ಬಸವರಾಜ ಹಿರೇಮಠ
ಸತತ ಮಳೆಯಿಂದಾಗಿ ಕಲಘಟಗಿ ಹೊರತುಪಡಿಸಿ ಆರು ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿತ್ತು. ವಿಶೇಷವಾಗಿ ನವಲಗುಂದ, ಕುಂದಗೋಳ ತಾಲೂಕಿನಲ್ಲಿ ಹರಿಯುವ ಬೆಣ್ಣೆಹಳ್ಳದ ಪ್ರಭಾವದಿಂದ ಈ ಭಾಗದ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಹೊಲಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಯಿತು. ಮುಂಗಾರಿನಲ್ಲಿ ಬಹುತೇಕ ಎಲ್ಲ ಹಳ್ಳ-ಕೊಳ್ಳಗಳು ಮೈದುಂಬಿ ಹರಿದು ಅವಾಂತರವೇ ಸೃಷ್ಟಿಯಾಗಿತ್ತು. ಅತಿಯಾದ ಮಳೆಯಿಂದ ಈ ವರ್ಷ ಪ್ರತ್ಯೇಕವಾಗಿ ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಸಹ ಘೋಷಿಸಲಾಗಿತ್ತು.
ಜೂನ್ 14ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಕೋನರಡ್ಡಿ ಹಾಗೂ ಅಧಿಕಾರಿಗಳು ಬೆಣ್ಣೆಹಳ್ಳಕ್ಕೆ ಭೇಟಿ ನೀಡಿ ಈ ಹಳ್ಳದ ಅಗಲೀಕರಣಕ್ಕೆ ₹1600 ಕೋಟಿ ಹಣ ಒದಗಿಸುವುದಾಗಿ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.2025ನೇ ವರ್ಷದ ಮಹಾಮಳೆಗೆ ಜಿಲ್ಲೆಯಲ್ಲಿ ಉಂಟಾದ ಬೆಳೆಹಾನಿಯನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಿದೆ. ಮುಂಗಾರಿನಲ್ಲಿ 96 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದ್ದು, ಜಿಲ್ಲೆಯಲ್ಲಿ 500 ಕಿಮೀಗೂ ಹೆಚ್ಚು ರಸ್ತೆ ಹಾನಿ, 102 ಸೇತುವೆಗಳು, ಸಿಡಿಗಳಿಗೆ ಹಾನಿಯಾಗಿದೆ. 1241 ವಿದ್ಯುತ್ ಕಂಬಗಳು ಉರುಳಿವೆ. 128 ಮನೆಗಳಿಗೂ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 65 ಸಾವಿರ ರೈತರ ಫಲಾನುಭವಿಗಳಿಗೆ 72,909 ಹೆಕ್ಟೇರ್ ಪ್ರದೇಶಕ್ಕೆ ₹63.16 ಕೋಟಿ ಪರಿಹಾರ ಸಹ ಕಳೆದ ಸಪ್ಟೆಂಬರ್ ತಿಂಗಳಲ್ಲಿ ನೀಡಲಾಗಿದೆ.
ಅತಿ ಚಳಿಇನ್ನು, ಅತಿಯಾದ ಮಳೆ ರೀತಿಯಲ್ಲಿಯೇ ಈ ಬಾರಿ ಅತಿ ಚಳಿಯೂ ಇದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಚಳಿ ಇರುವ ಅಂದರೆ 8 ಡಿಗ್ರಿ ಸೆಲ್ಸಿಯಸ್ ವರೆಗೂ ಧಾರವಾಡದಲ್ಲಿ ಚಳಿ ದಾಖಲಾಗಿದ್ದು, ಧಾರವಾಡ ಜನತೆ ಮಳೆಯಲ್ಲದೇ ಚಳಿಗೂ ತತ್ತರಿಸಿ ಹೋದರು. ನವೆಂಬರ್ ತಿಂಗಳಿಂದ ಶುರುವಾಗಿರುವ ಮೈ ಕೊರೆಯುವ ಚಳಿ ಡಿಸೆಂಬರ್‌ನಲ್ಲೂ ಮುಂದುವರಿದಿದೆ. ಮಧ್ಯಾಹ್ನದ ಬಿಸಿಲಿನಲ್ಲೂ ಚಳಿ ಚಳಿ ಅನುಭವ. ಶೀತಗಾಳಿಯಿಂದ ಇಡೀ ದಿನ ಥಂಡೀ ವಾತಾವರಣವಿದೆ. ಆದರೆ, ಒಂದು ಸಮಾಧಾನದ ಸಂಗತಿ ಏನೆಂದರೆ, ಈ ಚಳಿಯಿಂದ ಹಿಂಗಾರು ಬೆಳೆಗಳಾದ ಕಡಲೆ, ಗೋದಿ, ಮಾವಿಗೆ ಅನುಕೂಲಕರವಾಗಿದೆ.
2025ರಲ್ಲಿ ನಡೆದಿರುವ ಪ್ರಮುಖ ಘಟನಾವಳಿಗಳು...ಜನವರಿ ತಿಂಗಳು- ಕೃಷಿ ವಿವಿ ಆವರಣದಲ್ಲಿ ಏಕಾಏಕಿ ನಿರ್ಮಾಣವಾಗಿದ್ದ ಅಯ್ಯಪ್ಪ ಸ್ವಾಮಿ ದೇವಸ್ಥಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು
- ಸಚಿವ ಸಂಪುಟದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಅನುಮೋದನೆ.- ಕರ್ನಾಟಕ ವಿವಿ ಬೆಳಗು ವಿವಾದ ಪಠ್ಯ ಪ್ರಕರಣದಿಂದಾಗಿ ಅರಿವೇ ಗುರು ಪ್ರಶಸ್ತಿ ಪ್ರದಾನ ಮಂದೂಡಿಕೆ - ಪ್ರಶಸ್ತಿ ಸ್ವೀಕರಿಸಲು ಬಂದಿದ್ದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಮೂವರು ಪ್ರಶಸ್ತಿ ಪುರಸ್ಕೃತರಿಗೆ ಅವಮಾನಕರ ಘಟನೆ
- ಧಾರವಾಡ ಆಕಾಶವಾಣಿ ಕೇಂದ್ರ ಅಮೃತ ಮಹೋತ್ಸವ,ಫೆಬ್ರವರಿ- ಫೆ. 3ರಂದು ಧಾರವಾಡದ ಮುರುಘಾಮಠದ ರಥೋತ್ಸವ- ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ಸರ್ವೋದಯ ಸಮುದಾಯದಿಂದ ಧಾರವಾಡದಿಂದ ಗರಗ ಗ್ರಾಮಕ್ಕೆ ‘ನಮ್ಮ ನಡಿಗೆ ಸರ್ವೋದಯದ ಕಡೆಗೆ’ ಪಾದಯಾತ್ರೆಮಾರ್ಚ್- ಭೂ ಮಾಲೀಕರು ಹಾಗೂ ಕೆಲವು ಗ್ರಾಮಸ್ಥರ ವಿರೋಧದ ಮಧ್ಯೆಯೂ ಧಾರವಾಡ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆಯಾಗಿರುವ ಮೃಣಾಲ್ ಶುಗರ್ಸ್‌ಗೆ ಮಾ. 30ರ ಯುಗಾದಿ ದಿನ ಪೂಜೆ.
ಏಪ್ರಿಲ್- ತಾಲೂಕಿನ ಕೋಟೂರು ಗ್ರಾಪಂ ಮಾಜಿ ಸದಸ್ಯ ಶಂಕ್ರಯ್ಯ ಮಠಪತಿ ಅವರನ್ನು ಏ. 29ರಂದು ಇಬ್ಬರು ದುಷ್ಕರ್ಮಿಗಳಿಂದ ಭೀಕರ ಕೊಲೆ.
- ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯ ಲೋಹದ ಫಲಕ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಂದ ಅನಾವರಣಮೇ- ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕ್ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಕೇಂದ್ರ ಕಚೇರಿ ಹೊಂದಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಬಳ್ಳಾರಿ ಕೇಂದ್ರ ಕಚೇರಿ ಹೊಂದಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಮೇ 1ರಂದು ವಿಲೀನವಾಯಿತು. - ಸುಮಾರು 21 ವರ್ಷಗಳ ನಂತರ ತಾಲೂಕಿನ ಯಾದವಾಡ ಗ್ರಾಮದೇವತೆಯರ ಜಾತ್ರೆ ಮೇ 1ರಿಂದ 9ರ ವರೆಗೆ ಒಂಭತ್ತು ದಿನ ಅದ್ಧೂರಿಯಾಗಿ ಜರುಗಿತು.- ಮೇ 14ರಂದು ಕೃಷಿ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಜರುಗಿತು. ಹಾವೇರಿಯ ಮುತ್ತಣ್ಣ ಪೂಜಾರ, ಹುಬ್ಬಳ್ಳಿಯ ದ್ಯಾಮನಗೌಡ ತಿಮ್ಮನಗೌಡ ಪಾಟೀಲ ಹಾಗೂ ಬೆಳಗಾವಿಯ ಶಂಕರ ಲಂಗಟಿಗೆ ಗೌರವ ಡಾಕ್ಟರೇಟ್ ಪ್ರದಾನ
- ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆ - ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಬಣದ ಎಲ್ಲರಿಗೂ ಗೆಲುವುಜೂನ್
-ಬಾಹ್ಯಾಕಾಶ ನಿಲ್ದಾಣಕ್ಕೆ ಧಾರವಾಡ ಕೃಷಿ ವಿವಿಯ ಹೆಸರು, ಮೆಂತೆ ಬೀಜ ರವಾನೆ. ಬಾಹ್ಯಾಕಾಶದಲ್ಲಿ ಸಲಾಡ್ ಬೀಜಗಳ ಮೊಳಕೆ; ಗಗನಯಾತ್ರಿಗಳ ಆಹಾರ ಪೋಷಣೆ‘ ಸಂಶೋಧನೆ ನಿಟ್ಟಿನಲ್ಲಿ ಪರೀಕ್ಷಾರ್ಥವಾಗಿ ರವಾನೆ.
- ಜೂನ್ ತಿಂಗಳಿಂದ ಧಾರವಾಡದಲ್ಲಿ ಮಲೆನಾಡಿನ ಮಳೆಯ ವಾತಾವರಣ- ಜೂನ್ 19ರಂದು ಶಾಲೆ -ಕಾಲೇಜುಗಳಿಗೆ ರಜೆ ಘೋಷಣೆಜುಲೈ
- ಸುಮಾರು ಒಂದೂವರೆ ವರ್ಷದ ನಂತರ ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಮಂಗಳೂರು ವಿ.ವಿ. ಪ್ರಾಧ್ಯಾಪಕ ಪ್ರೊ. ಎ.ಎಂ. ಖಾನ್ ನೇಮಕ- ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಏಳನೇ ಘಟಿಕೋತ್ಗವ ನಡೆಯಿತು.
- ಕಮಲಾಪುರ ಕಂಠಿಗಲ್ಲಿ ನಿವಾಸಿ ರಾಜು ಗಾಯಕವಾಡ ಎಂಬುವರಿಗೆ ಸಾಲದ ವಿಚಾರವಾಗಿ ಅದೇ ಗಲ್ಲಿಯ ಖ್ವಾಜಾ ಶಿರಹಟ್ಟಿ ಎಂಬಾತ ಚಾಕು ಚುಚ್ಚಿ ಗಾಯ. ಆರೋಪಿಗೆ ಪೊಲೀಸರಿಂದ ಗುಂಡೇಟು ಬಂಧನ. ಎರಡ್ಮೂರು ದಿನಗಳಲ್ಲಿ ಗಾಯಾಳು ರಾಜು ನಿಧನಸೆಪ್ಟೆಂಬರ್
- ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ. ಸೆ. 12ರಿಂದ 15ರ ವರೆಗೆ ಮೂರು ದಿನಗಳ ಕಾಲ ವಿವಿಧ ಜಿಲ್ಲೆಗಳ ಲಕ್ಷಾಂತರ ಜನರ ಭೇಟಿ.- ಖಾಲಿ ಹುದ್ದೆಗಳ ನೇಮಕಾತಿಗಾಗಿ ಆಗ್ರಹಿಸಿ ಧಾರವಾಡ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಎಕೆಎಸ್‌ಎಸ್‌ಎ) ಬೃಹತ್ ಪ್ರತಿಭಟನೆ. ಅಕ್ಟೋಬರ್
- ಅ. 12ರಂದು ನಟ, ರಂಗ ಕಲಾವಿದ ಹಾಗೂ ಧಾರವಾಡ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಕಾಲಿಕ ನಿಧನ- ಧಾರವಾಡ ಐಐಟಿಯಲ್ಲಿ ಧರ್ತಿ ಬಯೋನೆಸ್ಟ್ ಕೇಂದ್ರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಉದ್ಘಾಟನೆ. ನವೆಂಬರ್
- ಧಾರವಾಡದ ನಗರ ಬಸ್ ನಿಲ್ದಾಣ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಉದ್ಘಾಟನೆ.- ಸಾಲಬಾಧೆ ಮತ್ತು ವೈಯುಕ್ತಿಕ ಕಾರಣದಿಂದ ಚಿಕ್ಕಮಲ್ಲಿಗವಾಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಅದೇ ಗ್ರಾಮದ ಬಾವಿಗೆ ಬಿದ್ದು ಆತ್ಮಹತ್ಯೆ
- ಕರ್ನಾಟಕ ವಿವಿ ಪ್ರಾಧ್ಯಾಪಕ ಸುಭಾಸಚಂದ್ರ ನಾಟೀಕರ ಮನೆ ಮೇಲೆ ಲೋಕಾಯುಕ್ತ ದಾಳಿ. ನ. 25ರಂದು ಒಟ್ಟು ಮೂರು ಕಡೆ ದಾಳಿ.ಡಿಸೆಂಬರ್-ಬೆಳಗಾವಿ ಕೃಷಿ ವಿಜಿಲೆನ್ಸ್ ಉಪ ನಿರ್ದೇಶಕ ರಾಜಶೇಖರ ಬಿಜಾಪುರ ಮನೆ ಮೇಲೆ ಡಿ. 16ರಂದು ಲೋಕಾಯುಕ್ತ ದಾಳಿ. ಬೆಳಾಗಾವಿ, ಹಾವೇರಿ, ಧಾರವಾಡದ ಮನೆಗಳ ಮೇಲೆ ದಾಳಿ. ದಾಳಿ ವೇಳೆ ₹50 ಸಾವಿರ ಹಣ ಫ್ಲಶ್ ಮಾಡಿದ ಅಧಿಕಾರಿ. - ಡಿ. 17ರಂದು ಬಳ್ಳಾರಿ ಮೂಲದ ಯುವತಿ ರೈಲಿಗೆ ಬಿದ್ದು ಆತ್ಮಹತ್ಯೆ. ಆರಂಭದಲ್ಲಿ ನೌಕರಿ ಸಿಗಲಿಲ್ಲ ಎಂಬ ಕಾರಣ ಇದ್ದರೂ ನಂತರ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಎಂದು ಡೆತ್ ನೋಟ್‌ನಲ್ಲಿ ಮಾಹಿತಿ.ವಿದ್ಯಾರ್ಥಿ ಹೋರಾಟರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ವಯೋಮಿತಿ ಸಡಿಲಿಸಲು ಧಾರವಾಡದಲ್ಲಿ ವಿದ್ಯಾರ್ಥಿಗಳು ಒಂದು ರೀತಿಯಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಚಾಲನೆ ನೀಡಿದ ವರ್ಷವಿದು. ವರ್ಷಾಂತಕ್ಕೆ ಈ ವಿಚಾರವಾಗಿ ಧಾರವಾಡದಲ್ಲಿ ದೊಡ್ಡ ಹೋರಾಟ ನಡೆಯಿತು. ನಂತರದಲ್ಲಿ ನಾಲ್ಕು ಬಾರಿ ಹೋರಾಟಕ್ಕೆ ಪೊಲೀಸ್ ಅನುಮತಿ ಸಿಗದೇ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಸಹ ಹೋಗಿದ್ದು, ನಂತರದಲ್ಲಿ ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.