ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನದ ಅಂಗವಾಗಿ ಗದ್ದೆಹಳ್ಳದ ಮಹಾತ್ಮಗಾಂಧಿ ವೃತ್ತದಿಂದ ಆರಂಭಿಸಿ ಸುಂಟಿಕೊಪ್ಪದ ಅಯ್ಯಪ್ಪ ದೇವಸ್ಥಾನದವರೆಗೆ ಸ್ವಚ್ಛತೆಯನ್ನು ನಡೆಸಿ ಪಟ್ಟಣದ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಹಾಗೂ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ, ನಿಲ್‌ಡೆಲ್ಲಿಕೇಸಿ ಹೊಟೇಲ್ ಮಾಲೀಕ ದಿನೇಶ್ ಅಭಿಯಾನಕ್ಕೆ ಚಾಲನೆ ನೀಡಿದರು.ಸುಂಟಿಕೊಪ್ಪ ಗ್ರಾಮ ಪಂಚಾಯಿತಿ, ಹೊಟೇಲ್ ಮಾಲೀಕರ ಹಾಗೂ ಹೊಂಸ್ಟೇ ಮಾಲೀಕರ ಸಂಘದ ವತಿಯಿಂದ "ಸ್ವಚ್ಛ ಕೊಡಗು-ಸುಂದರ ಕೊಡಗು " ಅಭಿಯಾನಕ್ಕೆ ಗದ್ದೆಹಳ್ಳದಲ್ಲಿ ಚಾಲನೆ ನೀಡಲಾಯಿತು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್, ತ್ಯಾಜ್ಯ, ಕಸಕಡ್ಡಿಗಳನ್ನು ಸೇರಿದಂತೆ ಇತರೆ ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಟ್ರ್ಯಾಕ್ಟರ್ ವಾಹನಗಳಲ್ಲಿ ತುಂಬಿಸಿ ಕಸ ವಿಲೇವಾರಿ ಘಟಕದಲ್ಲಿ ವಿಲೇವಾರಿಗೊಳಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಎ. ಶಭೀರ್, ಹೆಚ್.ಯು. ರಫೀಕ್ ಖಾನ್, ಕೆ.ಎಂ. ಆಲಿಕುಟ್ಟಿ, ಎಂ.ಎಸ್. ಜಿನಾಷುದ್ದೀನ್, ಮಾಜಿ ಅಧ್ಯಕ್ಷ ಕೆ.ಇ. ಕರೀಂ, ಮಾಜಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಮಾಜಿ ಸದಸ್ಯ ಹನೀಫ್, ಪಂಚಾಯಿತಿ ಸಿಬ್ಬಂದಿ ಚಂದ್ರಕಲಾ, ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು ಹಾಗೂ ಗ್ರಾಮದ ಮುಖಂಡರಾದ ಇಸಾಕ್‌ಖಾನ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಿಲ್‌ಡೆಲ್ಲಿಕೇಸಿ ಹೋಟೆಲ್ ಮಾಲೀಕ ದಿನೇಶ್ ಮತ್ತು ಹೊಟೇಲ್ ಸಿಬ್ಬಂದಿ ಸೇರಿದಂತೆ ಮತ್ತಿತರರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಚಾಲನೆಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಚಾಲನೆ ನೀಡಿದರು. ಸ್ವಚ್ಛ ಭಾರತ ಅಭಿಯಾನ ಪ್ರತಿ ಹಳ್ಳಿಗಳಲ್ಲು ಆರಂಭಿಸುವ ಮೂಲಕ ಸಮಾಜ ಸುಸ್ಥಿಕರಣಕ್ಕೆ ನಾಂದಿ ಹಾಡಿದೆ. ಇದರಲ್ಲಿ ಸಮಾಜದ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು. ಮಾದಾಪುರ ಗ್ರಾಮ ಪಂಚಾಯಿತಿ, ಮಾದಾಪುರ ಆಯುಧಪೂಜಾ ಸಮಿತಿ, ಎಸ್‌ಜೆಎಂ ವಿದ್ಯಾಸಂಸ್ಥೆ, ಮುಕೋಡ್ಲು ವ್ಯಾಲಿಯೂ ಕಲ್ಚರಲ್ ಅಸೋಷಿಯೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ಮಾದಾಪುರ ರಾಜ್ಯ ಹೆದ್ದಾರಿ ಬಳಿಯ ರಸ್ತೆ ಬದಿಯಲ್ಲಿ ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಪ್ರಯಾಣಿಕರು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳುಗೆಡವಿದ್ದು, ಇದನ್ನು ಮನಗಂಡು ಬೃಹತ್ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಯವರು ಟ್ರ್ಯಾಕ್ಟರ್, ಪಿಕ್‌ಆಫ್ ಜೀಪಿನಲ್ಲಿ ತ್ಯಾಜ್ಯ ವಸ್ತುಗಳನ್ನು, ಕಸಗಳನ್ನು ಹೆಕ್ಕಿ ತೆಗೆದು ವಾಹನಗಳಲ್ಲಿ ತುಂಬಿಸಿ ಕಸ ವಿಲೇವಾರಿ ಘಟಕಕ್ಕೆ ಸಾಗಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಡುವಂಡ ಜಾಲಿ ಸೋಮಣ್ಣ, ಸದಸ್ಯರಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕೃಷ್ಣನ್ ನಾಯಕ್, ಸಿಬ್ಬಂದಿ ರವೀಂದ್ರ, ಪ್ರೀತಿ, ಗಣೇಶ, ಲೆಕ್ಕಾಧಿಕಾರಿ ಅನಿತಾ, ಆಯುಧಪೂಜಾ ಆಚರಣಾ ಸಮಿತಿ ಅಧ್ಯಕ್ಷ ಕುಮಾರ, ಮಧು, ಶರಣು, ಮನು, ವ್ಯಾಲಿಡ್ಯು ಕಲ್ಚರ್ ಸಂಘದ ಹಂಚೆಟ್ಟಿರ ಮನುಮುದ್ದಪ್ಪ ಹಾಗೂ ಸದಸ್ಯರು ಎಸ್‌ಜೆಎಂ ಶಾಲೆಯವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.