ಪೌರ ಕಾರ್ಮಿಕರು ನಾಡಿನ ದೊಡ್ಡ ಶಕ್ತಿ: ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : Jul 26, 2026, 02:30 AM IST
ಹಳಿಯಾಳದ ಪುರಭವನದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಪೌರಸೇವಾ ನೌಕರರ ಸಂಘದ ಜಿಲ್ಲಾ ಸಮಾವೇಶವನ್ನು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಹಳಿಯಾಳ ಪಟ್ಟಣದ ಪುರಭವನದಲ್ಲಿ ಶನಿವಾರ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪೌರಸೇವಾ ನೌಕರರ ಸೇವಾ ಸಂಘದ ಸಮಾವೇಶ ನಡೆಯಿತು.

ಹಳಿಯಾಳ: ಪೌರ ಕಾರ್ಮಿಕರು ನಮ್ಮ ಸಮಾಜದ ಅಸಾಧಾರಣ ಹಿರೋಗಳು, ನಾಡಿನ ದೊಡ್ಡ ಶಕ್ತಿಯಾಗಿದ್ದಾರೆ. ಅವರು ಸ್ವಚ್ಛತೆಯ ರಾಯಭಾರಿಗಳು ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಪಟ್ಟಣದ ಪುರಭವನದಲ್ಲಿ ಶನಿವಾರ ಆಯೋಜಿಸಿದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪೌರಸೇವಾ ನೌಕರರ ಸೇವಾ ಸಂಘದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಪಟ್ಟಣಗಳಿಗೆ ಹೋಲಿಸಿದರೆ ಹಳಿಯಾಳ ಸ್ವಚ್ಛವಾಗಿದೆ. ಸಾರ್ವಜನಿಕರ ಸಹಕಾರ, ಸಹಭಾಗಿತ್ವದಲ್ಲಿ ಸ್ವಚ್ಛತೆಯ ಬಗ್ಗೆ ಮೊದಲ ಅಭಿಯಾನವನ್ನು ನನ್ನ ಕ್ಷೇತ್ರದಲ್ಲಿಯೇ ಆರಂಭಿಸಲಾಗಿತ್ತು ಎಂದರು.

ಪೌರ ಕಾರ್ಮಿಕರಿಗೆ ವಸತಿ ಹಾಗೂ ಆರೋಗ್ಯ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಪೌರಸೇವಾ ನೌಕರರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ ಪೌರಸೇವಾ ನೌಕರರ ಸೇವಾಸಂಘದ ರಾಜ್ಯಾಧ್ಯಕ್ಷೆ ಶೈಲಾ ಕೆ.ಡಿ. ಮಾತನಾಡಿ, ಪೌರಸೇವಾ ನೌಕರರ ಹಿತಾಸಕ್ತಿ, ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಪೌರ ನೌಕರರ ವಿವಿಧ ಸೇವಾ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುತ್ತಿದ್ದೇನೆ ಎಂದರು.

ಪೌರಸೇವಾ ನೌಕರರ ಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಪ್ರಸಾದ, ರಾಜ್ಯ ಜಂಟಿ ಸಹ ಕಾರ್ಯದರ್ಶಿ ಮಹೇಂದ್ರ ತಿಮ್ಮಾಣಿ, ಗದಗ ಜಿಲ್ಲಾ ಪೌರ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಹಡಪದ ಹಾಗೂ ಇತರರು ಮಾತನಾಡಿದರು.

ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಕಿತ್ತೂರ ಪುರಸಭೆಯ ಮುಖ್ಯಾಧಿಕಾರಿ ಎಂ.ಬಿ. ಹಿರೇಮಠ ಮಾತನಾಡಿದರು. ಉತ್ತರ ಕನ್ನಡ ಜಿಲ್ಲಾ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ರಮೇಶ ಮಜುಕರು ಅವರು ರಾಜ್ಯಾಧ್ಯಕ್ಷರಿಗೆ ಮನವಿ ಅರ್ಪಿಸಿದರು.

ಯಲ್ಲಾಪುರ ಮುಖ್ಯಾಧಿಕಾರಿ ಕೇಶವ ಚೌಗಲೆ, ಸಂಘದ ರಾಜ್ಯ ಜಂಟ ಕಾರ್ಯದರ್ಶಿ ಲಾಲಸಾಬ ಮನಿಯಾರ, ಮೀನಾಕ್ಷಿ ಶಿರಗುಪ್ಪಿ, ರಾಜ್ಯ ಕಾನೂನು ಸಲಹೆಗಾರ ರಾಘವೇಂದ್ರ ಭರಮಣ್ಣನವರ, ರಾಜ್ಯ ಉಪಾಧ್ಯಕ್ಷ ರಮೇಶ ಹಾಗೂ ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಹಳಿಯಾಳ ಪುರಸಭೆ ಶಾಖಾ ಸಂಘದ ಅಧ್ಯಕ್ಷ ಅನಿಲ ಚಲವಾದಿ ನಾಗರಾಜ ಕುರಿಯರ್, ರಾಮಚಂದ್ರ ಮೋಹಿತೆ, ಈರಣ್ಣ ಕೊಡ್ಲಿ, ಯಲ್ಲಪ್ಪಾ ತಳವಾರ, ರವಿ ಪಟ್ಟಿಹಾಳ, ಮಂಜುನಾಥ ಹರಿಜನ, ಪ್ರಕಾಶ ಠೊಸುರ, ಗಣೇಶ ಗೋಸಪ್ಪನವರ ಇದ್ದರು. ರಮೇಶ ಪಾಟೀಲ ಹಾಗೂ ದರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲಂಕಾರಿ ಸಸ್ಯ ಬೆಳೆದು ಸ್ವಾವಲಂಬಿಗಳಾಗಿ: ಸುಮಾ ನಾಗರಾಜ ಹಾಸ್ಯಗಾರ
ಎಪಿಎಂಸಿ, ಬಸ್ ನಿಲ್ದಾಣಕ್ಕೆ ಉಪ ಲೋಕಾಯುಕ್ತರ ಅನಿರೀಕ್ಷಿತ ಭೇಟಿ