ಹಾಲಿನ ಮೇಲೆ ಬೆಲೆ ಏರಿಕೆ । ಉಚಿತ ಬಸ್ ಕೊಟ್ಟು ದರ ಡಬಲ್ ಏರಿಕೆ । ಲಿಕ್ಕರ್, ದಿನಸಿ ಪದಾರ್ಥಗಳ ಬೆಲೆ ಏರಿಕೆ
ಬೆಲೆ ಏರಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂಬರ್ ಒನ್. ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಜನರಿಗೆ ಬರೆ ಮೇಲೆ ಬರೆ ಹಾಕುತ್ತಿದ್ದಾರೆ. ಎಷ್ಟು ಭಾಗ್ಯ ಕೊಡುತ್ತಾರೋ ಅಷ್ಟು ಜನರ ಮೇಲೆ ಹೊರೆ ಹಾಕುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲಿನ ಮೇಲೆ ಬೆಲೆ ಏರಿಕೆ ಮಾಡಿದ್ದಾರೆ, ರೈತರಿಗೆ ಕೊಡಬೇಕು. ಆದರೆ ಗ್ರಾಹಕರ ಮೇಲೆ ಹಾಕುತ್ತಿದ್ದಾರೆ. ಬಸ್‌ಗೆ ಉಚಿತ ಕೊಟ್ಟು ಡಬಲ್ ದರ ಏರಿಕೆ ಮಾಡಿದ್ದಾರೆ. ಲಿಕ್ಕರ್, ದಿನಸಿ ಪದಾರ್ಥಗಳ ಮೇಲೆ ಜನರ ಮೇಲೆ ಹೊರೆ ಹಾಕಿದ್ದಾರೆ. ಕೇಂದ್ರ ಸರ್ಕಾರ ಡೀಸೆಲ್, ಪೆಟ್ರೋಲ್ ಬೆಲೆ ಏರಿಸಿದರೆ ಬೀದಿಗೆ ಬಂದು ಹೋರಾಟ ಮಾಡುವ ಕಾಂಗ್ರೆಸ್ ಈಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.ಸಾಮಾನ್ಯ ಜನರ, ಮಧ್ಯಮ ವರ್ಗದ ಪರವಾಗಿ ಬಿಜೆಪಿಯಿಂದ ಶುಕ್ರವಾರದಂದು ಬಸ್ ನಿಲ್ದಾಣ ಸರ್ಕಲ್‌ನಲ್ಲಿ ಬೆಲೆ ಏರಿಕೆ ವಿರೋಧಿ ಹೋರಾಟ ನಡೆಸಲಾಗುವುದು. ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂದು ಹೋರಾಟ ಮಾಡಿದ್ದೇವೆ ಎಂದರು.
ದ್ವೇಷದ ರಾಜಕಾರಣ ಮಾಡಬೇಡಿ, ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ವಿಷ ಜಂತು, ಎಲ್ಲಿ ಸಿಕ್ಕರೆ ಅಲ್ಲಿ ಹೊಡೆದು ಸಾಯಿಸಿ ಎಂದು ಹೇಳಿದ್ದಾರೆ. ಅವರ ಮೇಲೆ ಎಷ್ಟು ಕೇಸ್ ಹಾಕಲಾಗಿದೆ ಎಂದು ಪ್ರಶ್ನಿಸಿದ ಅವರು, ಎಸ್‌ಐಆರ್ ವಿಚಾರದಲ್ಲಿ ಸತ್ತವರ ಮತದಾನದ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದರು.
ಜೆಡಿಎಸ್ ಮುಖಂಡರು ಗೊಂದಲ ಮೂಡಿಸುತ್ತಿದ್ದಾರೆ, ಕ್ಷೇತ್ರ ಬಿಟ್ಟುಕೊಟ್ಟ ಕೆಲಸ ಮಾಡಿದವರು ನಾವು, ಕಾರ್ಯಕರ್ತರು ಗೊಂದಲ ಸೃಷ್ಟಿಸಬಾರದು ಎಂದರು.