ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಂಡ್ಲುಪೇಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ೨೫ ಕೋಟಿ ರು.ಗಳ ಅನುದಾವನ್ನು ತಮ್ಮ ವಿಶೇಷ ಕೋಟಾದಲ್ಲಿ ನೀಡಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.ತಾಲೂಕಿನ ಹರವೆ ಹೋಬಳಿ ವ್ಯಾಪ್ತಿಯ ಕಲ್ಪುರ, ಹಳೇಪುರ, ಕೇತಹಳ್ಳಿ, ಸಾಗಡೆ, ಮುಡ್ನಾಕೂಡು, ಬೆಟ್ಟದಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸುಮಾರು ೩ ಕೋಟಿಗೂ ಹೆಚ್ಚು ಅನುದಾನದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಕೋರಿಕೆ ಮೇರೆಗೆ ಇತರೇ ವರ್ಗಗಳ ಬೀದಿಗಳ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ೨೫ ಕೋಟಿ ರು. ನೀಡಿದ್ದಾರೆ. ಕ್ಷೇತ್ರದ ಜನರ ಪರವಾಗಿ ಅವರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ರಾಜ್ಯ ಸಮಗ್ರ ಅಭಿವೃದ್ಧಿಗಾಗಿ ಅವರು ಕೈಗೊಂಡಿರುವ ಕಾರ್ಯಕ್ರಮಗಳು ಸರ್ವ ವ್ಯಾಪಿಯಾಗಿದೆ. ಪಂಚ ಗ್ಯಾರಂಟಿಗಳ ಅನುಷ್ಠಾನ ಮತ್ತು ಬಡವರ ಪರವಾಗಿ ಸಿದ್ದರಾಮಯ್ಯ ಅವರು ನೀಡುತ್ತಿರುವ ಕಾರ್ಯಕ್ರಮಗಳು ಹೆಚ್ಚು ಪ್ರಚಲಿತವಾಗಿ ನಿನ್ನೆ ನಡೆದ ವಿಜಯನಗರ ಸಮಾವೇಶವೇ ಇದಕ್ಕೆ ಸಾಕ್ಷಿ ಎಂದರು.
ಈಗಾಗಲೇ ಹರವೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗಾಗಿ ಅನುದಾನ ನೀಡಿ, ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಕಲ್ಪುರ ಗ್ರಾಮದಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಹಳೇಪುರ ಗ್ರಾಮದಲ್ಲಿ ೪೦ ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಮೂಡ್ನಾಕೂಡು ಗ್ರಾಮಕ್ಕೆ ೫೦ ಲಕ್ಷ ರೂ. ಬೆಟ್ಟದಪುರ ಗ್ರಾಮಕ್ಕೆ ೫೦ ಲಕ್ಷ ರೂ. ಸಾಗಡೆ ಗ್ರಾಮದಲ್ಲಿ ೪೦ ಲಕ್ಷ ರೂ. ಕೇತಹಳ್ಳಿ ಯಲ್ಲಿ ೪೦ ಲಕ್ಷ ರೂ. ಹಾಗೂ ಪುಟ್ಟೇಗೌಡನಹುಂಡಿಯಲ್ಲಿ ೨೦ ಲಕ್ಷ ರು. ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ಗ್ರಾಪಂ ಅಧ್ಯಕ್ಷರಾದ ಸಾಗಡೆ ಶಿವಕುಮಾರ್, ಕಲ್ಪುರ ಗ್ರಾಪಂ ಅಧ್ಯಕ್ಷೆ ಮಾದಲಾಂಬಿಕೆ, ಮಂಜುನಾಥ್, ಬಸವಣ್ಣ, ನಟರಾಜು, ಗುರುಬಸಪ್ಪ, ಪಟೇಲ್ ಸುರೇಶ್, ನಟರಾಜು, ಗೌಡಿಕೆ ಲಿಂಗಪ್ಪ, ತಾಪಂ ಮಾಜಿ ಸದಸ್ಯ ಉದಯಕುಮಾರ್, ಕೆಬ್ಬಪುರ ಹರೀಶ್, ಹೊಸಹಳ್ಳಿ ಮಧುಸೂಧನ್, ಹಳೇಪುರ ಗುರುಸಿದ್ದೇಗೌಡ, ಬೆಳ್ಳೇಗೌಡ, ಕಲ್ಪುರ ಮಂಜುನಾಥ್, ಮಲ್ಲೇಶ್, ಶಿವಕುಮಾರ್, ಪ್ರಸಾದ್, ಹಿರಿಬೇಗೂರು ಗುರುಸ್ವಾಮಿ, ಮೂಡ್ನಾಕೂಡು ಸತೀಶ್, ಮಂಜುನಾಥ್, ನಾಗೇಶ್ ಮೊದಲಾದವರು ಇದ್ದರು.