ಗೋಕರ್ಣ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆ: ಲೋಕಾಯುಕ್ತ ಎಸ್ಪಿ ಅಸಮಾಧಾನ

KannadaprabhaNewsNetwork |  
Published : Oct 19, 2024, 12:19 AM IST
ಗೋಕರ್ಣ ಬಸ್ ನಿಲ್ದಾಣಕ್ಕೆ  ಲೋಕಾಯುಕ್ತ ಎಸ.ಪಿ. ಭೇಟಿ ನೀಡಿರುವುಹಹಹಹರಗದದಹಹಹದುದುಸದ | Kannada Prabha

ಸಾರಾಂಶ

ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಿರುವುದು ಹಾಗೂ ಶೌಚಾಲಯದಲ್ಲಿ ಹೆಚ್ಚಿನ ದರ ಆಕರಣೆ, ಸ್ವಚ್ಛತೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಂಚಾರ ನಿಯಂತ್ರಕರಿಗೆ ಸ್ವಚ್ಛತೆ ಕಾಪಾಡಲು ಲೋಕಾಯುಕ್ತ ಎಸ್ಪಿ ಪಿ. ಕುಮಾರಚಂದ್ರ ಸೂಚಿಸಿದರು.

ಗೋಕರ್ಣ: ಇಲ್ಲಿನ ಬಸ್ ನಿಲ್ದಾಣ ಹಾಗೂ ಗ್ರಾಮ ಪಂಚಾಯಿತಿಯ ಅಶೋಕೆಯಲ್ಲಿ ನಿರ್ಮಿಸಿದ ಎಫ್‌ಎಸ್‌ಟಿ ಘಟಕಕ್ಕೆ ಜಿಲ್ಲಾ ಲೋಕಾಯುಕ್ತ ಎಸ್. ಪಿ. ಕುಮಾರಚಂದ್ರ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಿರುವುದು ಹಾಗೂ ಶೌಚಾಲಯದಲ್ಲಿ ಹೆಚ್ಚಿನ ದರ ಆಕರಣೆ, ಸ್ವಚ್ಛತೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಂಚಾರ ನಿಯಂತ್ರಕರಿಗೆ ಸ್ವಚ್ಛತೆ ಕಾಪಾಡಲು ಸೂಚಿಸಿದರು.

ಅದೇ ರೀತಿ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕ ಹಾಕಿರುವ ತ್ಯಾಜ್ಯ ರಾಶಿಯನ್ನು ಕಂಡು, ಈ ರೀತಿ ಕಸ ಎಸೆದಿರುವುದು ಏಕೆ ಎಂದು ಪ್ರಶ್ನಿಸಿ, ಮೂರು ದಿನದೊಳಗೆ ಕಸ ತೆಗೆದು ಸ್ವಚ್ಛಗೊಳಿಸಿ ನಂತರ ಫೋಟೋ ಸಹಿತ ವರದಿ ನೀಡುವಂತೆ ಖಡಕ್ ಆದೇಶ ನೀಡಿದರು. ಬಸ್ ನಿಲ್ದಾಣದ ಶೌಚಾಲಯದಲ್ಲಿ ಹೆಚ್ಚು ಹಣ ಆಕರಣೆ ಹಾಗೂ ಸ್ವಚ್ಛತೆ ಇಲ್ಲದಿರುವುದು, ಅಶೋಕೆಯ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕದಲ್ಲಿ ತ್ಯಾಜ್ಯ ರಾಶಿ ಹಾಕಿದ ಪರಿಣಾಮ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪತ್ರಿಕೆ ಪ್ರಕಟಿಸಿತ್ತು. ಇದನ್ನೇ ಆಧರಿಸಿ ಲೋಕಾಯುಕ್ತ ಅಧಿಕಾರಿಗಳ ಆಗಮಿಸಿದ್ದರು.

ಈ ವೇಳೆ ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ, ಪ್ರಸಾದ ಪನ್ನೇಕರ ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುನಾಥ ಉಪಸ್ಥಿತರಿದ್ದರು.

ಗಜಾನನ ಮಾರುತಿ ತಾಳಮದ್ದಲೆ ಕೂಟ ಉದ್ಘಾಟನೆ

ಯಲ್ಲಾಪುರ: ಕಲಾ ಸೇವೆ ದೇವತಾರಾಧನೆಯ ಒಂದು ಭಾಗ. ನಿರಂತರವಾಗಿ ದೇವರ ಸನ್ನಿಧಿಯಲ್ಲಿ ಕಲಾರಾಧನೆ ನಡೆಯುವಂತಾಗಲಿ ಎಂದು ದೇವಸ್ಥಾನದ ಅರ್ಚಕ ನಾರಾಯಣ ಭಟ್ಟ ಜೋಗಿನಜಡ್ಡಿ ತಿಳಿಸಿದರು.ಅ. ೧೭ರಂದು ಸಂಜೆ ಪಟ್ಟಣದ ಹುಲ್ಲೋರಮನೆ ಗಜಾನನ ಮಾರುತಿ ಸಭಾಭವನದಲ್ಲಿ ಗಜಾನನ ಮಾರುತಿ ತಾಳಮದ್ದಲೆ ಕೂಟವನ್ನು ಉದ್ಘಾಟಿಸಿ, ಮಾತನಾಡಿದರು.

ನಂತರ ಹೊಸ್ತೋಟ ಮಂಜುನಾಥ ಭಾಗ್ವತ ವಿರಚಿತ ರಾಮ ನಿರ್ಯಾಣ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಭಾಗ್ವತ ದೇವರಗದ್ದೆ, ನಾಗೇಂದ್ರ ಭಾಗ್ವತ ಶೇಡಿಜಡ್ಡಿ, ಗೋಪಾಲಕೃಷ್ಣ ಭಟ್ಟ ಮೊಟ್ಟೆಪಾಲ, ಮದ್ದಲೆ ವಾದಕರಾಗಿ ಗಣಪತಿ ಹೆಗಡೆ ಕಣ್ಣಿಜಡ್ಡಿ ಭಾಗವಹಿಸಿದ್ದರು.

ವಿ.ಟಿ. ಭಟ್ಟ ಸೂಳಗಾರ(ರಾಮ), ಶ್ರೀಧರ ಅಣಲಗಾರ(ಲಕ್ಷ್ಮಣ), ಸುಬ್ರಾಯ ಭಟ್ಟ ಇಡಗುಂದಿ(ಕಾಲಪುರುಷ), ಜಿ.ಎಸ್. ಭಟ್ಟ ತಟ್ಟಿಗದ್ದೆ(ದೂರ್ವಾಸ) ವಿವಿಧ ಪಾತ್ರಗಳನ್ನು ನಿರ್ವಹಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌