ಪಾವಗಡಕ್ಕೆ ಸಿಎಂ ಕೊಡುಗೆ ಶೂನ್ಯ: ತಿಮ್ಮರಾಯಪ್ಪ

KannadaprabhaNewsNetwork |  
Published : Jul 20, 2025, 01:23 AM ISTUpdated : Jul 20, 2025, 01:24 AM IST
ಫೋಟೋ 19ಪಿವಿಡಿ1ಸಿಎಂ ಕಾರ್ಯಕ್ರಮದ ನಿಮಿತ್ತ ತಾಲೂಕು ಪ್ರಗತಿ ಶೂನ್ಯ ಎಂದು ಆರೋಪಿಸಿ ತಾಲೂಕು ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್‌ ಮಾತನಾಡಿದರು. | Kannada Prabha

ಸಾರಾಂಶ

ತಾಲೂಕಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೊಡುಗೆ ಶೂನ್ಯವಾಗಿದ್ದು, ಅವರನ್ನು ಪಾವಗಡದ ಭಗೀರಥ ಎಂದು ಬಣ್ಣಿಸಲು ಹೇಗೆ ಸಾಧ್ಯ ಎಂದು ಮಾಜಿ ಶಾಸಕ ಕೆ.ಎಂ. ತಿಪ್ಪರಾಯಪ್ಪ ಪ್ರಶ್ನಿಸಿದ್ದಾರೆ.

ಕನ್ನಡಪ್ರಭವಾರ್ತೆ ಪಾವಗಡ

ತಾಲೂಕಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೊಡುಗೆ ಶೂನ್ಯವಾಗಿದ್ದು, ಅವರನ್ನು ಪಾವಗಡದ ಭಗೀರಥ ಎಂದು ಬಣ್ಣಿಸಲು ಹೇಗೆ ಸಾಧ್ಯ ಎಂದು ಮಾಜಿ ಶಾಸಕ ಕೆ.ಎಂ. ತಿಪ್ಪರಾಯಪ್ಪ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ 21ರಂದು ತುಂಗಭದ್ರಾ ಯೋಜನೆಯ ಕುಡಿಯುವ ನೀರು ಯೋಜನೆಯ ಪೂರೈಕೆಗೆ ಚಾಲನೆ ನೀಡಲು ಸಿಎಂ ಬರುತ್ತಿದ್ದಾರೆ. 2.350ಕೋಟಿ ವೆಚ್ಚದ ತುಂಗಭದ್ರಾ ಕುಡಿಯುವ ನೀರು ಯೋಜನೆ ಅನುಷ್ಠಾನವಾಗಿ 5ವರ್ಷ ಕಳೆದಿದೆ. ಯೋಜನೆಯ ನೀರು ಲೀಕೆಜ್‌ ಅಗುತ್ತಿದೆ. ಕೇಂದ್ರ ಸರ್ಕಾರದ ಜೆಜೆಎಂ ಪೈಪ್‌ ಲೈನ್‌ ಕಾಮಗಾರಿ ಅಳವಡಿಕೆ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಯ ಹೆಸರಿನಲ್ಲಿ ಸಾಕಷ್ಟು ಹಣ ದುರುಪಯೋಗವಾಗುತ್ತಿದೆ. ಸರ್ಕಾರದ ನಿಯಮನುಸಾರ ಪ್ರಗತಿ ಕಂಡಿಲ್ಲ ಎಂದು ಆರೋಪಿಸಿದರು.

ತಾಲೂಕಿನಲ್ಲಿ ನಿರೋದ್ಯೋಗ ಸಮಸ್ಯೆ ತಾಂಡವಾಗುತ್ತಿದ್ದು, ವಿಶ್ವವೇ ಗಮನ ಸೆಳೆದ ಸೋಲಾರ್‌ ಪಾರ್ಕ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ವಂಚನೆಯಾಗಿದೆ. ಸರ್ಕಾರದ ವಿವಿಧ ಯೋಜನೆ ಅಡಿ ತಾಲೂಕಿನ ಪ್ರಗತಿ ಕುಂಠಿತವಾಗಿದ್ದು ಸಮರ್ಪಕ ರೀತಿಯಲ್ಲಿ ಯಾವುದು ಅಭಿವೃದ್ಧಿ ಸಾಧ್ಯವಾಗಿಲ್ಲ. ಸಿಎಂ ಸಿದ್ದರಾಮಯ್ಯ ಭರದ ನಾಡಿನ ಭಗೀರಥ ಎಂತಾ ಹೇಗೆ ಹೇಳಲು ಸಾಧ್ಯವಿದೆ. ಅವರಿಂದ ಯಾವುದೇ ಪ್ರಗತಿ ಕಂಡಿಲ್ಲವೆಂದು ದೂರಿದರು.

ತಾಲೂಕು ಜೆಡಿಎಸ್‌ ರೈತ ಘಟಕದ ಅಧ್ಯಕ್ಷ ಕೆಂಚಗಾನಹಳ್ಳಿಯ ಗಂಗಾಧರ್‌ ನಾಯ್ಡು ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರಿಂದ ತಾಲೂಕು ಪ್ರಗತಿ ಕಂಡಿಲ್ಲ. ಸೋಲಾರ್‌ ಪಾರ್ಕ್‌ಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳಿವೆ. ತಾಲೂಕಿನಲ್ಲಿ ಜೆಡಿಎಸ್‌ ಕಾರ್ಯಕರ್ತರ ಮೇಲೆ ಸುಳ್ಳುಕೇಸು ಹಾಕಿಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವಲ್ಲಿ ಸ್ಥಳೀಯ ಶಾಸಕರು ನಿರತರಾಗಿದ್ದಾರೆ ಎಂದು ದೂರಿದರು.

ತಾಲೂಕು ಜೆಡಿಎಸ್‌,ಯುವ ಘಟಕದ ಅಧ್ಯಕ್ಷ ನೆರಳೇಕುಂಟೆ ಭರತ್‌ಕುಮಾರ್‌ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ದಬ್ಳಾಳಿಕೆಯಿಂದ ಜೆಡಿಎಸ್‌ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಇಲ್ಲಿನ ಅಧಿಕಾರಿ ವರ್ಗ ಸಾಮಾಜಿಕ ನ್ಯಾಯದತ್ತ ಒಲವು ತೋರಿಸುವ ಬದಲು ಸ್ಥಳೀಯ ಆಡಳಿತದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ಬದಲಾಗಬೇಕು.ಇದೇ ರೀತಿ ಮುಂದುವರಿದರೆ ಮುದಿನ ದಿನಗಳಲ್ಲಿ ಜೆಡಿಎಸ್‌ ವತಿಯಿಂದ ಬೃಹತ್‌ ಪ್ರತಿಭಟನೆಗೆ ಸಜ್ಜಾಗುವುದಾಗಿ ಎಚ್ಚರಿಸಿದರು.

ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ, ಗೌರವಾಧ್ಯಕ್ಷ ರಾಜಶೇರಪ್ಪ,ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್‌, ಪುರಸಭೆಯ ಮಾಜಿ ಸದಸ್ಯ ಮನುಮಹೇಶ್‌,ಕಾವಲಗೆರೆ ರಾಮಾಂಜಿನಪ್ಪ ತಿರುಮಣಿಯ ಬಾಲು ಇತರೆ ಅನೇಕ ಮಂದಿ ತಾಲೂಕು ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ