ಒಳಮೀಸಲಾತಿ ಜಾರಿಗೊಳಿಸದೆ ಮಾದಿಗ ಸಮುದಾಯಕ್ಕೆ ಸಿಎಂ ಮೋಸ

KannadaprabhaNewsNetwork |  
Published : Sep 12, 2025, 12:06 AM IST
5644 | Kannada Prabha

ಸಾರಾಂಶ

ಸುಸೂತ್ರ ಹಾಗೂ ಶಾಶ್ವತವಾಗಿ ಬಗೆಹರಿಸಬಹುದಾದ ಒಳ ಮೀಸಲಾತಿ ವಿಷಯವನ್ನು ಸಿಎಂ ವಿನಾಕಾರಣ ಗೊಂದಲಕ್ಕೆ ಸಿಲುಕಿಸಿ ಮಾದಿಗ ಸಮುದಾಯಕ್ಕೆ ಮೀಸಲಾತಿ ದೊರೆಯದಂತೆ ಮಾಡಿದ್ದಾರೆ.

ಮುನಿರಾಬಾದ್:ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೀಡಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣೆವೇ ಜಾರಿಗೊಳಿಸಬೇಕೆಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.ಗುರುವಾರದಂದು ಮುನಿರಾಬಾದಿನ ಹೊರವಲಯದಲ್ಲಿ "ಒಳಮೀಸಲಾತಿ ನಂತರ ಮಾದಿಗ ಸಮುದಾಯದ ಮುಂದಿನ ನಡೆ "ಯ ವಿಶೇಷ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವರದಿ ಜಾರಿಗೊಳಿಸಲು ಮೀನಮೇಷ ಮಾಡುವ ಮೂಲಕ ಸಿಎಂ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆಂದು ದೂರಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಾಧುಸ್ವಾಮಿ ಅವರು ನೀಡಿದ ವರದಿಯನ್ನು ಈ ಸರ್ಕಾರ ಜಾರಿಗೆ ತರದೆ ನಾಗಮೋಹನ್‌ ದಾಸ್‌ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿತು. ಇದೀಗ ಈ ಸಮಿತಿ ವರದಿ ನೀಡಿದರೂ ಜಾರಿಗೊಳಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದಂತೆ ಆಗಿದೆ ಎಂದು ಕಿಡಿಕಾರಿದರು.

ಕೊನೆಯ ಇನಿಂಗ್ಸ್‌:

ಸಿದ್ದರಾಮಯ್ಯ ಅವರು ರಾಜಕೀಯ ಜೀವನ ಕೊನೆ ಇನಿಂಗ್ಸ್‌ನಲ್ಲಿದ್ದಾರೆ. ಒಂದು ವೇಳೆ ನಾಗಮೋಹನ್ ದಾಸ್ ವರದಿ ಜಾರಿಗೊಳಿಸಿದ್ದೆ ಆದರೆ ಅವರ ಪ್ರತಿಷ್ಠೆ ಮತ್ತಷ್ಟು ಹೆಚ್ಚಲಿದೆ ಎಂದರು.

ಜಾತಿಗಣತಿ ತಿರಸ್ಕರಿಸಿ:

ಮಾಜಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಹಿಂದೂಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ನ್ಯಾಯಾಲಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೀಸಲಾತಿ ನೀಡಬೇಕೆಂದು ಆದೇಶಿಸಿದರೂ ಸಿಎಂ ವಿನಕಾರಣ ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಇದರ ನಡುವೆ ಸೆ.22ರಿಂದ ಸಾಮಾಜಿಕ ಸ್ಥಿತಿಗತಿ ಅರಿತುಕೊಳ್ಳಲು ಜಾತಿ ಗಣತಿ ಆರಂಭಿಸಿದೆ. ಇದನ್ನು ಜನರು ತಿರಸ್ಕರಿಸಬೇಕೆಂದು ಮನವಿ ಮಾಡಿದರು.

ಸುಸೂತ್ರ ಹಾಗೂ ಶಾಶ್ವತವಾಗಿ ಬಗೆಹರಿಸಬಹುದಾದ ಒಳ ಮೀಸಲಾತಿ ವಿಷಯವನ್ನು ಸಿಎಂ ವಿನಾಕಾರಣ ಗೊಂದಲಕ್ಕೆ ಸಿಲುಕಿಸಿ ಮಾದಿಗ ಸಮುದಾಯಕ್ಕೆ ಮೀಸಲಾತಿ ದೊರೆಯದಂತೆ ಮಾಡಿದ್ದಾರೆ ಎಂದು ದೂರಿದರು.

ಈ ವೇಳೆ ಮಾಜಿ ಶಾಸಕ ಬಸವರಾಜ ದಢೇಸೂಗೂರು, ನಿವೃತ್ತ ಐಎಎಸ್ ಅಧಿಕಾರಿಗಳಾದ ಲಕ್ಷ್ಮೀ ನಾರಾಯಣ ಹಾಗೂ ಅನಿಲಕುಮಾರ, ಹನುಮಂತಪ್ಪ ಬಳ್ಳಾರಿ, ಗಣೇಶ ಹೊರತಟ್ನಾಳ ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ