ಸಮಾಜದಲ್ಲಿ ಆಸಿಡ್‌ ದಾಳಿ ಪರಿಣಾಮದ ಅರಿವು ಮೂಡಿಸಿ

KannadaprabhaNewsNetwork |  
Published : Nov 06, 2026, 01:15 AM IST
5ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ನಾಲ್ಸಾ ಯೋಜನೆ-ಆಸಿಡ್ ದಾಳಿಗೆ ಒಳಗಾದ ಸಂತ್ರಸ್ಥರಿಗೆ ಕಾನೂನು ಸೇವೆಗಳು-2026ರ ಕುರಿತು ಆಯೋಜಿಸಲಾಗಿದ್ದ ಕಾರ್ಯಾಗಾರವನ್ನುಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ. ಎಂ.ಎಚ್. ಅಣ್ಣಯ್ಯನವರ  ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: 2013ರಲ್ಲಿ ನ್ಯಾ. ವರ್ಮಾ ಅವರು ನೀಡಿದ ವರದಿಯಲ್ಲಿ ಪ್ರೀತಿ ಪ್ರೇಮದ ವೈಮನಸ್ಸು ಹಾಗೂ ಸಿಟ್ಟಿನಿಂದ ಆಸಿಡ್ ದಾಳಿಗೆ ಬಲಿಯಾಗುತ್ತಾರೆಂದು ಹೇಳಲಾಗಿದೆ. ಆಸಿಡ್ ದಾಳಿ ಸಮಾಜದಲ್ಲಿ ಅತ್ಯಂತ ಘೋರ ಘಟನೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ. ಎಂ.ಎಚ್. ಅಣ್ಣಯ್ಯನವರ ಹೇಳಿದರು

ರಾಮನಗರ: 2013ರಲ್ಲಿ ನ್ಯಾ. ವರ್ಮಾ ಅವರು ನೀಡಿದ ವರದಿಯಲ್ಲಿ ಪ್ರೀತಿ ಪ್ರೇಮದ ವೈಮನಸ್ಸು ಹಾಗೂ ಸಿಟ್ಟಿನಿಂದ ಆಸಿಡ್ ದಾಳಿಗೆ ಬಲಿಯಾಗುತ್ತಾರೆಂದು ಹೇಳಲಾಗಿದೆ. ಆಸಿಡ್ ದಾಳಿ ಸಮಾಜದಲ್ಲಿ ಅತ್ಯಂತ ಘೋರ ಘಟನೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ. ಎಂ.ಎಚ್. ಅಣ್ಣಯ್ಯನವರ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಾಲ್ಸಾ ಯೋಜನೆ-ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಕಾನೂನು ಸೇವೆಗಳು-2026ರ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ವರದಕ್ಷಿಣೆ ಕಿರುಕುಳ, ಆಸ್ತಿ ವಿವಾದ, ಪ್ರೀತಿ-ಪ್ರೇಮ ಎಂಬ ಹಲವಾರು ಕಾರಣಗಳಿಂದ ಆಸಿಡ್ ದಾಳಿಗೆ ಒಳಗಾಗುತ್ತಾರೆ. ಆಸಿಡ್ ದಾಳಿಗೆ ಒಳಗಾದ ಮಹಿಳೆಯರು ತುಂಬಾ ನೋವು ಪಡುತ್ತಾರೆ. ಒಂದೊಂದು ಬಾರಿ ವೈದ್ಯರು ನೀಡುವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಇದರಿಂದ ಅವರ ಕುಟುಂಬದವರು ಸಹ ನೋವು ಅನುಭವಿಸುತ್ತಾರೆ.

ಮುಖ ಹಾಗೂ ಕೈಗಳಲ್ಲಿರುವ ಸುಟ್ಟ ಗಾಯಗಳನ್ನು ನೋಡಿ ಜೀವನಪರ್ಯಂತ ನೋವು ಅನುಭವಿಸಬೇಕಾಗುತ್ತದೆ ಹಾಗೂ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆಸಿಡ್ ದಾಳಿ ಮಾಡುವವರಿಗೆ ಕಾನೂನಿನಲ್ಲಿರುವ ಶಿಕ್ಷೆಯ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸರಿಂದ ಮಾಹಿತಿ ಪಡೆದುಕೊಂಡು ಸಮಾಜದಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಮಾತನಾಡಿ, ಅನಾದಿಕಾಲದಿಂದ ಇಲ್ಲಿಯವರೆಗೂ ಸಹ ದುರ್ಬಲರು, ಅಸಹಾಯಕರು ಹಾಗೂ ಮಹಿಳೆಯರ ಮೇಲೆ ದಾಳಿಗಳಾಗುತ್ತಿವೆ, ಮಹಿಳೆಯರ ಮೇಲೆ ನಡೆಯುವ ಆಸಿಡ್ ದಾಳಿ ನಾಗರೀಕರ ಸಮಾಜದ ಅವಮಾನಕರ ಘಟನೆಯಾಗಿದೆ. ಸಮಾಜದಲ್ಲಿರುವ ಯಾರೊಬ್ಬರೂ ಕೂಡ ಈ ದಾಳಿಗೆ ಒಳಗಾಗಬಾರದು, ಆಸಿಡ್ ದಾಳಿ ಮಾಡಿದವರಿಗೆ ಕನಿಷ್ಠ 10ವರ್ಷ ಜೈಲು ಶಿಕ್ಷ ಗರಿಷ್ಠ ಜೀವಾವಧಿ ಶಿಕ್ಷೆ ಅದರೊಂದಿಗೆ ದಂಡ ವಿಧಿಸಲಾಗುವುದು, ಆಸಿಡ್ ಎಸೆಯಲೆತ್ನಿಸಿದರೂ 5 ರಿಂದ 7 ವರ್ಷಗಳ ಜೈಲು ಶಿಕ್ಷೆ ಇದೆ ಎಂದರು.

ಈ ರೀತಿಯಾಗಿ ಆಸಿಡ್ ದಾಳಿ ಮಾಡುವವರಿಗೆ ಕಾನೂನಿನ ಅಡಿ ಕಠಿಣ ಶಿಕ್ಷೆ ನೀಡಲಾಗುವುದು, ಮಾತ್ರವಲ್ಲ ಆರೋಪಿಯಿಂದಲೇ ಸಂತ್ರಸ್ತೆಯ ಚಿಕಿತ್ಸಾ ವೆಚ್ಚ ವಸೂಲಿ ಮಾಡಬೇಕು. ಮುಖ್ಯವಾಗಿ ಆಸಿಡ್ ಖರೀದಿಸುವವರ ವಿಳಾಸ, ಗುರುತು ಪತ್ತೆ ಮಾಡಿ ಮಾತ್ರ ನೀಡಬೇಕು ಎಂದು ನ್ಯಾ. ವರ್ಮ ವರದಿಯಲ್ಲಿ ತಿಳಿಸಲಾಗಿದೆ ಇಂದು ನಾಗರೀಕರ ಸಮಾಜ ಹಾಗೂ ವೈಜ್ಞಾನಿಕ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣದಿಂದ ಎಲ್ಲರೂ ಜಾಗೃತರಾಗಬೇಕು, ಆಸಿಡ್ ದಾಳಿಗಳಂತ್ತಹ ಘನಘೋರ ತಪ್ಪುಗಳನ್ನು ಎಸಗದೇ ಉತ್ತಮ ಸಮಾಜ ಕಟ್ಟಬೇಕು ಎಂದು ತಿಳಿಸಿದರು.

ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸಿ.ತಮ್ಮಣ್ಣ, ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿನ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಕರಾದ ಡಾ.ರಮ್ಯ ದೀಪ್ತಿ, ಚನ್ನಪಟ್ಟಣ ಪುರ ವೃತ್ತ ಪೊಲೀಸ್ ಠಾಣೆಯ ವೃತ್ತ ಪೊಲೀಸ್ ನಿರೀಕ್ಷಕ ಶಿವಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಆಸಿಡ್ ದಾಳಿಯ ಕುರಿತು ಉಪನ್ಯಾಸ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪಿ.ಆರ್.ಸವಿತಾ, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಧಿಕಾರಿ ಡಾ.ಕೆ.ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಪಿಎಲ್‌ಒಗಳು ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

5ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಪಂ ಸಭಾಂಗಣದಲ್ಲಿ ನಾಲ್ಸಾ ಯೋಜನೆ-ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಕಾನೂನು ಸೇವೆಗಳು-2026ರ ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ. ಎಂ.ಎಚ್. ಅಣ್ಣಯ್ಯನವರ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ