- ದಾವಣಗೆರೆ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಟ್ಟರೆ ಉತ್ತಮ: ಚನ್ನಗಿರಿ ಶಾಸಕ - - -
ಕನ್ನಡಪ್ರಭ ವಾರ್ತೆ ದಾವಣಗೆರೆಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಡಿಸೆಂಬರ್ ಅಂತ್ಯದವರೆಗೂ ನಾನು ಏನನ್ನೂ ಮಾತನಾಡುವುದಿಲ್ಲ. ಜನವರಿ 1ನೇ ತಾರೀಖಿನಂದೇ ಮಾತನಾಡುತ್ತೇನೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಡಿಸಿಎಂ ಡಿ.ಕೆ. ಶಿವಕುಮಾರ ಸಿಎಂ ಆಗುತ್ತಾರೆಂಬುದಾಗಿ ಪರೋಕ್ಷವಾಗಿ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಪ್ತ ಬಳಗದ ಶಾಸಕರಾದ ಬಸವರಾಜ ವಿ. ಶಿವಗಂಗಾ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ, ಹೊಸಬರಿಗೆ ಅವಕಾಶ ನೀಡಿದರೆ ಯಾರು ಬೇಡ ಎನ್ನುತ್ತಾರೆ? ನನ್ನ ಅಜೆಂಡಾನೇ ಬೇರೆ ಇದೆ. ನನ್ನ ಅಜೆಂಡಾ ಹೇಳಿದ್ದೀನಲ್ಲ ಎನ್ನುವ ಮೂಲಕ ತಮ್ಮ ನಾಯಕ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬೇಕೆಂಬ ಬಯಕೆಯನ್ನು ಪರೋಕ್ಷವಾಗಿ ಹೊರಹಾಕಿದರು.15 ಶಾಸಕರಿಗೆ ಸಚಿವ ಸ್ಥಾನ:
ಸಂಪುಟ ವಿಸ್ತರಣೆ ವೇಳೆ ಹೊಸದಾಗಿ 15 ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯದು. ಹಳೇ ಬೇರು, ಹೊಸ ಚಿಗುರು ಅನ್ನುವಂತೆ ಅಭಿವೃದ್ಧಿ ಕೆಲಸಗಳೂ ಆಗುತ್ತವೆ. ಹೊಸ ಶಾಸಕರಿಗೆ ಹೊಸ ಹೊಸ ಆಲೋಚನೆಗಳೂ ಇರುತ್ತವೆ. ಆಗ ಮತ್ತಷ್ಟು ಅಭಿವೃದ್ಧಿ ಕೆಲಸ, ಕಾರ್ಯಗಳೂ ಸರಾಗವಾಗಿ ಆಗುತ್ತವೆ. ಹಾಗಾಗಿ, ಹೊಸದಾಗಿ ಆಯ್ಕೆಯಾದ 15 ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.ದಾವಣಗೆರೆ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಿದರೆ ಒಳ್ಳೆಯದಾಗುತ್ತದೆ. ಹೊಸ ಶಾಸಕರು ನಾನು, ಜಗಳೂರು ದೇವೇಂದ್ರಪ್ಪ, ಮಾಯಕೊಂಡದ ಕೆ.ಎಸ್.ಬಸವಂತಪ್ಪ ಸಹ ಇದ್ದೇವೆ. ನಾವು ಮೂವರೂ ಹೊಸ ಶಾಸಕರ ಪೈಕಿ ಯಾರಿಗಾದರೂ ಸಚಿವ ಸ್ಥಾನವನ್ನು ಸಂಪುಟ ಪುನಾರಚನೆಯಲ್ಲಿ ನೀಡಲಿ. ಹಿರಿತನದಲ್ಲಿ ಸಚಿವ ಸ್ಥಾನ ನೀಡುವುದಾದರೆ ಹೊನ್ನಾಳಿ ಹಿರಿಯ ಶಾಸಕರಾದ ಡಿ.ಜಿ.ಶಾಂತನಗೌಡ ಅವರಿಗೆ ನೀಡಿದರೂ ಒಳ್ಳೆಯದು ಎಂದು ಬಸವರಾಜ ಶಿವಗಂಗಾ ಹೇಳಿದರು.
- - --17ಕೆಡಿವಿಜಿ3, 4, 5: ಬಸವರಾಜ ವಿ.ಶಿವಗಂಗಾ