ಅಂಕಗಳ ಹಿಂದೆ ಬಿದ್ದು ಮಾರ್ಕ್ಸ್‌ವಾದಿಗಳಾಗಬೇಡಿ

KannadaprabhaNewsNetwork | Published : May 22, 2025 1:32 AM
ಕನ್ನಡಪ್ರಭ ವಾರ್ತೆ ಸಿಂದಗಿ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳೇ ಇಲ್ಲ. ಮೌಲ್ಯಯುತ ಶಿಕ್ಷಣ ಹಾಗೂ ಬದುಕು ರೂಪಿಸುವ ಶಿಕ್ಷಕರು ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿದ್ದಾರೆ ಎಂದು ಉಪನ್ಯಾಸಕ ಮಂಜುನಾಥ ಜುನಗೊಂಡ ಕಳವಳ ವ್ಯಕ್ತಪಡಿಸಿದರು.
Follow Us

ಕನ್ನಡಪ್ರಭ ವಾರ್ತೆ ಸಿಂದಗಿ

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳೇ ಇಲ್ಲ. ಮೌಲ್ಯಯುತ ಶಿಕ್ಷಣ ಹಾಗೂ ಬದುಕು ರೂಪಿಸುವ ಶಿಕ್ಷಕರು ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿದ್ದಾರೆ ಎಂದು ಉಪನ್ಯಾಸಕ ಮಂಜುನಾಥ ಜುನಗೊಂಡ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಯುವ ಬರಹಗಾರ, ಶಿಕ್ಷಕ ಅಶೋಕ ಬಿರಾದಾರ ಸಂಪಾದಕತ್ವದ ಬದುಕು ಪ್ರೀತಿಸಿದ ಮೇಸ್ಟ್ರು ಪುಸ್ತಕ ಬಿಡುಗಡೆ ವೇಳೆ, ಕೃತಿಯ ಅವಲೋಕನ ಮಾಡಿ ಮಾತನಾಡಿದರು. ಎಲ್ಲರೂ ಅಂಕಗಳ ಹಿಂದೆ ಬಿದ್ದು ಮಾರ್ಕ್ಸ್ ವಾದಿಗಳು ಆಗುತ್ತಿದ್ದಾರೆ. ಇಂದು ಆದರ್ಶ ಶಿಕ್ಷಕ ಪ್ರಶಸ್ತಿ ಎನ್ನುವುದು ವ್ಯಾಪಾರವಾಗಿ ಬಿಟ್ಟಿದೆ. ಪ್ರಶಸ್ತಿ ನೀಡಲೆಂದು ಹಲವು ಸಂಘ-ಸಂಸ್ಥೆಗಳು ಜನ್ಮತಾಳುತ್ತಿವೆ. ಹಣ ಕೊಟ್ಟು ಅಭಿನಂದನಾ ಗ್ರಂಥ ಬರೆಸಿಕೊಳ್ಳುವ ಪರಿಸ್ಥಿತಿಯಲ್ಲಿ ನಾವಿಂದು ಬಂದು ನಿಂತಿದ್ದೇವೆ. ದಿ.ಶಿಕ್ಷಕ ಬಸಣ್ಣ ನಾಯ್ಕಲ್ ಅವರಂತವರು ಸಿಗುವುದು ಬಹಳ ವಿರಳ. ಅಥರ್ಗದಲ್ಲಿ ರೇವಣಸಿದ್ದ ಎಂಬ ಶಿಕ್ಷಕನ ಗುಡಿ ಕಟ್ಟಿದ್ದು ಜನರೇ ಜಾತ್ರೆ ಮಾಡುತ್ತಾರೆ. ಇಂತಹ ಮೌಲ್ಯಗಳನ್ನು ಹೊಂದಿರುವ ಶಿಕ್ಷಕರು ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಿದೆ ಎಂದು ಹೇಳಿದರು.ಈ ವೇಳೆ ಗ್ರಂಥ ಬಿಡುಗಡೆ ಮಾಡಿದ ಮಕ್ಕಳ ಸಾಹಿತಿ ಹ.ಮ.ಪೂಜಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಭವಿಷ್ಯ ರೂಪಿಸುವ ಸಂಸ್ಕಾರ ಕಲಿಸಬೇಕು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಗೆ ಪಾಲಕರು, ಸರ್ಕಾರ ಹಾಗೂ ಶಿಕ್ಷಕರು ಕಾರಣ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅತಿಥಿ ಗುರುರಾಜ ದೇಸಾಯಿ, ಶಿಕ್ಷಕ ಬಸಣ್ಣ ನಾಯ್ಕಲ್ ಶಿಷ್ಯರಾದ ಎಸ್.ಬಿ ಸಜ್ಜನ, ಮಲ್ಲಿಕಾರ್ಜುನ ವಡ್ಡರ ಮಾತನಾಡಿದರು. ಸಾನಿದ್ಯ ವಹಿಸಿದ್ದ ಬ್ಯಾಡಗಿಹಾಳದ ಸಿದ್ದರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ವೇಳೆ ಪುಸ್ತಕಕ್ಕೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಬೂದಿಹಾಳ ಪಿ.ಟಿ ಗ್ರಾಮದವರನ್ನು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಮನಗೌಡ ಪಾಟೀಲ, ಸೋಮಶೇಖರ ಬುಳ್ಳಾ, ಗೊಲ್ಲಾಳಪ್ಪ ಮನಗೂಳಿ, ಕುಮಾರಗೌಡ ಬಿರಾದಾರ ಸೇರಿದಂತೆ ಇತರರು ವೇದಿಕೆ ಮೇಲಿದ್ದರು. ಶೋಭಾ ಬಿರಾದಾರ, ಶಿವರಾಜ ಮುರುಡಿ, ಬಲಭೀಮ ಮಾದರ, ಪ್ರಕಾಶ ಯಂಕಂಚಿ, ಮಲ್ಲಿಕಾರ್ಜುನ ನಾಯ್ಕಲ್, ಸಂತೋಷ ಕುಳಗೇರಿ, ಸಿದ್ದು ಬ್ಯಾಕೋಡ, ಗುರುನಾಥ ಅರಳಗುಂಡಗಿ ಸೇರಿ ಅನೇಕರು ಉಪಸ್ಥಿತರಿದ್ದರು. ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಪ್ರಕಾಶ ಮೂಡಲಗಿ ಪ್ರಾರ್ಥಿಸಿದರು. ಬದುಕು ಪ್ರೀತಿಸಿದ ಮೇಸ್ಟ್ರು ಪುಸ್ತಕದ ಸಂಪಾದಕ ಹಾಗೂ ಸದ್ಗುರು ಕೋಚಿಂಗ್ ಕ್ಲಾಸ್ ಮುಖ್ಯಸ್ಥ ಅಶೋಕ ಬಿರಾದಾರ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಬರಹಗಾರ ನಾಗೇಶ ತಳವಾರ ನಿರೂಪಿಸಿದರು.