ಸ್ವಚ್ಛತೆ ಇದ್ದರೆ ನೆಮ್ಮದಿ: ಶಾಸಕ ದೇಶಪಾಂಡೆ

KannadaprabhaNewsNetwork |  
Published : Sep 18, 2024, 01:54 AM IST
ಹಳಿಯಾಳದಲ್ಲಿ ಸ್ವಚ್ಛತಾ ಕಾರ್ಯಯದಲ್ಲಿ ಶಾಸಕ ಆರ್‌.ವಿ. ದೇಶಪಾಂಡೆ ಭಾಗವಹಿಸಿದ್ದರು. | Kannada Prabha

ಸಾರಾಂಶ

ಸ್ವಚ್ಛ ಮನಸ್ಸು, ಸ್ವಚ್ಛ ಪರಿಸರ, ಸ್ವಚ್ಛ ವಾತಾವರಣ ಇರುವಲ್ಲಿ ದೇವರು ವಾಸ ಮಾಡುತ್ತಾರೆ. ಸ್ವಚ್ಛತೆ ಇರುವಲ್ಲಿ ನೆಮ್ಮದಿ, ಸಮೃದ್ಧಿ, ಪ್ರೀತಿ, ಶಾಂತಿ, ಸಾಮರಸ್ಯತೆಯು ಮನೆ ಮಾಡುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಹಳಿಯಾಳ: ಸ್ವಚ್ಛತೆಯು ದೇವರ ಪೂಜೆಗೆ ಭಕ್ತಿಗೆ ಸಮಾನ ಎಂಬುದು ಮಹಾತ್ಮ ಗಾಂಧೀಜಿಯವರು ಪರಿಗಣಿಸಿದ್ದರು. ಸ್ವಚ್ಛತೆಯ ಪಾಠವನ್ನು ಬಾಲ್ಯದಲ್ಲಿಯೇ ನನ್ನ ತಾಯಿಯಿಂದಲೇ ಕಲಿತಿದ್ದೇನೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಮಂಗಳವಾರ ಪಟ್ಟಣದ ಯಲ್ಲಾಪುರ ನಾಕೆಯ ಬಳಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛ ಮನಸ್ಸು, ಸ್ವಚ್ಛ ಪರಿಸರ, ಸ್ವಚ್ಛ ವಾತಾವರಣ ಇರುವಲ್ಲಿ ದೇವರು ವಾಸ ಮಾಡುತ್ತಾರೆ. ಸ್ವಚ್ಛತೆ ಇರುವಲ್ಲಿ ನೆಮ್ಮದಿ, ಸಮೃದ್ಧಿ, ಪ್ರೀತಿ, ಶಾಂತಿ, ಸಾಮರಸ್ಯತೆಯು ಮನೆ ಮಾಡುತ್ತದೆ ಎಂದರು. ಹಲವರು ಭಾಗಿ: ಸ್ವಚ್ಛತಾ ಆಂದೋಲನದ ಮೊದಲ ದಿನ ಯಲ್ಲಾಪುರ ನಾಕೆಯಿಂದ ಎಂಜಿನಿಯರಿಂಗ್ ಕಾಲೇಜಿನವರೆಗೆ ಸ್ವಚ್ಛತೆಯನ್ನು ಮಾಡಲಾಯಿತು. ಪುರಸಭೆಯ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಮಾಜಿ ಅಧ್ಯಕ್ಷ ಅಜರ ಬಸರಿಕಟ್ಟಿ, ಉಮೇಶ ಬೊಳಶೆಟ್ಟಿ, ಶಂಕರ ಬೆಳಗಾಂವಕರ, ಮಾಜಿ ಉಪಾಧ್ಯಕ್ಷ ಫಯಾಜ ಶೇಖ್, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಪ್ರಭಾರೆ ಇಒ ಸತೀಶ್ ಆರ್., ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಬಿಇಒ ಪ್ರಮೋದ ಮಹಾಲೆ, ಸಿಡಿಪಿಪಿಒ ಡಾ. ಲಕ್ಷ್ಮೀದೇವಿ, ಸಿಪಿಐ ಜಯಪಾಲ್ ಪಾಟೀಲ, ಪಿಎಸ್‌ಐಗಳಾದ ವಿನೋದ ರೆಡ್ಡಿ, ಅಮಿನ್ ಅತ್ತಾರ ಹಾಗೂ ಕಾಂಗ್ರೆಸ್ ಮುಖಂಡ ಸುಭಾಸ ಕೊರ್ವೆಕರ, ಕೃಷ್ಣ ಪಾಟೀಲ ಇತರರು ಇದ್ದರು.

ತಾಲೂಕಿನೆಲ್ಲೆಡೆ ಸ್ವಚ್ಛತಾ ಕಾರ್ಯ: ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಆಯಾ ಪುರಸಭೆ ಸದಸ್ಯರ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲು ಮುಖ್ಯಾಧಿಕಾರಿಗಳಿಗೆ ಹಾಗೂ ಗಾಂಧೀ ಜಯಂತಿ ಮುನ್ನ ತಾಲೂಕಿನೆಲ್ಲೆಡೆ ಸ್ವಚ್ಛತಾ ಸಪ್ತಾಹವನ್ನು ಕೈಗೊಳ್ಳಲು ತಹಸೀಲ್ದಾರರಿಗೆ ದೇಶಪಾಂಡೆ ಸೂಚಿಸಿದರು. ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ದಾಂಡೇಲಿ: ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ ಹಾಗೂ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ನಂದಗೋಕುಲ ಉದ್ಯಾನವನದಲ್ಲಿ ಸ್ವಚ್ಛತಾ ಅಭಿಯಾನ ನಗರದ ನಂದಗೋಕುಲ ಉದ್ಯಾನವನದಲ್ಲಿ ಮಂಗಳವಾರ ನಡೆಯಿತು.ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ ಅವರು ಗಿಡ ನೆಡುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಅಭಿಯಾನವು ಅ. ೧ರ ವರೆಗೆ ನಡೆಯಲಿದೆ. ಪ್ರತಿದಿನ ನಗರದ ಆಯ್ದ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಈ ಅಭಿಯಾನವು ಸ್ವಚ್ಛತೆಗಾಗಿ ಜನಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ ಮಾತನಾಡಿದರು. ನಗರಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೊಡೆ, ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ, ನಗರಸಭೆಯ ಸದಸ್ಯರಾದ ಯಾಸ್ಮೀನ ಕಿತ್ತೂರ, ಮೌಲಾಲಿ ಮುಲ್ಲಾ, ಮೋಹನ ಹಲವಾಯಿ, ಅನಿಲ ನಾಯ್ಕರ, ಆಸೀಫ ಮುಜಾವರ, ಮಹಾದೇವ ಜಮಾದಾರ, ರುಕ್ಮೀನಿ ಬಾಗಡೆ, ವೆಂಕಟರಮಣಮ್ಮ ಮೈತಕುರಿ ಇತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌