ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಕಾರಿ

KannadaprabhaNewsNetwork |  
Published : Sep 12, 2025, 12:06 AM IST
ಮಧುಗಿರಿಯ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಶಾಸಕ ಕೆ.ಎನ್.ರಾಜಣ್ಣ ಧ್ವಜಾರೋಹಣ ಮತ್ತು ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು.ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಂಗಪ್ಪ,ಜಿ.ಆರ್.ರಮೇಶ್‌ ,ರಂಗಧಾಮಯ್ಯ,ರಂಗಶ್ಯಾಮಣ್ಣ.,ಎ.ರಾಮಚಂದ್ರಪ್ಪ,ನಾ.ಮಹಾಲಿಂಗೇಶ್ ಇತರರು ಇದ್ದಾರೆ.  | Kannada Prabha

ಸಾರಾಂಶ

ಕ್ರೀಡೆ ಒಂದು ಅವಿಭಾಜ್ಯ ಅಂಗ, ಪಾಠ ಪ್ರವಚನಗಳ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಲು ಕ್ರೀಡೆ ಸಹಕಾರಿ ಎಂದು ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕ್ರೀಡೆ ಒಂದು ಅವಿಭಾಜ್ಯ ಅಂಗ, ಪಾಠ ಪ್ರವಚನಗಳ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಲು ಕ್ರೀಡೆ ಸಹಕಾರಿ ಎಂದು ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.

ಪಟ್ಟಣದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ತುಮಕೂರು ಮತ್ತು ಮಧುಗಿರಿ ತಾಲೂಕಿನ ಪದವಿ ಪೂರ್ವ ಕಾಲೇಜುಗಳ 2025-26ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಧ್ವಜಾರೋಹಣ ಮತ್ತು ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು.

ಓದಿನಷ್ಟೇ ಕ್ರೀಡೆಯು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ, ಕ್ರೀಡಾ ಕೂಟವು ತಾಲೂಕಿನ ಎಲ್ಲ ಪಪೂ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಕ್ಕಳು ಒಂದೇಡೆ ಒಗ್ಗೂಡುವುದರಿಂದ ನಾಡಿನ ಸಾಂಸ್ಕೃತಿಕ ವಿಚಾರವನ್ನು ಒಟ್ಟಿಗೆ ಕೂತು ಮೆಲುಕು ಹಾಕುವ ನಿಟ್ಟಿನಲ್ಲಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬಹುದು. ಸ್ನೇಹ ಸೌಹಾರ್ದತೆ ಪ್ರೀತಿ, ವಿಶ್ವಾಸ, ಗೌರವ ಸಂಪಾದನೆಗೆ ಕ್ರೀಡೆಗಳು ಅತ್ಯುತ್ತಮ ವೇದಿಕೆ ಆಟಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ನಾಯತ್ವದ ಗುಣ ಬೆಳೆಯುತ್ತದೆ ಎಂದರು.

ಕ್ರೀಡೆಯಲ್ಲಿ ಸೋಲು - ಗೆಲುವು ಸಾಮಾನ್ಯ, ಈ ಎರಡನ್ನು ಸಮನಾಗಿ ಸ್ವೀಕರಿಸುವ ಮುಕ್ತ ಮನೋಭಾವ ಕ್ರೀಡಾಪಟುಗಳು ಬೆಳಸಿಕೊಳ್ಳಬೇಕು. ಶಿಕ್ಷಕರು, ಸಾರ್ವಜನಿಕರು ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಆ ಮೂಲಕ ಜಗತ್ತಿನಲ್ಲಿ ಮಕ್ಕಳಲ್ಲಿರುವ ಶಕ್ತಿ, ಸಾಮರ್ಥ್ಯ ಬೆಳಕಿಗೆ ಬರುತ್ತದೆ ಎಂದರು.

ತಾಲೂಕು ಮಟ್ಟದಲ್ಲಿ ವಿಜೇತರಾದವರು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶಗಳಿವೆ. ಆದ್ದರಿಂದ ಕ್ರೀಡಾಪಟುಗಳು ಸ್ನೇಹ ಸೌಹಾರ್ದತೆಯಿಂದ ಆಟವಾಡಿ ಇದರ ಸದುಪಯೋಗ ಪಡಿಸಿಕೊಂಡು ಹೆಚ್ಚು ಸಾಧಕರಾಗಿ ಹೆತ್ತವರಿಗೆ, ಗುರು ಹಿರಿಯರಿಗೆ ಹಾಗೂ ನಮ್ಮ ಜಿಲ್ಲೆ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಶುಭ ಕೋರಿದರು.

ಸಮಾರಂಭದಲ್ಲಿ ಕೆಪಿಸಿಸಿ ಮೆಂಬರ್‌ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಸಿದ್ದಾಪುರ ರಂಗಶ್ಯಾಮಯ್ಯ, ಶ್ರೀ ಮಾರುತಿ ಇಂಟಿಗ್ರೇಟಡ್‌ ಫೌಂಡೇಶನ್ ಕಾರ್ಯದರ್ಶಿ ಜಿ.ಆರ್.ರಮೇಶ್, ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಪ್ರಾಥಮಿಕ ದೈಹಿಕ ಶಿಕ್ಷಣದ ಅಧ್ಯಕ್ಷ ವೆಂಕಟರಮಣಪ್ಪ, ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಕೆ.ಎನ್‌.ಶ್ರೀನಿವಾಸ್, ಪ್ರಾಂಶುಪಾಲರಾದ ಆರೀಫ್‌ಪಾಷ್‌, ಶಿವಣ್ಣ, ವೇದಮೂರ್ತಿ,ಈಶ್ವರಪ್ಪ, ಕೃಷ್ಣಮೂರ್ತಿ,ರಾಮಪ್ಪ ಹಳ್ಳಿ ತಳವಾರ್‌,ಕೊಡಿಗೇನಹಳ್ಳಿ ಸತ್ಯನಾರಾಯಣ್,ಲಕ್ಷೀಭಟ್‌, ಶಂಭುಲಿಂಗೇಶ್,ಸೌಜನ್ಯ ಸಿ.ಸಿದ್ದರಾಜು ,ಹುನುಮಂತರಾಯಪ್ಪ, ಹರೀಶ್‌, ಶ್ರೀನಿವಾಸಮೂರ್ತಿ ,ನರಸಿಂಹರಾಜು,ಗೌತಮಬುದ್ಧ ಶ್ರೀನಿವಾಸ್‌ ,ಎ.ರಾಮಚಂದ್ರಪ್ಪ, ಕಸಾಪ ಕಾರ್ಯದರ್ಶಿ ರಂಗಧಾಮಯ್ಯ, ನರಸಿಂಹಮೂರ್ತಿ ,ಉಪನ್ಯಾಸಕರ ಸಂಘದ ಜಿಲ್ಲಾಧ್ಯ ಎನ್.ಮಹಾಲಿಂಗೇಶ್‌, ಪಾರ್ವತಿ , ಶಿಕ್ಷಣಧಿಕಾರಿಗಳಾದ ಮಧುಕುಮಾರ್‌, ಯರಗಾಮಯ್ಯ, ಗುರುರಾಜು, ತಾಪಂ ಸಹಾಯಕ ನಿರ್ದೇಶಕ ಧನಂಜಯ್‌ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ