ತುಮಕೂರಿಗೆ ಮೆಟ್ರೋ ; ಡಿಪಿಆರ್‌ ಗೆ ಟೆಂಡರ್

KannadaprabhaNewsNetwork |  
Published : Nov 18, 2025, 12:02 AM IST

ಸಾರಾಂಶ

ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಸಂಬಂಧ ಡಿಪಿಆರ್ ಟೆಂಡರ್ ಕರೆಯಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಸಂಬಂಧ ಡಿಪಿಆರ್ ಟೆಂಡರ್ ಕರೆಯಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೈದರಾಬಾದ್ ಮೂಲದ ಕಂಪನಿಗೆ ಕಾರ್ಯಸಾಧು ವರದಿ ತಯಾರಿಕೆಗೆ ಕೊಟ್ಟಿದ್ದೆವು, ಅವರು ವರದಿ ಕೊಟ್ಟ ನಂತರ ಸರ್ಕಾರ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ ಮುಂದುವರೆಯಬಹುದು ಅಂತ ತೀರ್ಮಾನ ಮಾಡಿದೆ ಎಂದರು.ಈಗ ಡಿಪಿಆರ್ ಮಾಡಬೇಕು ಅಂತ ತೀರ್ಮಾನ ಮಾಡಿದ್ದಾರೆ. ಅದನ್ನು ಕೂಡ ಬಿಎಂಆರ್ ಸಿಎಲ್ ಅವರೇ ಮಾಡಬೇಕು ಎಂದ ಅವರು, ಅವರೇ ಟೆಂಡರ್ ಕರಿಬೇಕು ಅದಕ್ಕೆ ನಾಲ್ಕೈದು ತಿಂಗಳು ಬೇಕಾಗುತ್ತೆ ಅಂತ ಕೇಳಿದ್ದಾರೆ. ಈಗ ಟೆಂಡರ್ ಕರಿದಿದ್ದಾರೆ ಯಾರಿಗೆ ಸಿಗುತ್ತದೆ ಎಂಬುದು ಗೊತ್ತಿಲ್ಲ ಎಂದರು.ಪ್ರಧಾನಿ ಮೋದಿಯನ್ನು ಮುಖ್ಯಮಂತ್ರಿ ಭೇಟಿ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಕೆದಾಟು ಯೋಜನೆ ಬಗ್ಗೆ ನಮ್ಮ ಪರ ತೀರ್ಪು ಬಂದಿದೆ. ಅದಕ್ಕೆ ಕೇಂದ್ರ ಸರ್ಕಾರ ಸಹಕಾರ ಕೊಡಬೇಕಾಗುತ್ತದೆ. ಆ ವಿಚಾರದ ಬಗ್ಗೆಯೂ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ ಎಂದರು. ಕಬ್ಬು ಬೆಳೆ ತೀರ್ಮಾನ ಮಾಡುವಂತದ್ದು ಕೇಂದ್ರ ಸರ್ಕಾರ. 2025 -26 ಕ್ಕೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಟನ್ನಿಗೆ ಇಷ್ಟು ಬೆಲೆ ಅಂತ ತೀರ್ಮಾನ ಮಾಡಿದರೆ. ಕರ್ನಾಟಕದ ಮಟ್ಟಿಗೆ ಹೆಚ್ಚಿನ ಬೆಲೆ ಕೊಡಬೇಕಾಗುತ್ತೆ ಅಂತ ಕೇಂದ್ರದ ಮುಂದೆ ವಾದ ಇಡುವ ಸಾಧ್ಯತೆ ಇದೆ ಎಂದರು.ಎತ್ತಿನಹೊಳೆ, ಹೇಮಾವತಿ, ಕೃಷ್ಣ ಮೇಲ್ದಂಡೆ ಎತ್ತರ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಜಿಎಸ್‌ಟಿ ಕಟ್ಟುವುದರಲ್ಲಿ ಇಡೀ ದೇಶದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಜಿಎಸ್ಟಿ ಲಿ ಹೆಚ್ಚಿನ ಪಾಲು ನಮಗೆ ಸಿಗುತ್ತಿಲ್ಲ. ಅದನ್ನು ಕೂಡ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ ಎಂದರು.ಬೆಂಗಳೂರು ಮೊಲದ ಮಹಿಳೆಗೆ ಡಿಜಿಟಲ್ ಆರೆಸ್ಟ್ ಪ್ರಕರಣದ ಬಗ್ಗೆ ಮಾತನಾಡಿದ ಅವರು ಸೈಬರ್ ಕ್ರೈಂ ಇಡೀ ದೇಶದಲ್ಲಿ ಜಾಸ್ತಿಯಾಗಿದೆ. ಟೆಕ್ನಾಲಜಿ ಉಪಯೋಗಿಸಿಕೊಂಡು ಪ್ರಪಂಚಾದ್ಯಂತ ಅಪರಾಧಗಳು ನಡಿತಿವೆ. ನಮ್ಮ ದೇಶದಲ್ಲಿ ಸೈಬರ್ ಕ್ರೈಂ ಬಹಳ ಜಾಸ್ತಿ ನಡೀತಿದೆ. ಎಲ್ಲ ರಾಜ್ಯಗಳಲ್ಲೂ ನಡೀತಿದೆ. ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಒಂದು ವರ್ಷದಲ್ಲಿ ದಾಖಲಾಗಿವೆ. ಅದನ್ನು ನಿಯಂತ್ರಣ ಮಾಡಲಿಕ್ಕೆ ನಾವು ಬಹಳಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದ ಪರಮೇಶ್ವರ್ ಅಕೌಂಟ್ ಫ್ರೀಜ್ ಮಾಡಿ ಹಣ ವಾಪಸ್ ಕೊಡಿಸುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ.

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯಿಂದ 31 ಕೋಟಿ ರುಪಾಯಿಯನ್ನ ಒಂದು ವರ್ಷದಿಂದ ತೆಗೆದಿದ್ದಾರೆ. ಅವರಿಗೆ ತೊಂದರೆ ಆಗುತ್ತೆ ಅಂತ ಅವರು ಹೇಳಿಕೊಂಡಿಲ್ಲ ಈಗ ಪೊಲೀಸರು ಕೇಸ್ ತೆಗೆದುಕೊಂಡಿದ್ದಾರೆ. ವಿ ವಿಲ್ ಹಂಟ್ ಎಂದರು.ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣ ನಾಲ್ವರ ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರದಲ್ಲಿ ವಿಧ ವಿಧವಾದ ಏಜೆನ್ಸಿಗಳಿವೆ. ಎನ್ ಐಎ, ಐಬಿ, ರಾ ಇದೆ. ಇವರೆಲ್ಲರು ಕೋ ಆರ್ಡಿನೇಟ್ ನಿಂದ ಕಂಡು ಹಿಡಿಯುತ್ತಾರೆ. ಕೆಲವೊಂದು ಸಂರ್ಭದಲ್ಲಿ ಗುಮಾನಿ ಮೇಲೆ ಕೆಲವರನ್ನು ಹಿಡಿದುಕೊಂಡು ಬರುತ್ತಾರೆ. ಪ್ರೂಫ್ ಸಿಗದೇ ಇದ್ದಾಗ, ಬಿಟ್ಟು ಕಳಿಸುತ್ತಾರೆ. ಆ ರೀತಿ ಆಗಿರಬಹುದು ಅಂತ ನಾನು ಭಾವಿಸಿದ್ದೇನೆ. ಈಗ ಬೇರೆಯವರು ಸಿಕ್ಕಿದ್ದಾರಲ್ಲ. ಯಾರ್ ಮಾಡಿದ್ದಾರೊ ಅವರನ್ನು ಪೆಸಿಫಿಕ್ ಆಗಿ ಹಿಡ್ಕೊಂಡಿದ್ದಾರೆ ಎಂದರು. ಮುಂದೆ ಎಲ್ಲೆಲ್ಲಿ ಹೋಗುತ್ತೆ, ಲಿಂಕ್ ಎಲ್ಲೆಲ್ಲಿಗೆ ಬೆಳೆದಿದೆ, ಯಾರು ಇದರ ಹಿಂದೆ ಇದ್ದಾರೆ. ಇವರೆಲ್ಲ ವೈಟ್ ಕಲರ್ ಕ್ರಿಮಿನಲ್ ಗಳಾ. ಬೇರೆ ಬೇರೆ ರಾಜ್ಯದಲ್ಲೂ ಇದನ್ನು ಮಾಡಬೇಕು ಅಂತ ಸಂಚುರೂಪಿಸಿದ್ದರು ಅಂತ ಮಾಧ್ಯಮಗಳಲ್ಲಿ ನಾನು ನೋಡಿದೆ. ಅದು ಯಾರು ಅಂತ ಗೊತ್ತಾದರೆ ಮೂಲ ಯಾರು ಅಂತ ಕಂಡುಹಿಡಿಯುತ್ತಾರೆ ಎಂದರು.

ಪೊಲೀಸ್ ನೇಮಕಾತಿಯಲ್ಲಿ ಮೂರು ಪರ್ಸೆಟ್ ಕ್ರೀಡಾಪಟುಗಳಿಗೆ ಮೀಸಲು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ 180 ಜನ ನೇಮಕಾತಿಯಾಗಿದೆ. ಕಾನ್ಸಟೇಬಲ್ ಸಬ್ ಇನ್ಸಪೆಕ್ಟರ್ ಈಗಾಗಲೇ ಆಗಿದ್ದಾರೆ. ಇದನ್ನು ನಮ್ಮ ಸರ್ಕಾರವೇ ಮಾಡಿದ್ದು. ಇದು ನಿರಂತರವಾಗಿರುತ್ತದೆ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್ ಮೊದಲನೆಯದಾಗಿ ಸಚಿವ ಸಂಪುಟ ಪುನರಚನೆ ಆಗಬೇಕು. ಖಾತೆಗಳು ಬದಲಾವಣೆ ಆಗುತ್ತವೆ ಅನ್ನೋ ಸಂದರ್ಭ ಬರಬೇಕು. ನನಗೇನಾದರೂ ಪೊಲೀಸ್ ಇಲಾಖೆ ಮೇಲೆ ಕೋಪ ಇದ್ದರೆ ಬೇರೆ ಖಾತೆ ಕೇಳಬೇಕು. ಇದ್ಯಾವುದು ನಡೆದಿಲ್ಲ, ಹಾಗಾಗಿ ಏನು ನಡೆಯುವುದಿಲ್ಲ ಎಂದರು.ಪೊಲೀಸ್ ಇಲಾಖೆ ಅಂತರ್ ಜಿಲ್ಲೆ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಪತಿ ಪತ್ನಿಯರ ಪ್ರಕರಣದಲ್ಲಿ ನಿಯಮಗಳನ್ನು ಮಾಡಿದ್ದೇವೆ. ಆ ನಿಯಮದ ಅಡಿಯಲ್ಲಿ ವರ್ಗಾವಣೆ ಮಾಡಿಕೊಡುತ್ತೇವೆ. ಮಾನವೀಯತೆ ದೃಷ್ಟಿಯಿಂದ ಹೆಚ್ಚು ವರ್ಷ ಒಂದೇ ಜಿಲ್ಲೆಯಲ್ಲಿ ಇದ್ದರೆ ಅದಕ್ಕೂ ಕೆಲ ನಿಯಮಗಳಿವೆ. ಆ ನಿಯಮಗಳ ಅಡಿಯಲ್ಲಿ ಮಾಡಿಕೊಡುತ್ತಾರೆ ಎಂದರು.ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದ ಪೊಲೀಸ್ ಸ್ಪರ್ಧಿಗಳಿಗೆ ವಿಶೇಷ ಭತ್ಯೆ ಅಂತ ನಿಯಮಗಳನ್ನು ಮಾಡಿಲ್ಲ, ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಅವರು ನ್ಯಾಷನಲ್, ಇಂಟರ್ ನ್ಯಾಷಿನಲ್ ಮಟ್ಟದಲ್ಲಿ ಹೋಗಿ ಮೆಡಲ್ ತರುವುದು ದೊಡ್ಡವಿಚಾರ. ಮುಂದಿನ ದಿನಗಳಲ್ಲಿ ಪ್ರಮೋಷನ್ ಕೊಡುವಾಗ ಪರಿಗಣಿಸುತ್ತೇವೆ ಎಂದರು.

PREV

Recommended Stories

ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನ ಶಾಂತಿಯುತ
ವಲಸಿಗರಿಂದ ಗ್ರಾಮೀಣ ಭಾಗದ ಕಾರ್ಮಿಕರಿಗೂ ಸಂಕಷ್ಟ