ನಗರದ ವಿವಿಧ ಭಾಗಗಳಲ್ಲಿ ಕನ್ಸರ್‌ವೆನ್ಸಿ ರಸ್ತೆಯಲ್ಲಿರುವ ಶೌಚಾಲಯಗಳನ್ನು ತೆರವುಗೊಳಿಸುವಂತೆ ಪತ್ರಕರ್ತರ ಕಾಯಕಯೋಗಿ ಬಿ.ಚನ್ನಬಸಪ್ಪ ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗ: ನಗರದ ವಿವಿಧ ಭಾಗಗಳಲ್ಲಿ ಕನ್ಸರ್‌ವೆನ್ಸಿ ರಸ್ತೆಯಲ್ಲಿರುವ ಶೌಚಾಲಯಗಳನ್ನು ತೆರವುಗೊಳಿಸುವಂತೆ ಪತ್ರಕರ್ತರ ಕಾಯಕಯೋಗಿ ಬಿ.ಚನ್ನಬಸಪ್ಪ ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗ ನಗರವು ಜನಸಂಖ್ಯೆಯಲ್ಲಿ ಏರುಗತಿ ಕಾಣುತ್ತಿದೆ. ಜೊತೆಗೆ ವ್ಯವಹಾರ ವಹಿವಾಟು ಅಭಿವೃದ್ಧಿ ಕಂಡಿದೆ. ಬೇರೆ ಊರುಗಳಿಂದ ಸಾರ್ವಜನಿಕರು ಆಸ್ಪತ್ರೆಗಳಿಗೆ ವ್ಯವಹಾರಕ್ಕೆ ಮತ್ತು ಇನ್ನಿತರ ವಿಷಯಗಳಿಗೆ ಬರುತ್ತಾರೆ. ನಗರದಲ್ಲಿ ಉತ್ತಮ ಶೌಚಾಲಯಗಳು ಎಲ್ಲೂ ಇರುವುದಿಲ್ಲ. ಕಾರಣ ಇಷ್ಟೇ, ಸ್ಮಾರ್ಟ್ ಸಿಟಿ ಸಂದರ್ಭದಲ್ಲಿ ಶಿವಮೊಗ್ಗ ನಗರಪಾಲಿಕೆಗೆ ಕೇಂದ್ರ ಸರ್ಕಾರದಿಂದ ಸಾವಿರ ಕೋಟಿಗೂ ಮೇಲ್ಪಟ್ಟು ಅನುದಾನ ಬಂದಿದೆ. ಆ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಕೆಲಸಕ್ಕೆ ಬಾರದ ಕಬ್ಬಿಣದ ಶೌಚಾಲಯಗಳನ್ನು ಕಟ್ಟಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಶೌಚಾಲಯಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ದುರ್ಗಿಗುಡಿ, 2ನೇ ತಿರುವು, ಸೀತಾರಾಮ ಕಲ್ಯಾಣ ಮಂದಿರದ ಪಕ್ಕದ ರಸ್ತೆಯ ಕನ್ನರ್‌ವೆನ್ಸಿ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನ ಬಂದು ಮೂತ್ರ ವಿಸರ್ಜನೆ ಮಾಡುತ್ತಾರೆ. ಆಗ ನಿಮ್ಮ ಮಹಾನಗರ ಪಾಲಿಕೆಯ ಪೌರಾಯುಕ್ತರು ವಾರಕ್ಕೆ ಎರಡು ಬಾರಿ ಶುಚಿಗೊಳಿಸಿ ವಾಸನೆ ಹರಡದಂತೆ ಬ್ಲೀಚಿಂಗ್ ಪೌಡರ್ ಹಾಕುತ್ತಾರೆ. ಆ ರಸ್ತೆಯಲ್ಲಿರುವ ಕಬ್ಬಿಣದ ಶೌಚಾಲಯಗಳು ಬೀಗ ಹಾಕಲಾಗಿದೆ. ಅದಕ್ಕಾಗಿ ನಗರದ ಎಲ್ಲಾ ಕನ್ಸರ್‌ವೆನ್ಸಿ ರಸ್ತೆಗಳಲ್ಲಿರುವ ಟಾಯ್ಲೆಟ್‌ಗಳನ್ನು ತೆಗೆದು ಬಾಲರಾಜ್ ಅರಸ್ ರಸ್ತೆ ಮತ್ತು ಮಹಾವೀರ ಸರ್ಕಲ್ ಹತ್ತಿರವಿರುವ (ಗಾಂಧಿ ಪಾರ್ಕ್ ಪಕ್ಕದಲ್ಲಿರುವ) ಶೌಚಾಲಯದ ರೀತಿಯಲ್ಲಿ ಮಾಡಿಸಿದರೆ ಸೂಕ್ತ. ಈ ವಿಷಯವನ್ನು ನೀವು ಗಮನ ಹರಿಸಿದಲ್ಲಿ ಕನ್ಸರ್‌ವೆನ್ಸಿಗಳು ಸ್ವಚ್ಛತೆಯಿಂದ ಕಂಡು ಸಾರ್ವಜನಿಕರಿಗೆ ಓಡಾಡಲು ಅನುಕೂಲ ಆಗುತ್ತದೆ ಎಂದು ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.