ) ಬಳಸಿಕೊಂಡು ಅಗಸನಹಳ್ಳಿವರೆಗೆ ಸಂಚರಿಸುವುದಾಗಿ ತಿಳಿಸಿದರು, ಮಹಿಳಾ ಪ್ರಯಾಣಿಕರಿಗೆ ಉಚಿತ ಸೌಲಭ್ಯವಿದ್ದು ಪುರುಷರು ಮಾತ್ರ ಎಂದಿನಂತೆ ಹಣ ನೀಡಿ ಸಂಚರಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಈರಣ್ಣ ಮಲ್ಲಾಡದ, ಹನುಮಂತಪ್ಪ ಕಾಟೇನಹಳ್ಳಿ, ಮಂಜುನಾಥ ಹಂಜಿ, ಹೈದರಲಿ, ಮಾರುತಿ ಅಚ್ಚಿಗೇರಿ, ಮಾಲತೇಶ ಶಿಡ್ಲಣ್ಣನವರ, ಬಸವರಾಜ ಸಂಕಣ್ಣನವರ, ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ಬಾಬು ಒಲೇಕಾರ, ಪೀರಾಂಬಿ ಸೇರಿದಂತೆ ಸಾರಿಗೆ ಘಟಕದ ಸಿಬ್ಬಂದಿಗಳು ಉಪಸ್ತಿತರಿದ್ದರು.