ರಾಮನಗರ: ಪೌರ ಸೇವಾ ನೌಕರರು ಒಗ್ಗಟ್ಟಿನಿಂದ ನನ್ನ ಜೊತೆ ನಿಂತಿದ್ದಾರೆ. ನಿಮ್ಮ ಜೊತೆ ನಾನಿದ್ದೇನೆ. ನಗರ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಪೌರಕಾರ್ಮಿಕರು ಮಾತ್ರವಲ್ಲ ನಮ್ಮೆಲ್ಲರ ಮೇಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರಸಭೆ ಸ್ಥಳೀಯ ಸರ್ಕಾರವಾಗಿದ್ದು, ಚುನಾವಣೆ ಸಮಯದಲ್ಲಿ ನಗರದ ಸಮಸ್ಯೆಗಳ ಬಗ್ಗೆ ಜನರ ಗಮನ ಸೆಳೆದಿದ್ದೆವು. ನಗರದಲ್ಲಿ ಶೇಕಡ 80ರಷ್ಟು ಶ್ರಮಿಕರಿದ್ದಾರೆ. ಅವರಿಗೆ ನಗರಸಭೆಯ ಸವಲತ್ತುಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಲಭ್ಯವಾಗುವ ಸಂಪನ್ಮೂಲದಲ್ಲಿ ಅಭಿವೃದ್ಧಿ, ಪಾರ್ಕ್, ಕುಡಿಯುವ ನೀರು ಸೇರಿದಂತೆ ಹಲವು ವಲಯವಾರು ಕೆಲಸ ಮಾಡಬೇಕಿದೆ. 1996 ರಿಂದಲು ಪೌರ ಸೇವಾ ನೌಕರರು ಒಗ್ಗಟ್ಟಿನಿಂದ ನನ್ನ ಜೊತೆ ನಿಂತಿದ್ದಾರೆ. ನಿಮಗೆ ನಾನು ಸದಾ ಬೆನ್ನೆಲುಬಾಗಿ ಇರುತ್ತೇನೆ. ನಾವಿಬ್ಬರು ಕೈಜೋಡಿಸಿ ನಗರದ ಸ್ವಚ್ಛತೆ ಕಾಪಾಡೋಣ. ಸರ್ಕಾರದ ವಿಶೇಷ ಅನುದಾನ ತಂದು ಪಕ್ಷಾತೀತವಾದ ನೆರವು ತಂದು ನಗರವನ್ನು ಅಭಿವೃದ್ಧಿ ಮಾಡೋಣ ಎಂದು ಕೆ.ಶೇಷಾದ್ರಿ ಹೇಳಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜು, ಸಮಾಜದ ಕಟ್ಟಕಡೆ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಕೆ.ಶೇಷಾದ್ರಿ ಮಾಡುತ್ತಾರೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಅವರು ನಗರಸಭೆಯ ಅಧ್ಯಕ್ಷರಾಗಿದ್ದಾರೆ. ನಮ್ಮೆಲ್ಲರ ಪ್ರೀತಿಯನ್ನು ಒಪ್ಪಿ ಅಭಿನಂದನೆ ಸ್ವೀಕರಿಸುತ್ತಿರುವುದು ಸಂತಸ ಎಂದರು.ನಗರಸಭೆ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಅಧ್ಯಕ್ಷರ ವೇಗಕ್ಕೆ ನಾವು ಕೆಲಸ ಮಾಡೋಣ, ಆಗ ರಾಮನಗರ ಅಭಿವೃದ್ಧಿ ಯಾಗಲು ಸಾಧ್ಯವಾಗಲಿದೆ. ಅಧ್ಯಕ್ಷರಿಗೆ ನಾವೆಲ್ಲರೂ ಬಲಕೊಡೋಣ, ವೃಂದ ಮತ್ತು ನೇರ ನೇಮಕಾತಿಗೆ ಅಧ್ಯಕ್ಷರು ಹೆಚ್ಚು ಒತ್ತು ನೀಡಿ ಅನ್ಯಾಯವಾಗುತ್ತಿರುವವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ನಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ನರಸಿಂಹರಾಜು ಮಾತನಾಡಿ, ಅಧ್ಯಕ್ಷರ ಆಶಯ ಮತ್ತು ನಗರದ ಜನರು ನಿಮ್ಮ ಮೇಲೆ ಇಟ್ಟಿರುವ ನಿರೀಕ್ಷೆ ಯನ್ನು ಸಾಕಾರ ಮಾಡಲು ನಾವೆಲ್ಲರೂ ನಿಮ್ಮ ಕೈ ಜೋಡಿಸುವುದಾಗಿ ಅಧ್ಯಕ್ಷರಿಗೆ ನೌಕರರ ಪರವಾಗಿ ಭರವಸೆ ನೀಡಿದರು.
31ಕೆಆರ್ ಎಂಎನ್ 2.ಜೆಪಿಜಿ