ಮಂಗಳೂರು: ಬೇಕಲ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಅಡಿಯಲ್ಲಿ 5ನೇ ದೀಪಾವಳಿ ಸಂಗೀತೋತ್ಸವವನ್ನು ದೀಪಾವಳಿ ದಿನದಂದು ಉದ್ಘಾಟಿಸಲಾಯಿತು.
ನಂತರ ಐದನೇ ಸಂಗೀತೋತ್ಸವದ ಮೊದಲ ಕಾರ್ಯಕ್ರಮ ಉಡುಪಿ ಪಾವನ ಆಚಾರ್ ನೇತೃತ್ವದಲ್ಲಿ ಪಂಚವಾದ್ಯ ವೀಣೆಗಳ ಕಛೇರಿ. ಇಡಯಾರ್ ಸಹೋದರರು, ತಾಮರಶ್ಶೇರಿ ಈಶ್ವರನ್ ಭಟ್ಟತಿರಿ, ವೆಳ್ಳಿಕೋತ್ ಸಹೋದರಿಯರಾದ ಉಷಾಭಟ್ ಜಯಲಕ್ಷ್ಮಿ ಭಟ್, ಕಾಞಂಗಾಡ್ ಟಿ.ಪಿ. ಶ್ರೀನಿವಾಸನ್, ಶ್ರೀಹರಿ ಭಟ್, ಚೈತನ್ಯ ಅಶೋಕ್, ಮತ್ತು ವೈಷ್ಣವಿ ನಂಬಿಯಾರ್ ಸಂಗೀತ ನೀಡಿದರು.
ಪ್ರಣವಂ ಶಂಕರನ್ ನಂಬೂದಿರಿ ಅವರ ಸಂಗೀತ ಕಛೇರಿಯಲ್ಲಿ ಎಡಪ್ಪಳ್ಳಿ ಅಜಿತ್ ಪಿಟೀಲು, ಬಾಲಕೃಷ್ಣ ಕಮ್ಮತ್ ಮೃದಂಗದಲ್ಲಿ ಮತ್ತು ಶ್ರೀಜಿತ್ ವೆಳ್ಳಾಟ್ಟತ್ತನ್ನೂರ್ ಘಟದಲ್ಲಿ ಮೆರುಗು ನೀಡಿದರು.ನಂದಿ ಮಂಟಪದಲ್ಲಿ ವೆಳ್ಳಿಕ್ಕೋತ್ ವಿಷ್ಣು ಭಟ್ ನೇತೃತ್ವದ ಪರಂಪರಾ ವಿದ್ಯಾಪೀಠದ ಭಜನಾ ಸಂಗಮದವರಿಂದ ವಿಷ್ಣು ಹೆಬ್ಬಾರ್ ರಚಿಸಿದ ಭಜನೆಯನ್ನು ಹಾಡಲಾಯಿತು. ಶ್ರೀಲತಾ ನಿಕ್ಷಿತ್ ವೀಣೆಯಲ್ಲಿ, ಕುಳಲ್ಮಂದಂ ರಾಮಕೃಷ್ಣನ್ ಮೃದಂಗದಲ್ಲಿ, ಕೃಷ್ಣಪ್ರಸಾದ್ ಹೆಬ್ಬಾರ್ ಕೀಬೋರ್ಡ್‌ನಲ್ಲಿ ಸಹಕರಿಸಿದರು.