ನಾಪೋಕ್ಲು ಪಿಪಿ ಫೌಂಡೇಶನ್‌ನಿಂದ ಸ್ವಚ್ಛತಾ ಅಭಿಯಾನ

KannadaprabhaNewsNetwork |  
Published : Oct 21, 2025, 01:00 AM IST
ಅಭಿಯಾನ | Kannada Prabha

ಸಾರಾಂಶ

ಸ್ವಚ್ಛ ಕೊಡಗು ಸುಂದರ ಕೊಡಗು ಹೆಸರಿನ ಸ್ವಚ್ಛತಾ ಅಭಿಯಾನಕ್ಕೆ ಪಿಪಿ ಫೌಂಡೇಶನ್‌ ಸಾಥ್‌ ನೀಡಿತು.

ನಾಪೋಕ್ಲು: ಕೂರ್ಗ್‌ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಕೊಡಗು - ಸುಂದರ ಕೊಡಗು ಹೆಸರಿನ ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯ ಪಿಪಿ ಫೌಂಡೇಶನ್ ಸಾಥ್‌ ನೀಡಿತು.

ಅಭಿಯಾನದಲ್ಲಿ ಪಟ್ಟಣದಿಂದ ಸಂತೆ ಮೈದಾನದವರೆಗೆ ರಸ್ತೆಯ ಬದಿಗಳಲ್ಲಿದ್ದ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛತೆಯನ್ನು ಮಾಡಲಾಯಿತು. ಈ ಸಂದರ್ಭ ಪಿಪಿ ಫೌಂಡೇಶನ್ ಅಧ್ಯಕ್ಷ ಸಲೀಂ ಹ್ಯಾರಿಸ್, ಅಬ್ದುಲ್ ರೆಹಮಾನ್ ಹಾಜಿ ಹಳೆ ತಾಲೂಕು, ಪಿ. ಎ ಶಾಹಿದ್, ಅರಫತ್ ವರ್ತಕ ಎಂ.ಎ ಮನ್ಸೂರ್ ಆಲಿ, ಅಹಮದ್ ಪಿಪಿ ಫೌಂಡೇಶನ್ ಸದಸ್ಯರು ಇನ್ನಿತರರು ಭಾಗವಹಿಸಿದ್ದರು.

-----------------------------------------------------------

ನ. 6 ರಿಂದ ಸುವರ್ಣ ಸಂಭ್ರಮ ಜೇಸಿ ಸಪ್ತಾಹ

ಕನ್ನಡಪ್ರಭವಾರ್ತೆ ಸೋಮವಾರಪೇಟೆಇಲ್ಲಿನ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆ ವತಿಯಿಂದ ನ. 6 ರಿಂದ 10ರ ವರೆಗೆ ಸುವರ್ಣ ಸಂಭ್ರಮ ಜೇಸಿ ಸಪ್ತಾಹ 2025 ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್ ತಿಳಿಸಿದರು.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜಮ್ಮ ಕಲ್ಯಾಣ ಮಂಟಪದಲ್ಲಿ ನ.6 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 7.30ಕ್ಕೆ ಯುಕೆಜಿ, ಒಂದರಿಂದ, ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಛದ್ಮವೇಷ ಸ್ಪರ್ಧೆ ನಡೆಯುವುದು.

ನ. 7ರಂದು ಬೆಳಗ್ಗೆ 10.30ಕ್ಕೆ 4ರಿಂದ 7 ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಕಾಲೇಜು ಹಾಗೂ ಸಾರ್ವಜನಿಕರಿಗೆ ಮೂರು ವಿಭಾಗಗಳಲ್ಲಿ ಚದುರಂಗ ಸ್ಪರ್ಧೆ ನಡೆಯಲಿದೆ. ಸಂಜೆ 6-30ಕ್ಕೆ ಮಹಿಳಾ ವಿಭಾಗದಿಂದ ಅಮ್ಮನ ಮಡಿಲು ಎಂಬ ಅಮ್ಮ ಮತ್ತು ಮಕ್ಕಳ ಭಾಂದವ್ಯದ ಆಟ ಸ್ಪರ್ಧೆ ನಡೆಯಲಿದೆ. ನ. 8ರಂದು ಬೆಳಿಗ್ಗೆ 10.30ಕ್ಕೆ 4 ರಿಂದ 7 ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬರವಣಿಗೆ ಸ್ಪರ್ಧೆ, 11ಕ್ಕೆ ಸ್ಥಳದಲ್ಲಿ ಕ್ಲೇ ಕ್ರಾಪ್ಟ್ ಸ್ಪರ್ಧೆ ನಡೆಯಲಿದೆ. ಸಂಜೆ 6ಕ್ಕೆ ಪ್ರಾಥಮಿಕ. ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕರ ವಿಭಾಗದ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ. ಮೊದಲು ಬಂದ 10 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ನ.9ಕ್ಕೆ ಬೆಳಿಗ್ಗೆ 7ಕ್ಕೆ ಬಾಲಕರು ಮತ್ತು ಬಾಲಕೀಯರಿಗೆ ಪ್ರತ್ಯೇಕ ಮ್ಯಾರಥಾನ್ ಸ್ಪರ್ಧೆ ಜೇಸಿ ವೇದಿಕೆ ಎದುರು ನಡೆಯಲಿದೆ. 10.30ಕ್ಕೆ ಜೂನಿಯರ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ನಿಧಾನವಾಗಿ ಸೈಕಲ್ ಚಲಿಸುವ ಸ್ಪರ್ಧೆ ನಡೆಯುವುದು. ಪುರುಷರಿಗೆ ನಿಧಾನವಾಗಿ ಮೋಟಾರ್ ಸೈಕಲ್ ಚಲಿಸುವ ಸ್ಪರ್ಧೆ ಹಾಗೂ 4 ಚಕ್ರ ವಾಹನ ಹಿಂದೆ ಚಲಿಸುವ ಸ್ಪರ್ಧೆ ನಡೆಯುವುದು. ಸಂಜೆ 6.30ಕ್ಕೆ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಮನೋಹರ್ ಮತ್ತು ತಂಡದವರಿಂದ ಪೂರ್ವಿಕ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯುವುದು.

ನ.10ಕ್ಕೆ ಬೆಳಗ್ಗೆ 10ಕ್ಕೆ ಮಹಿಳಾ ಸಮಾಜದಲ್ಲಿ ಮೈಸೂರಿನ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯುವುದು. ಸಂಜೆ 6.30ಕ್ಕೆ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿನುತ ಸುದೀಪ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರಾಜೇಶ್, ಸಪ್ತಾಹದ ಯೋಜನಾ ನಿರ್ದೇಶಕ ಎಂ.ಪಿ. ರಾಜೇಶ್ ಹಾಗೂ ಜಯಲಕ್ಷ್ಮಿ ಸುಬ್ರಮಣಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌